ಟಿಕೆಟ್‌ ಕೈ ತಪ್ಪುವ ಭೀತಿಯಲ್ಲಿ ಅರವಿಂದ ಲಿಂಬಾವಳಿ….!

ಬೆಂಗಳೂರು :

      ರಾಜ್ಯ ಬಿಜೆಪಿಯಲ್ಲಿ ಮೊದಲನೆ ಪಟ್ಟಿ ನಂತರ ಒಂದೇ ಸಾರಿಗೆ ಮಲಗಿದ್ದ ಶಾಸಕರೆಲ್ಲಾ ಗಾಬರಿಗೊಂಡು ಎದ್ದಿದ್ದಾರೆ ಇದಕ್ಕೆ ಕಾರಣ ಮೊದಲನೆ ಪಟ್ಟಯಲ್ಲಾದ ಗುರುತರ ಬದಲಾವಣೆಗಳು , ಅವುಗಳೇನು ಎಂದರೆ ಕೆಲ ಕೆಲಸ ಮಾಡದ , ವಯಸ್ಸಾದ , ಹಿರಿಯರು, ವಿವಾದಿತ , ಆಪಾದಿತ ಇನ್ನು ಮುಂತಾದ ನಕಾರಾತ್ಮಕ ವಿಷಯಗಳಲ್ಲಿ ಗುರುತಿಸಿಕೊಂಡಿದ್ದವರಿಗೆ ಟಿಕೆಟ್‌ ನಿರಾಕರಿಸಿ ಅವರ ಜಾಗಕ್ಕೆ ಹೊಸ ಮುಖಗಳನ್ನು ಮುಲಾಜಿಲ್ಲದೆ ಹಾಕಿರುವುದು .

     ಇನ್ನು ಹೈಕಮಾಂಡ್‌ ನ ಈ ಕೆಲಸ ಕೆಲವರಿಗೆ ಸಿಹಿ ಆದರೆ ಇನ್ನು ಕೆಲವರಿಗೆ ಕಹಿ ಎನ್ನಲಾಗಿದೆ.ಇನ್ನು ಯಾವಾಗಲೋ ಗೆದ್ದಾಗ ಅಥವಾ ವಿಶ್ವಾಸಕ್ಕೆಂದು ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡುತ್ತಿದ್ದ ನಾಯಕರು ಮೊದಲ ಪಟ್ಟಿಯಲ್ಲಿನ ಬದಲಾವಣೆ ಕಂಡು ಹೆದರಿರುವುದಂತು ನಿಜ , ಇವರು ಜನತಾ ಜನಾರ್ದನನ ಕಂಡು ಹೆದರಲಿಲ್ಲ ಆದರೆ ಮತ್ತೆ ಪದವಿ ಸಿಗುವುದಿಲ್ಲ ಎಂದು ಹೆದರುತ್ತಿದ್ದಾರೆ, ಇನ್ನು ಈ ರೀತಿ ಆಡುವ ನಾಯಕರು ಅಧಿಕಾರದಲ್ಲಿದಾಗ ಜನರನ್ನು ಮರೆಯುತ್ತಾರೆ ಮತ್ತು ಅಧಿಕಾರಕ್ಕಾಗಿ ಎಲ್ಲವನ್ನೂ ಮರೆತು ಬಿಡುವಂತೆ ಅಂಗಲಾಚುತ್ತಾರೆ.   

     ಮಹದೇವಪುರದ ಹಾಲಿ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

      ಇನ್ನು ಲಂಚ ಪಡೆದ ಪ್ರಕರಣದಲ್ಲಿ ಜೈಲು ಪಾಲಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತವಾಗಿದ್ದು, ಈ ಕ್ಷೇತ್ರದಲ್ಲಿ ಅವರ ಪುತ್ರ ಮಲ್ಲಿಕಾರ್ಜುನ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಕೂಡ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap