ಬೆಂಗಳೂರು
ಜಲಮಂಡಳಿ ಸಿಬ್ಬಂದಿಯ ಸೋಗಿನಲ್ಲಿ ಬಂದು ಸರಿಯಾಗಿ ನೀರು ಬರುತ್ತದೆ ಇಲ್ಲವೋ ಎನ್ನುವುದನ್ನು ಪರಿಶೀಲಿಸುವ ನೆಪಮಾಡಿ ಒಂಟಿಯಾಗಿದ್ದ ವೃದ್ಧೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ರ್ಘಟನೆ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಶೋಕನಗರದ ಆಸ್ಟಿನ್ ಟೌನ್‍ನ ಕೈಲಾಸ ಅರವಿಂದ್ ಅವರು ಭಾನುವಾರ ಬೆಳಿಗ್ಗೆ ಕೆಲಸದ ಮೇಲೆ ಹೋರ ಹೋಗಿದ್ದು, ಮನೆಯಲ್ಲಿ ಅಜ್ಜಿ ಒಬ್ಬರೇ ಇರುವುದನ್ನು ಗಮನಿಸಿದ ಇಬ್ಬರು ದುಷ್ಕರ್ಮಿಗಳು ಜಲಮಂಡಳಿ ಸಿಬ್ಬಂದಿ ಎಂದು ನಂಬಿಸಿ ಮನೆಗೆ ಬಂದು ಕುಡಿಯುವ ನೀರಿನ ತೊಂದರೆಯನ್ನು ಸರಿಪಡಿಸಲು ಬಂದಿರುವುದಾಗಿ ಹೇಳಿ ಅಜ್ಜಿಯನ್ನು ಪರಿಚಯಿಸಿಕೊಂಡಿದ್ದಾರೆ.
ನೀರು ಸರಿಯಾಗಿ ಬಾರದಿರುವ ನಿಮ್ಮ ಮನೆಯ ಸ್ನಾನದ ಕೋಣೆ ತೋರಿಸುವಂತೆ ದುಷ್ಕರ್ಮಿಗಳ ಹೇಳಿದ ಮಾತನ್ನು ನಂಬಿದ ಅಜ್ಜಿ ಇಬ್ಬರನ್ನೂ ಸ್ನಾನದ ಕೋಣೆಗೆ ಕರೆದುಕೊಂಡು ಹೋಗಿದ್ದರು.ಇಬ್ಬರಲ್ಲಿ ಓರ್ವ ನಿಮ್ಮ ಮನೆ ಹೊರಗಡೆ ಇರುವ ಪೈಪ್‍ಲೈನ್ ತೋರಿಸುವಂತೆ ಹೇಳಿದಾಗ ಅಜ್ಜಿ ಆತನಿಗೆ ಮನೆ ಹೊರಗಿರುವ ಪೈಪ್‍ಲೈನ್ ತೋರಿಸಿದಾಗ ಪೈಪ್ ಲೈನ್ ನೋಡುವ ನೆಪಮಾಡಿ ಕೆಲ ಕಾಲ ಅಜ್ಜಿಯನ್ನು ಅಲ್ಲೇ ನಿಲ್ಲಿಸಿ ಮಾತನಾಡಿಸುತ್ತಿದ್ದಾನೆ.
ಅಷ್ಟರಲ್ಲಿ ಸ್ನಾನದ ಕೋಣೆಯಲ್ಲಿದ್ದ ಮತ್ತೋರ್ವ ದುಷ್ಕರ್ಮಿ ಮನೆಯ ಕೊಠಡಿಯ ಅಲ್ಮೆರಾದಲ್ಲಿದ್ದ 6.3 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಮತ್ತು 5 ಸಾವಿರ ರೂ ನಗದು ದೋಚಿನಾಳೆ ಬಂದು ಪೈಪ್ ಲೈನ್ ರಿಪೇರಿ ಮಾಡುವುದಾಗಿ ಹೇಳಿ ಪರಾರಿಯಾಗಿದ್ದಾರೆ .ಅಶೋಕ್‍ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ