ಬೆಂಗಳೂರು
ಕರ್ನಾಟಕ ದಿಂದ ರಾಜ್ಯ ಸಭೆಗೆ ಆಯ್ಕೆ ಯಾಗಲು ಅರ್ಹವಾದ ಮೂರು ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಗಳನ್ನು ಅಂತಿಮಗೊಳಿಸಿದ್ದು, ಹಾಲಿ ರಾಜ್ಯ ಸಭಾ ಸದಸ್ಯರಾದ ಜಿ. ಸಿ. ಚಂದ್ರಶೇಖರ್ ಹಾಗೂ ಡಾ. ಸೈಯದ್ ನಾಸೀರ್ ಹುಸೇನ್ ಅವರಿಗೆ ಮರು ಆಯ್ಕೆ ಯಾಗುವ ಅವಕಾಶ ದೊರೆ ತಿದೆ. ಮತ್ತೊಂದು ಸ್ಥಾನಕ್ಕೆ ದೆಹಲಿ ಮೂಲದ ಕೇಂದ್ರ ಮಾಜಿ ಸಚಿವ ಅಜಯ್ ಮಾಕನ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಹಾಲಿ ರಾಜ್ಯ ಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರಿಗೆ ಮರು ಆಯ್ಕೆ ಅವಕಾಶ ಕೈ ತಪ್ಪಿದ್ದು ಅವರು ಲೋಕಸಭೆ ಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಕರ್ನಾಟಕ, ತೆಲಂಗಾಣ ಹಾಗೂ ಮಧ್ಯಪ್ರದೇಶದಿಂದ ರಾಜ್ಯಸಭೆ ಗೆ ಆಯ್ಕೆ ಯಾಗುವವರ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ