ಮೊದಲ ಬಾರಿಗೆ ಸೇನಾ ಕ್ರೀಡೆಯಲ್ಲಿ ಯುದ್ಧ ಟ್ಯಾಂಕರ್ ಸ್ಪರ್ಧೆ…!!!

ಮಾಸ್ಕೊ

      ಪ್ರಪಂಚದಲ್ಲಿ ಫಾರ್ಮುಲಾ ವನ್, ಕಾರ್ಟಿಂಗ್, ಕಾರು, ಬೈಕ್, ಲಾರಿ ಹಾಗೂ ಸೈಕಲ್, ನೌಕಾ ಹಡಗಿನ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಆದರೆ, ಆಗಸ್ಟ್ 3ರಿಂದ 17ರವರೆಗೆ ರಷ್ಯಾದಲ್ಲಿ ನಡೆಯಲಿರುವ ಐದನೇ ಅಂತಾರಾಷ್ಟ್ರೀಯ ಸೇನಾ ಕ್ರೀಡಾ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಯುದ್ಧ ಟ್ಯಾಂಕರ್ ಸ್ಪರ್ಧೆ ಕೂಡ ಸೇರ್ಪಡೆಗೊಂಡಿದೆ.

      ಈ ಸೇನಾ ಕ್ರೀಡಾಕೂಟದಲ್ಲಿ, ಯುದ್ಧ ಟ್ಯಾಂಕರ್, ಸ್ನೈಪರ್ ಶೂಟಿಂಗ್ ಹಾಗೂ ಯುದ್ಧ ವಿಮಾನಗಳ ಸ್ಫರ್ಧೆ ಸೇರಿ 32 ಸೇನಾ ಸ್ಪರ್ಧೆ ಆಯೋಜಿಸಲಾಗಿದ್ದು, ಸುಮಾರು 6000 ಸೇನಾ ಸಿಬ್ಬಂದಿ ಭಾಗವಹಿಸಲಿದ್ದಾರೆ.

      ಈ ಕ್ರೀಡಾ ಸ್ಪರ್ಧೆಗಳನ್ನು ಆರ್ಮೇನಿಯಾ,ಅಜರ್ ಬೇಜಾನ್, ಬೆಲಾರುಸ್, ಚೀನಾ, ಭಾರತ, ಇರಾನ್, ಕಜಕಿಸ್ತಾನ್, ಮಂಗೋಲಿಯಾ, ರಷ್ಯಾ ಮತ್ತು ಉಜ್ಬೇಕಿಸ್ತಾನ್ ಸೇರಿ 10 ದೇಶಗಳಲ್ಲಿ ಆಯೋಜಿಸಲಾಗುತ್ತಿದೆ.36 ದೇಶಗಳಿಂದ 200 ತಂಡಗಳು ಈ ಕ್ರೀಡೆಯಲ್ಲಿ ಭಾಗವಹಿಸಲಿವೆ ಎಂದುರಷ್ಯಾದ ರಕ್ಷಣಾ ಸಚಿವರು ಮಂಗಳವಾರ ಮಾಹಿತಿ ನೀಡಿದ್ದಾರೆ.

      ಈ ಪಂದ್ಯಗಳಿಂದ ಸೇನಾ ಸಿಬ್ಬಂದಿಗೆ ತಮ್ಮ ವೃತ್ತಿಪರ ಕೌಶಲ್ಯ ಪ್ರದರ್ಶಿಸಲು ಹಾಗೂ ಪರಸ್ಪರ ತಂತ್ರಗಾರಿಕೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap