ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

ಬೆಂಗಳೂರು:
Public Holidays In 2022 : ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

                                           ರಾಜ್ಯ ಸರ್ಕಾರದಿಂದ  2022ನೇ ಸಾಲಿಗೆ ಸಾರ್ವತ್ರಿಕ  ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2022ರಲ್ಲಿ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳು ಸೇರಿದಂತೆ ರಜೆಗಳ ಪಟ್ಟಿ, ಈ ಕೆಳಗಿನಂತಿದೆ.

 

  

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ  ಸರ್ಕಾರದ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು, ಆರ್ ಬಿ ಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅವರಿಗೆ ಪತ್ರದಲ್ಲಿ ತಿಳಿಸಿದ್ದು, 2022ನೇ ಸಾಲಿಗೆ ನೆಗೋಷಿಯೆಬಲ್ ಇನ್ಸ್ ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ರಜೆಗಳನ್ನು ಘೋಷಿಸಬೇಕಾಗಿರುತ್ತದೆ. ಆದುದರಿಂದ, ಘೋಷಿಸಬೇಕಾದ ರಜೆಯ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಿ, ಇದರೊಂದಿಗೆ ಲಗತ್ತಿಸಿದೆ. ಪ್ರತಿ ವರ್ಷದಂತೆ ದಿನಾಂಕ 01-04-2022ರಂದು ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ ಎಂದು ನಮೂದಿಸಲಾಗಿದೆ.

ಮುಂದುವರೆದು, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ಗಳಿಗೆ ರಜೆಯಿರುವುದರಿಂದ ಸದರಿ ದಿನಗಳಿಗೆ ನೆಗೋಷಿಯೆಬಲ್ ಇನ್ಸ್ ಸ್ಟ್ರುಮೆಂಟ್ ಕಾಯ್ದೆಯಡಿ ರಜೆ ಘೋಷಿಸುವುದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಹಾಗೂ ಇದರೊಂದಿಗೆ ಲಗತ್ತಿಸಿರುವ ಕರಡು ಅಧಿಸೂಚನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ನೆಗೋಷಿಯೆಬಲ್ ಇನ್ಸ್ ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ಘೋಷಿಸಬೇಕಾದ ರಜೆಗಳ ಪಟ್ಟಿಯನ್ನು ತಯಾರಿಸಿ, ತುರ್ತಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಕೋರಲು ನಿರ್ದೇಶಿಸಿದ್ದಾರೆ.

2022ರ ಸಾಲಿಗೆ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿ 

  • ದಿನಾಂಕ 15-01-2022 – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
  • ದಿನಾಂಕ 26-01-2022 – ಗಣರಾಜ್ಯೋತ್ಸವ ದಿನ
  • ದಿನಾಂಕ 01-03-2022 – ಮಹಾ ಶಿವರಾತ್ರಿ
  • ದಿನಾಂಕ 02-04-2022 – ಉಗಾದಿ
  • ದಿನಾಂಕ 14-04-2022 – ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
  • ದಿನಾಂಕ 15-04-2022 – ಗುಡ್ ಪ್ರೈಡೆ
  • ದಿನಾಂಕ 03-05-2022 – ಬಸವ ಜಯಂತಿ, ಅಕ್ಷಯ ತೃತೀಯ, ಕುತುಬ್ ಇ ರಂಜಾನ್
  • ದಿನಾಂಕ 09-08-2022 – ಮೋಹರಂ ಕೊನೆಯ ದಿನ
  • ದಿನಾಂಕ 15-08-2022 – ಸ್ವಾತಂತ್ರ್ಯ ದಿನಾಚರಣೆ
  • ದಿನಾಂಕ 31-08-2022 – ವಿನಾಯಕ ಚತುರ್ಥಿ
  • ದಿನಾಂಕ 04-10-2022 – ಮಹಾನವಮಿ, ಆಯುಧ ಪೂಜಾ
  • ದಿನಾಂಕ 05-10-2022 – ವಿಜಯ ದಶಮಿ
  • ದಿನಾಂಕ 24-10-2022 – ನರಕ ಚತುರ್ಥಿ
  • ದಿನಾಂಕ 26-10-2022 – ಬಲಿ ಪಾಡ್ಯಮಿ, ದೀಪಾವಳಿ
  • ದಿನಾಂಕ 01-11-2022 – ಕನ್ನಡ ರಾಜ್ಯೋತ್ಸವ
  • ದಿನಾಂಕ 11-11-2022 – ಕನಕದಾಸ ಜಯಂತಿ

ಈ ಮೇಲ್ಕಂಡ ಪಟ್ಟಿಯಲ್ಲಿ ದಿನಾಂಕ 01-05-2022ರ ಕಾರ್ಮಿಕ ದಿನ, ದಿನಾಂಕ 10-07-2022ರ ಬಕ್ರಿದ್, ದಿನಾಂಕ 25-09-2022ರ ಮಹಾಲಯ ಅಮವಾಸೆ, ದಿನಾಂಕ 02-10-2022ರ ಗಾಂಧಿ ಜಯಂತಿ, ದಿನಾಂಕ 09-10-2022ರ ಮಹರ್ಷಿ ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಮತ್ತು ದಿನಾಂಕ 25-12-2022ರ ಕ್ರಿಸ್ ಮಸ್ ರಜೆಗಳನ್ನು ಸೇರಿಸಿಲ್ಲ. ಯಾಕೆಂದ್ರೇ ಈ ಎಲ್ಲಾ ದಿನಗಳು ಭಾನುವಾರದಂದು ಬರಲಿದೆ ಎಂಬುದಾಗಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap