ಗುಬ್ಬಿ :
ತಾಲ್ಲೂಕಿನ ಸಿ.ಎಸ್.ಹೊಬಳಿಯ ಕೆಲವು ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದ ಹಿನ್ನಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಚರಣೆ ಮಾಡಿದರು ಸಹ ಕೆಲ ಮದ್ಯ ಮಾರಾಟ ಗಾರು ಪೊಲೀಸರ ಕಣ್ತಪ್ಪಿಸಿ ಮದ್ಯ ಮಾರಾಟ ಮಾಡುತ್ತಿದ್ದರು. ಇದಕ್ಕೆ ಇತಿ ಹಾಡಲು ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮ ಮಧ್ಯೆ ತಡೆಗಟ್ಟಲು ಮುಂದಾಗಿರುವ ಸಿ.ಎಸ್. ಪುರ ಪೊಲೀಸ್ ಠಾಣೆಯ ಪಿ ಎಸ್ ಐ ಸೋಮಶೇಖರ್ ಮತ್ತು ಸಿಬ್ಬಂದಿ ವರ್ಗದವರು ಸಿ.ಎಸ್. ಪುರ ಹೋಬಳಿಯ ಗದ್ದೆಹಳ್ಳಿ ಮತ್ತು ಕಾಳೇನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದ ಅಡ್ಡೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ಸಂಗ್ರಹಿಸಿ ದ್ದ ವಿವಿಧ ಬಗೆಯ ಮಧ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಹಿಳೆಯರ ಮನವಿಗೆ ಸ್ಪಂದನೆ ನೀಡಿದ ಪಿಎಸ್‍ಐ. ಗ್ರಾಮದಲ್ಲಿ ಕುಡಿತದ ಹಾವಳಿಯಿಂದ ಕುಟುಂಬದ ಲ್ಲಿ ಸಾಕಷ್ಟು ಕಲಹಗಳು.ನೆಮ್ಮದಿ ಜೀವನವಿಲ್ಲದೆ ಕುಡಿತದ ಚಟಕ್ಕೆ ದಾಸರಾಗುವ ತಮ್ಮ ಗಂಡದಿರು ನಿತ್ಯ ಸಹ ಕುಡಿದು ಗಲಾಟೆ ಮಾಡುವುದರಿಂದ ಮನೆಯಲ್ಲಿ ಆಶಾಂತಿ ವಾತಾವರಣ ಸೃಷ್ಟಿ ಯಾದ ಹಿನ್ನಲೆಯಲ್ಲಿ ಸ್ಥಳೀಯ ಮಹಿಳೆಯರು ಗ್ರಾಮಗಳಲ್ಲಿ ಕುಡಿತದ ಹಾವಳಿ ನಿಯಂತ್ರಣಕ್ಕೆ ಹಾಗೂ ಅಕ್ರಮ ಮಧ್ಯ ಮಾರಾಟದ ಬಗ್ಗೆ ಸಿ.ಎಸ್.ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಕ್ರಮ ಮಧ್ಯತಡೆಯುವ ಸಂಕಲ್ಪ ಮಾಡಿದ ಪಿ ಎಸ್ ಐ ಸೋಮಶೇಖರ್ ಮತ್ತು ಸಿಬ್ಬಂದಿ ವರ್ಗದವರು ಸಿ.ಎಸ್.ಪುರ ಹೋಬಳಿಯ ಅಕ್ರಮ ಮಧ್ಯ ಮಾರಾಟ ದ ದಂಧೆಗೆ ಕಾಡಿವಾಣ ಹಾಕಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.
ಸಿ.ಎಸ್ .ಪುರ.ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಕಂಡರೆ ಕಠಿಣ ಕ್ರಮ. ಇನ್ನೂ ಮಧ್ಯ ಮಾರಾಟ ಕ್ಕೆ ಸ್ವಲ್ಪ ಚುರುಕು ಮುಟ್ಟಿಸಿದ ಸಿ.ಎಸ್.ಪುರ ಪೊಲೀಸರು ಇನ್ನೂ ಸಿ.ಎಸ್. ಪುರ ಹೋಬಳಿ ಯಲ್ಲಿ ಯಾವುದೇ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಕಂಡು ಬಂದರೆ ಮುಲ್ಲಾಜಿಲ್ಲದೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ದಂಧೆಯಲ್ಲಿ ಈ ಕಾರ್ಯಚರಣೆ ಮೂಲಕ ಅಕ್ರಮ ದಂಧೆ ಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.ದಾಳಿಯಲ್ಲಿ ಸಿ.ಎಸ್. ಪುರ ಪೊಲೀಸ್ ಸಿಬ್ಬಂದಿ ದುಶ್ಯಂತ್. ಭರತ್.ಮಂಜುನಾಥ್ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ