ಚಳ್ಳಕೆರೆ
ನಗರದ ಚಿಗುರು ಈ-ಕಿಡ್ಸ್ ಪಬ್ಲಿಕ್ ಶಾಲೆಯ ಮಕ್ಕಳು ಶುಕ್ರವಾರ ಇಲ್ಲಿನ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ತೆರಳಿ ಶಿಕ್ಷಕರ ಸಹಕಾರದಿಂದ ವಿವಿಧ ಜಾತಿಯ ಗಿಡಮರಗಳ ಬಗ್ಗೆ ಮಾಹಿತಿ ಪಡೆದರಲ್ಲದೆ ಅವುಗಳಿಂದ ಆಗುವ ಉಪಯೋಗಗಳ ಬಗ್ಗೆಯೂ ಸಹ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜೆ.ಸಿ.ಶಶಿಕುಮಾರ್ ಮಾತನಾಡಿ, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳನ್ನು ಕರೆತಂದು ಇಲ್ಲಿನ ಉದ್ಯಾನವನದ ಗಿಡಮರಗಳ ವೀಕ್ಷಣೆಯ ಜೊತೆಗೆ ಅವುಗಳ ಬೆಳವಣಿಗೆಯೂ ಸಹ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರ ಸಹಕಾರದಲ್ಲಿ ವಿದ್ಯಾರ್ಥಿಗಳ ಜೊತೆ ಸೇರಿ ಎಲ್ಲಾ ಗಿಡಗಳಿಗೆ ನೀರನ್ನು ಹರಿಸಲಾಯಿತು. ಬಿಸಿಲಿನ ಝಳಕ್ಕೆ ಬಾಡುತ್ತಿದ್ದ ಗಿಡಕ್ಕೆ ನೀರು ಹರಿಸುವ ಮೂಲಕ ಗಿಡಗಳ ಪುನಶ್ಚೇತನಕ್ಕೂ ಸಹ ಶ್ರಮಿಸಲಾಯಿತು ಎಂದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವರ್ಗ ಪಾಲ್ಗೊಂಡಿತ್ತು.