ಆರ್.ಟಿ.ಓ. ಅಧಿಕಾರಿಗಳಿಂದಲೇ ಸಾರಿಗೆ ನಿಲ್ಲಿಸುವ ಸಂಚು

ಜಗಳೂರು:

      ದಾವಣಗೆರೆ ಆರ್.ಟಿ.ಓ. ಅಧಿಕಾರಿಗಳು ಖಾಸಗಿ ಬಸ್ ಮಾಲೀಕರಿಗೆ ಲೈಸೆನ್ಸ್, ಓಡಾಡುವ ಮಾರ್ಗಗಳು, ಸಮಯವನ್ನು ( ಪರ್ಮಿಟ್) ಕೇಳದೇ, ರಾಜಕೀಯ ಒತ್ತಡಕ್ಕೆ ಒಳಗಾಗಿ ಉದ್ದೇಶ ಪೂರ್ವಕವಾಗಿಕೆ ದಾವಣಗೆರೆ –ಜಗಳೂರು ವಯಾ ಓಡಾಡುವ  ಬಸ್‍ಗಳ ಮೇಲೆ ಮಾತ್ರ ಲೈಸೆನ್ಸ್,ಎಮಿಷನ್ ಸರ್ಟಿಪಿಕೇಟ್, ಚಾಲಕ ಪರವಾನಿಗಿ, ಓಡಾಡುವ ಸಮಯ ಸೇರಿದಂತೆ ವಿವಿಧ ದಾಖಲೆಗಳನ್ನು ಸರ್ಕಾರಿ ಬಸ್‍ಗಳನ್ನು ಅಡ್ಡ ನಿಲ್ಲಿಸಿ ಕೇಳಿ ನೋಟೀಸ್ ನೀಡುವ ಮೂಲಕ ದಾವಣಗೆರೆಯಿಂದ ಜಗಳೂರಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ನಿಲ್ಲಿಸುವ ಹುನ್ನಾರ ಆರ್.ಟಿ.ಓ. ಅಧಿಕಾರಿಗಳಿಂದ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.

       ಕೆಎಸ್‍ಆರ್‍ಟಿಸಿ ಬಸ್‍ಗಳ ಮೂಲಕ ಸಾರಿಗೆಯಲ್ಲಿ ಹೊಸ ಕ್ರಾಂತಿ : ಜಗಳೂರು-ದಾವಣಗೆರೆ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲಾ ಕೆ.ಎಸ್.ಆರ್.ಟಿ.ಸಿ.ಅಧಿಕಾರಿ ಖುದ್ದೂಸ್ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು 20-08-2018 ರಿಂದ ನಿಯೋಜನೆ ಮಾಡಲಾಗಿದ್ದು, ಆರಂಭದಲ್ಲಿ ಹೆಚ್ಚಿನ ಪ್ರಯಾಣಿಕರು ಈ ಕೆಂಪು ಬಣ್ಣದ ಬಸ್‍ಗಳಲ್ಲಿ ಪ್ರಯಾಣಿಸುವ ಮೂಲಕ ಸಾರಿಗೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಪ್ರತಿದಿನ ಬಸ್‍ವೊಂದಕ್ಕೆ 10 ರಿಂದ 12 ಸಾವಿರ ರೂ. ಹಣ ಸಂಗ್ರಹವಾಗುವಂತೆ ಮಾಡಿದ್ದರು.

       ಖಾಸಗಿ ಬಸ್‍ಗಳ ಆದಾಯ ಕಡಿಮೆಯಾಯಿತು. ಕೆ.ಎಸ್.ಆರ್.ಟಿ.ಸಿ.ಬಸ್‍ಗಳ ಆದಾಯ ಬರತೊಡಗಿತು. ಇದರಿಂದ ಖಾಸಗಿ ಬಸ್ ಮಾಲೀಕರು ಆಕ್ರೋಶಗೊಂಡು ಕೆ.ಎಸ್.ಆರ್.ಟಿ.ಸಿ.ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಏರಿ ಸರ್ಕಾರಿ ಬಸ್‍ಗಳನ್ನು ನಿಲ್ಲಿಸುವಂತೆ ಒತ್ತಡ ಹಾಕಿದರೂ ನಿಲ್ಲಿಸಲು ಒಪ್ಪಿಲ್ಲ.

       ರಾಜಕೀಯ ಒತ್ತಡ: ಖಾಸಗಿ ಬಸ್ ಮಾಲೀಕರು ರಾಜಕೀಯ ಪ್ರತಿನಿಧಿಗಳ ಮೂಲಕ ಜೆ.ಡಿ.ಎಸ್.ನ ಮಾಜಿ ಎಂ.ಎಲ್.ಎ. ಒಬ್ಬರನ್ನು ಕರೆದುಕೊಂಡು ಸಾರಿಗೆ ಸಚಿವರನ್ನು ಬೇಟಿ ಮಾಡಿ ಕೆ.ಎಸ್..ಆರ್.ಟಿ.ಸಿ ಬಸ್ ನಿಲ್ಲಿಸದ ಜಿಲ್ಲಾ ಕೆ.ಆರ್.ಟಿ.ಸಿ.ಜಿಲ್ಲಾ ಅಧಿಕಾರಿಗಳನ್ನೇ ವರ್ಗಾವಣೆ ಮಾಡಲು ಬೆಂಗಳೂರಿಗೆ ಆಗಮಿಸಿ ಸಾರಿಗೆ ಸಚಿವರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿಗಳು ಜಗಳೂರು ತುಂಬಾ ಹರಿದಾಡಿತು.

      ಇದಕ್ಕೆ ಇದಕ್ಕೆ ಇಂಬುಕೊಡುವಂತೆ ರಾಜಕೀಯ ಒತ್ತಡ ಪ್ರೇರಿತವಾಗಿ ಆರ್.ಟಿ.ಓ ಅಧಿಕಾರಿಗಳು ಜಗಳೂರಿನಿಂದ ದಾವಣಗೆರೆಗೆ ಬರುವ ಕೆಎಸ್.ಆರ್.ಟಿ.ಸಿ. ಬಸ್‍ಗಳ ಮೇಲೆ ಅಡ್ಡ ನಿಲ್ಲಿಸಿ ಎರಡು ದಿವಸಗಳ ಹಿಂದೆಯೇ ನೋಟೀಸ್ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕಂಡಕ್ಟರ್ ,ಡ್ರೈವರ್‍ರವರು ನೀವು ಡಿಪೋಕ್ಕೆ ಬಂದು ನೋಟೀಸ್ ನೀಡಬೇಕಿತ್ತು.ಇಲ್ಲಿ ನೋಟೀಸ್ ನೀಡುವುದು ಏತಕ್ಕೆ ಎಂದು ಆರ್.ಟಿ.ಓ.ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.

       ಇದೇ ಸಂದರ್ಭದಲ್ಲಿ ದಾವಣಗೆರೆ ಜಗಳೂರು ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಅಡ್ಡಾಡಂಗಿಲ್ಲಂತೆ  ಎಂದು ಕೆ.ಎಸ್.ಆರ್.ಟಿಸಿ.ಬಸ್ ಡ್ರೈವರ್.ಹಾಗೂ ಕಂಡಕ್ಟರ್‍ರವರೇ ಸರ್ಕಾರಿ ಬಸ್ ನಿಲ್ಲಿಸುವಂತೆ ಹೇಳುತ್ತಿರುವ ಮಾತುಗಳು. (ಕೆ.ಎ.17 ಜಿ.5555 ದಾವಣಗೆರೆ ಆರ್.ಟಿ.ಓ ಇಲಾಖೆಯ ವಾಹನದ ಮೆಲೆ ಆರ್.ಟಿ.ಓ.ಅಧಿಕಾರಿಗಳು ಕೂತಿರುವ ಸಂದರ್ಭದಲ್ಲೇ ) ಹಾಗೂ ಸರ್ಕಾರಿ ಅಧಿಕಾರಿಗಳೇ ಸರ್ಕಾರಿ ಬಸ್‍ಗಳ ಮೇಲೇ ನೋಟಿಸ್ ನೀಡುತ್ತಿರುವುದು ವಿಪರ್ಯಾಸವಂದು ಅಲ್ಲೇ ಪ್ರತ್ಯಕ್ಷವಾಗಿದ್ದ ಸಾರ್ವಜನಿಕರು ಹೇಳುತ್ತಿರುವ ವೀಡಿಯೋವನ್ನು ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದು ಪ್ರತ್ಯಕ್ಷ ಸಾಕ್ಷಿಯನ್ನೇ ಮುನ್ನುಡಿಯಾಗಿದೆ.

          ಈ ವೀಡಿಯೋ ವೀಕ್ಷಿಸಿದ ಜಗಳೂರು ತಾಲ್ಲೂಕಿನ ಜನತೆಯ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಆರ್.ಟಿ.ಓ. ಇಲಾಖೆಯು 2006 ರಲ್ಲಿ ಸರ್ಕಾರಿ ಬಸ್‍ಗಳ ಎಂಟು ಪರ್ಮಿಟ್‍ಗಳು ಮಂಜುರಾತಿ ನೀಡಿತ್ತು. ರಾತ್ರಿ 11-30 ಕ್ಕೆ ದಾವಣಗೆರೆಯಿಂದ ಜಗಳೂರು, ಬೆಳಿಗ್ಗೆ 4 ಗಂಟಿಗೆ ದಾವಣಗರೆಯಿಂದ ಜಗಳೂರು , ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ 2 ಸರ್ಕಾರಿ ಬಸ್‍ಗಳು ಒಂದೇ ಸಮಯದಲ್ಲಿ ದಾವಣಗೆರೆಯಿಂದ ಜಗಳೂರಿಗೆ, ಬಿಡಲಾಗಿತ್ತು. ಜಗಳೂರಿನಿಂದ ದಾವಣಗೆರೆಗೆ ಪೀಕ್ ಅವರ್‍ನಲ್ಲಿ ಬಸ್‍ಗಳನ್ನು ಬಿಡಲಾಗಿತ್ತು.

           ಆ ಸಮಯದಲ್ಲಿ ಜನರ ಓಡಾಟ ಕಡಿಮೆಯಾಗಿ ಇಲಾಖೆಗೆ ನಷ್ಟ ಉಂಟಾಗಿ ಬಸ್‍ಗಳನ್ನು ನಿಲ್ಲಿಸಲಾಗಿತ್ತು. ಆ ಸಮಯಕ್ಕೆ ಹೋಗಲು ಸೂಚಿಸುತ್ತಿರುವುದು. ಹಾಗೂ ಮೂರು ತಿಂಗಳ ಹಿಂದೆ ಕೆ.ಎಸ್.ಆರ್.ಟಿಸಿ. ಅಧಿಕಾರಿಗಳು ದಾವಣಗೆರೆ ಆರ್.ಟಿ.ಓ ಇಲಾಖೆಗೆ ದಾವಣಗೆರೆ ಯಿಂದ ಜಗಳೂರು ವಯ ಮಾರ್ಗವಾಗಿ ಚಳ್ಳಕೆರೆಗೆ 6 ಬಸ್‍ಗಳಿಗೆ ಒಂದಕ್ಕೆ ರೂ. 900 ರಂತೆ ತಾತ್ಕಾಲಿಕ ಪರವಾನಿಗೆ ಅರ್ಜಿ ಸಲ್ಲಿಸಲಾಗಿದ್ದರೂ ಪರವಾನಿಗೆ ನೀಡಿದೇ ಆದರೆ ಆರ್.ಟಿ.ಓ. ಅಧಿಕಾರಿಗಳು ನಿರ್ಲಕ್ಷ ಹಿಂದೆ ಖಾಸಗಿ ಬಸ್ ಮಾಲೀಕರ ಒತ್ತಡ ಕಾರಣವಾಗಿರಬುದು ಎಂದು ಕೆ.ಎಸ್.ಆರ್.ಆರ್.ಟಿ.ಸಿ ಹಿರಿಯ ಅಧಿಕಾರಿಗಳು ಪತ್ರಿಕೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap