ಲಿವ್-ಇನ್ ಸಂಬಂಧ : ಮಹತ್ವದ ಆದೇಶ ನಡಿದ ಸುಪ್ರೀಂ ಕೋರ್ಟ್

ನವದೆಹಲಿ:

     ದೀರ್ಘಾವಧಿಯ ಲಿವ್-ಇನ್ ಸಂಬಂಧದಲ್ಲಿದ್ದು,   ಮದುವೆಯ ಭರವಸೆ ನೀಡಿ ಪುರುಷನೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆ ಎಂದು ಮಹಿಳೆಯರು ಆರೋಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್  ತೀರ್ಪು ನೀಡಿದೆ. ದಂಪತಿಗಳು ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿದ್ದರೆ ಪುರುಷನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತಹ ಸಂದರ್ಭಗಳಲ್ಲಿ, ದೈಹಿಕ ಸಂಬಂಧಗಳು ಮದುವೆಯ ಭರವಸೆಯ ಮೇಲೆ ಮಾತ್ರ ಆಧಾರಿತವಾಗಿವೆ ಎಂದು ನಿರ್ಣಾಯಕವಾಗಿ ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

  ಬ್ಯಾಂಕ್ ಮ್ಯಾನೇಜರ್ ಒಬ್ಬರ ಮೇಲೆ ಅವರ 16 ವರ್ಷಗಳ ಲಿವ್-ಇನ್ ಸಂಗಾತಿ, ಮದುವೆಯ ನಕಲಿ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ಎಂದು ಹೇಳಿ ಅತ್ಯಾಚಾರದ ಆರೋಪ ಹೊರಿಸಿದ್ದರು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಆ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ, ಇಬ್ಬರು ಒಮ್ಮತದ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿದೆ. ಇಬ್ಬರೂ ಸಂಗಾತಿಗಳು ಬೇರೆ ಬೇರೆ ಪಟ್ಟಣಗಳಲ್ಲಿ ವಾಸಿಸುತ್ತಿದ್ದರೂ, ಆಗಾಗ ಭೇಟಿಯಾಗುತ್ತಿದ್ದರು. ಮಹಿಳೆ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆ ತನ್ನ ಸಂಗಾತಿಯ ಮೇಲೆ ದೂರು ನೀಡಿದ್ದಳು.

   ಅವರಿಬ್ಬರು 16 ವರ್ಷಗಳ ಕಾಲ ಲೈಂಗಿಕ ಸಂಬಂಧವನ್ನು ಹೊಂದಿದ್ದರು ಎಂದು ಕೋರ್ಟ್‌ ಹೇಳಿದೆ ಹಾಗೂ ಅವರ ಸಂಬಂಧ ಹಳಸಿದೆ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಈ ಪ್ರಕರಣದಲ್ಲಿ ಯಾವುದೇ ಬಲವಂತ ಅಥವಾ ವಂಚನೆ ಎಂದು ತೋರುತ್ತಿಲ್ಲ. ಇಬ್ಬರ ಪರಸ್ಪರ ಒಪ್ಪಿಗೆಯಿಂದಲೇ ಅವರು ಸಂಬಂಧದಲ್ಲಿದ್ದರು ಎಂದು ಕೋರ್ಟ್‌ ಹೇಳಿದೆ. ಮದುವೆಯ ಸುಳ್ಳು ಭರವಸೆಯನ್ನು ನೀಡಲಾಗಿದ್ದರೂ ಸಹ, ಮಹಿಳೆ ಇಷ್ಟು ದಿನ ಸಂಬಂಧದಲ್ಲಿ ಇರುವುದು ಆಕೆಯ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. 

   ಇತ್ತೀಚೆಗೆ ಮಿಯಾನ್-ಟಿಯಾನ್” ಮತ್ತು “ಪಾಕಿಸ್ತಾನಿ” ಎಂಬ ಪದಗಳನ್ನು ಬಳಸುವುದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಪರಾಧವಲ್ಲ ಆದರೆ ಅದು ಕೆಟ್ಟ ಅಭಿರುಚಿಯ ಹೇಳಿಕೆ ಎಂದು ಕೋರ್ಟ್ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ ಜಾರ್ಖಂಡ್‌ನ ಚಾಸ್‌ನ ಉಪ-ವಿಭಾಗೀಯ ಕಚೇರಿಯಲ್ಲಿ ಉರ್ದು ಭಾಷಾಂತರಕಾರ ಮತ್ತು ಮಾಹಿತಿ ಹಕ್ಕು (ಆರ್‌ಟಿಐ) ನ ಕಾರ್ಯಕಾರಿ ಗುಮಾಸ್ತರು ಸಲ್ಲಿಸಿದ ಕ್ರಿಮಿನಲ್ ಪ್ರಕರಣದಿಂದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

Recent Articles

spot_img

Related Stories

Share via
Copy link