ತುಮಕೂರು:
ಮಾನವ ಇಹದ ಬಾಳ್ವೆ ಸುಗಮಗೊಳಿಸಲು ಏನೆಲ್ಲ ಆರ್ಜಿಸಿದರೂ ಆಧ್ಯಾತ್ಮಿಕತೆಯಿಂದ ಮಾತ್ರವೇ ಬದುಕು ಸಾರ್ಥಕ್ಯ ಹೊಂದಲು ಸಾಧ್ಯ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಡಾ.ಸ್ವಾಮಿ ಜಪಾನಂದ ಮಹಾರಾಜ್ ನುಡಿದರು.
ಅವರು ನಗರದ ಸರಸ್ವತಿಪುರಂನಲ್ಲಿರುವ ಭುವನೇಶ್ವರಿ ಪ್ರಕಾಶನವು ನವೆಂಬರ್ 28ರ ಭಾನುವಾರ ನಡೆದ ಶ್ರೀಮಾತೆ ಭುವನೇಶ್ವರಿ ಸ್ಮರಣಾರ್ಥ ಸತ್ಸಂಗ, ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ, ಭುವನೇಶ್ವರಿ ಡೈರಿ-2 ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಭುವನೇಶ್ವರಿ ಅವರ ಬದುಕು ಭವ್ಯವಾದುದು. ಗುರುಪರಂಪರೆಯ ಪ್ರಭಾವಕ್ಕೆ ಒಳಗಾಗಿ ಆದರ್ಶ ಗೃಹಿಣಿಯಾಗಿದ್ದರು. ನಡೆ ನುಡಿಯಲ್ಲಿ ಏಕತೆ ಇರಿಸಿಕೊಂಡಿದ್ದ ಆಧ್ಯಾತ್ಮ ಜೀವಿಗಳಾಗಿದ್ದರು ಎಂದು ನುಡಿದರು.
ಭುವನೇಶ್ವರಿ ಸ್ಮಾರಕ ಪ್ರಶಸ್ತಿಯನ್ನು ಲೇಖಕಿ ಹಾಗೂ ಗುರುಮಾತೆ ಕಮಲಾ ಬಡ್ಡಿಹಳ್ಳಿ ಮತ್ತು ವಾಲ್ಮೀಕಿ ಧ್ವನಿ ಸಂಪಾದಕ ಸೊಂಡೇಕೆರೆ ಶಿವಣ್ಣ ಅವರಿಗೆ ಪ್ರದಾನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣರು ಮಾತನಾಡಿ, ಮಾನವ ಜನ್ಮ ಲಭಿಸುವುದೇ ಒಂದು ದೊಡ್ಡ ಭಾಗ್ಯ. ನಾವೆಲ್ಲರೂ ಮಾತಾ ಪಿತೃ ಋಣ, ಗುರು ಋಣ, ಭೂಮಿ ಋಣ ತೀರಿಸಲು ಸಂಕಲ್ಪ ಮಾಡಬೇಕು. ಇಂದಿನ ಮಂದಿ ನವ ನಾಗರಿಕತೆ ಹಿಂದೆ ಓಡುತ್ತಿದೆ. ಸಂಸ್ಕøತಿ ಹೀನವಾಗುತ್ತಿದೆ. ಕತ್ತಲಿನಿಂದ ಬೆಳಕಿನತ್ತ ಮುನ್ನಡೆದಾಗಷ್ಟೇ ಬದುಕು ಸಾರ್ಥಕ. ಭುವನೇಶ್ವರಿ ಆದರ್ಶ ಮಹಿಳೆಯಾಗಿದ್ದರು. ಅವರು ಸ್ವಾಮಿಗಳಿಗೆ ಸಮಾನರಾಗಿದ್ದರು. ಅವರನ್ನು ಸ್ಮರಿಸಿ ಹಬ್ಬ ಮಾಡುವ ಮುಖಾಂತರ ಸತ್ಸಂಗ ನಡೆಸಿ, ಅವರ ಪತಿ ಎಂ.ಎಸ್.ನಾಗರಾಜು, ಮಕ್ಕಳು ಸಾರ್ಥಕ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಶಿಕ್ಷಣ ತಜ್ಞ ಡಾ. ವೀರಯ್ಯ, ನಗರ ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಪ್ರಶಸ್ತಿ ಪುರಸ್ಕøತ ಕಮಲಾ ಬಡ್ಡಿಹಳ್ಳಿ ಮಾತÀನಾಡಿದರು. ಮೊದಲಿಗೆ ಸತ್ಸಂಗ ಕಾರ್ಯಕ್ರಮ ಜರುಗಿತು. ವಿದ್ವಾನ್ ಮುತ್ತುರಾಜ್ ಮತ್ತು ಶಿಷ್ಯವೃಂದ ಪ್ರಾರ್ಥಿಸಿದರು. ಡಾ.ಸಂಜೀವಮೂರ್ತಿ ಸ್ವಾಗತಿಸಿದರು, ಎಂ.ಎಸ್.ನಾಗರಾಜು ವಂದಿಸಿದರು, ಶೋಭಾ ಉಮಾಮಹೇಶ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
