ಪಾವಗಡ :
ತುಮಕೂರು ರಾಯದುರ್ಗ ರೈಲ್ವೆ ಯೋಜನೆಗೆ ರೈತರಿಂದ ಭೂಮಿ ಪಡೆಯುತ್ತಿದ್ದು ಸೂಕ್ತ ಪರಿಹಾರ ನೀಡಿ ಭೂಮಿ ಪಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷರಾದ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ತುಮಕೂರು ರಾಯದುರ್ಗ ರೈಲ್ವೆಯೋಜನೆಗೆ ಭೂಮಿ ನೀಡುವ ರೈತರ ಸಭೆ ನಡೆಸಿ ಮಾತನಾಡಿದ ಅವರು ಕಲ್ಪತರು ಜಿಲ್ಲೆಯ ಪಾವಗಡ,ಮಧುಗಿರಿ,ಕೋರಟಗೆರೆ ,ತುಮಕೂರು ತಾಲ್ಲೂಕುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈಲ್ವೆ ಯೋಜನೆಜಾರಿಗೆ ತಂದು ರೈತರಿಂದ ಭೂಮಿ ಪಡೆಯುವ ವೇಳೆ ರಾಜ್ಯ ಮಟ್ಟದ ಆಧಿಕಾರಿಗಳು ಪರಿಹಾರ ನೀಡುವ ವೇಳೆ ರೈತರಿಗೆ ಭಾರಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ನಾಗಲಾಪುರ,ಚಿಕ್ಕಹಳ್ಳಿ,ದೋಡ್ಡಹಳ್ಳಿ,ಕೆ.ರಾಮಪುರ, ಸೂಲನಾಯಕನಹಳ್ಳಿ,ಬುಡ್ಡಾರೆಡ್ಡಿ ಹಳ್ಳಿ,ಮೀನಕುಂಟನ ಹಳ್ಳಿ , ಕೆಂಚಗಾನಹಳ್ಳಿ , ಗಂಗಸಾಗರ ,ಪಳವಳ್ಳಿ , ಹಾಗೂ ರಾಜವಂತಿ ಗ್ರಾಮಗಳ ರೈತರ ಬಳಿ ಭೂಮಿಯಲ್ಲಿರುವ ಮರಗಿಡಗಳ ಬಗ್ಗೆ ಹಾಗೂ ಕೋಳವೆ ಬಾವಿ ಮತ್ತು ಕೃಷಿ ಭೂಮಿ ಕೈತಪ್ಪುತ್ತಿರುವುದರಿಂದ ರೈತರಿಗೆ ಆಗುವಾ ನಷ್ಠದ ಬಗ್ಗೆ ರೈತರಿಂದ ಮಾಹಿತಿ ಪಡೆದಾ ಅವರು ಶಾಶ್ವತವಾಗಿ ಭೂಮಿ ಕಳೆದುಕೋಳ್ಳುತ್ತಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದು ಎಕರೆಗೆ 50 ಲಕ್ಷ ಪರಿಹಾರ ನೀಡಿ ಭೂಸ್ವಾದೀನ ಪಡಿಸಿಕೊಳ್ಳಬೇಕು, ಸೂಕ್ತ ಬೆಲೆ ನೀಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ರೈತರು ಆರೋಪಿಸಿದರು.
ತಾಲ್ಲೂಕು ಅದ್ಯಕ್ಷರಾದ ಪೂಜಾರಪ್ಪ ಮಾತನಾಡಿ ಸತತವಾಗಿ ಬರದಿಂದ ತತ್ತರಿಸಿದ ಪಾವಗಡ ತಾಲ್ಲೂಕಿನಲ್ಲಿ ನಿರಂತವಾಗಿ ಸೋಲಾರ್, ಕೆ.ಪಿ.ಟಿ.ಸಿ.ಎಲ್,ಪವರ್ ಗ್ರೀಡ್ ನಂತರ ಈಗ ರೈಲ್ವೆ ಯೋಜನೆಯೂ ಕೂಡ ನಮ್ಮ ರೈತರಿಗೆ ಸೂಕ್ತಪರಿಹಾರ ನೀಡದೆ ಭೂಸ್ವಾದೀನಕ್ಕೆ ಮುಂದಾಗಿರುವುದು ವಿಷಾದನೀಯ ಎಂದರು.
ಪದೇ ಪದೇ ರೈತರ ಮೇಲೆ ದೌಜನ್ಯಗಳನ್ನು ಮಾಡಿ ಭೂಮಿ ಭಲವಂತವಾಗಿ ಪಡೆಯಲಾಗುತ್ತಿದೆ ನಿಮ್ಮ ಈ ಯಾವುದೇ ಯೋಜನೆಗಳು ಬೇಡ ನಿಮ್ಮ ಪರಿಹಾರವು ಬೇಡ ನಮಗೆ ನೀರು ಕೂಡಿ ನಿಮ್ಮನ್ನು ಯಾವುದಕ್ಕೂ ನಾವು ಕೈಎತ್ತಿ ಬೇಡುವುದಿಲ್ಲ ಕೂಡಲೇ ತ್ವರೀತ ಗತಿಯಲ್ಲಿ ತುಂಗ ಮತ್ತು ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೋಳಿಸಿ ನೀರು ತಾಲ್ಲೂಕಿಗೆ ನೀಡದಿದ್ದರೆ ಮುಂದಿನ ನಮ್ಮ ಹೋರಾಟವನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ ,ಗುಬ್ಬಿ ತಾಲ್ಲೂಕು ಲೋಕೇಶ್ , ಪಾಳ್ಳೆಗೌಡ , ಶೀರಾ ಕೆಂಚಪ್ಪ , ಹಾಗೂ ತಾಲ್ಲೂಕು ಪದಾದಿಕಾರಿಗಳಾದ ಕರಿಯಣ್ಣ , ಜಂಪಣ್ಣ , ಅಶ್ವತ್ತಪ್ಪ , ನಡುಪಣ್ಣ ,ಸಿದ್ದಪ್ಪ ,ವೀರಭದ್ರಪ್ಪ ,ಗುಡಿಪಲ್ಲೇಪ್ಪ ,ಓಬಳೇಶ್ ,ಹನುಮಂತರಾಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
