ಚಿಕ್ಕಬಳ್ಳಾಪುರ :
ತಾಲೂಕಿನ ಶ್ರೀನಿವಾಸ ಸಾಗರ ಬಳಿ ಇರುವ ದೇವಿ ಗಂಗಮ್ಮ ವಿಗ್ರಹದ ಮೇಲೆ ಪ್ರವಾಸಕ್ಕೆ ಬಂದಿದ್ದ ಅನ್ಯ ಧರ್ಮೀಯ ಮಹಿಳೆಯರು ಕಾಲುಗಳನ್ನು ಇಟ್ಟು ಅನುಚಿತವಾಗಿ ವರ್ತನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯಾಗಿದ್ದು ಕ್ರಮವಹಿಸಬೇಕೆಂದು ಬಿಜೆಪಿ ಮುಖಂಡರು ಎಸ್ಪಿಗೆ ದೂರು ನೀಡಲಾಗಿದೆ.
ಎಸ್ಪಿ ಕಚೇರಿಗೆ ತೆರಳಿದ ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರಗಳನ್ನು ತೋರಿಸಿ ಕ್ರಮವಹಿಸಿ ಎಂದು ಆಗ್ರಹಿಸಿದ್ದಾರೆ. ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಕೃತ್ಯಕ್ಕೆ ಕಾರಣರಾದವರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಹಾಗೂ ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆ ಗಳು ಹಿಂದೂ ವಿಗ್ರಹಗಳಿಗೆ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಹಿಂದೂ ಹಿತ ರಕ್ಷಣಾ ವೇದಿಕೆ ಮುಖಂಡರು ಹಾಗೂ ಕಾರ್ಯಕರ್ತ ರೊಂದಿಗೆ ಮನವಿ ಪತ್ರವನ್ನು ನೀಡಲಾಯಿತು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬಿಜೆಪಿ ಮುಖಂಡ ಸಂದೀಪ್ ಬಿ ರೆಡ್ಡಿ, ಪೋಶಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶೋಕ್, ಬಿಜೆಪಿ ಮಾಧ್ಯಮ ಸಂಚಾಲಕ ವಿ.ಮಧು ಚಂದ್ರ,ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿಗಳು ಗೌರಿಶಂಕರ್, ಮಾಜಿ ಜಿಲ್ಲಾಧ್ಯಕ್ಷ ಡಾ. ಬಿ.ವಿ ಮಂಜುನಾಥ್ ಜಿಲ್ಲಾ ಉಪಾಧ್ಯಕ್ಷರು ಚಂದ್ರಶೇಖರ್ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ , ಜಿಲ್ಲಾ ಸಹ ಕಾರ್ಯದರ್ಶಿ ಉಪೇಂದ್ರ, ದಯಾನಂದ ಜೀ , ಮಾದೇಶ್ ಹಿಂದೂ ಜಾಗರಣ ವೇದಿಕೆಯ ಸ್ವಾಗತ್ , ರವಿ , ಶಿವು ಕುಮಾರ್ ಬಾಲಾಜಿ , ಹರೀಶ್, ಶ್ರೀನಿವಾಸ ಸಾಗರದ ದೇವಾಲಯದ ಅರ್ಚಕರಾದ ಮಧು ಸುಧನ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
