ಬೆಂಗಳೂರು:
ಇಂದಿನಿಂದ ನೂತನ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸೀಮಿತ ಓಡಾಟ ಅರಂಭಿಸಲಿವೆ. ಆಗಸ್ಟ್ 10 ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮಾರ್ಗದ ಮೆಟ್ರೋ ಲೈನ್ ಉದ್ಘಾಟನೆ ಮಾಡಿದ್ದರು. ಇಂದಿನಿಂದ ಸಾರ್ವಜನಿಕರ ಪ್ರವೇಶ ನೀಡುವುದಾಗಿ ಬಿಎಂಆರ್ಸಿಎಲ್ ಪ್ರಕಟಿಸಿದೆ. ಸಿಲ್ಕ್ ಬೋರ್ಡ್‌ನ ಟ್ರಾಫಿಕ್ ಸಮಸ್ಯೆಯಿಂದ ನೊಂದು ಬೆಂದಿದ್ದ ಬೆಂಗಳೂರಿಗರಿಗೆ ಇದು ತುಸು ನಿರಾಳ ನೀಡಲಿದೆ. ಇದರ ಟಿಕೆಟ್ ದರಗಳು ಮತ್ತಿತರ ವಿವರಗಳು ಇಲ್ಲಿವೆ.
ಇಂದಿನಿಂದ ಯೆಲ್ಲೋ ಮಾರ್ಗದ ರೈಲು ಸಾರ್ವಜನಿಕರಿಗೆ ಲಭ್ಯವಿರಲಿದೆ. ಇಂದು ಬೆಳಗ್ಗೆ 6:30ರಿಂದ ಸಂಚಾರ ಶುರುವಾಗಿದೆ. ಒಂದು ದಿಕ್ಕಿನಲ್ಲಿ 35 ನಿಮಿಷಗಳ ಸಂಚಾರ ಸಮಯ ಇದ್ದು, ಹಳದಿ ಮಾರ್ಗ ಒಟ್ಟು 16 ಮೆಟ್ರೋ ನಿಲ್ದಾಣಗಳನ್ನ ಹೊಂದಿದೆ. ಡೆಲ್ಟಾ ಎಲೆಕ್ಟ್ರಾನಿಮ್ ನಿಂದ ಬೊಮ್ಮಸಂದ್ರದವರೆಗೂ ಮೆಟ್ರೋ ಸಂಚಾರ ನಡೆಸಲಿದೆ. ರಾತ್ರಿ 11:15ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಭಾನುವಾರದಂದು ಬೆಳಗ್ಗೆ 6:30ರ ಬದಲು 7 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ.
15 ರೈಲುಗಳ ಪೈಕಿ ಸದ್ಯ ಮೂರು ರೈಲುಗಳು ಲಭ್ಯಸದ್ಯದ 20-25 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ಸಾಧ್ಯತೆ ಇದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸೋ ನಿರೀಕ್ಷೆ ಇದ್ದು, ರೈಲುಗಳ ಸಂಖ್ಯೆ ಹೆಚ್ಚಾದ್ರೆ ಪ್ರತಿ ದಿನ 8 ಲಕ್ಷ ಮಂದಿ ಪ್ರಯಾಣಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣದ ನಡುವಿನ ಪ್ರಯಾಣದ ದರ 60 ರೂಪಾಯಿ ಇರಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.








