ನಿರಂತರ ಧಾರ್ಮಿಕ ಕಾರ್ಯಗಳಿಂದ ಮಾತ್ರ ಯಶಸ್ಸಿನತ್ತ ಹೆಜ್ಜೆ ಇಡಲು ಸಾಧ್ಯ.

ಚಳ್ಳಕೆರೆ

       ಸಮಾಜದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ನಿರಾಸಕ್ತಿ ಮೂಡುವ ವಾತಾವರುಣ ಉಂಟಾಗಿದ್ದು, ಇದು ಮುಂಬರುವ ದಿನಗಳಲ್ಲಿ ಭಾರಿ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಇಂದು ನಮ್ಮೆಲ್ಲರ ಬದುಕಿಗೆ ಆದರ್ಶವಾಗಿ ಉಳಿದಿರುವುದೇ ದೈವ ಪ್ರೇರಣೆ ಮಾತ್ರ

        ವಿಶೇಷವಾಗಿ ಕಳೆದ ಹಲವಾರು ದಶಕಗಳಿಂದ ನಮ್ಮ ಸುಮಂಗಲೆಯರು ಪಠಿಸುವ ಸೌಂದರ್ಯ ಲಹರಿ ಪಾರಾಯಣ ಧಾರ್ಮಿಕ ಶಕ್ತಿಯನ್ನು ಸದೃಢಗೊಳಿಸುವಲ್ಲಿ ಯಶಸ್ಸಿಯಾಗಿದೆ ಎಂದು ಮೈಸೂರಿನ ಯಡತೋರೆ ಯೋಗಾನಂದೇಶ್ವರ ಸರಸ್ವತಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀಶಂಕರಭಾರತಿ ಮಹಾಸ್ವಾಮಿಗಳು ತಿಳಿಸಿದರು.

         ಅವರು, ಮಂಗಳವಾರ ಸಂಜೆ ಇಲ್ಲಿನ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಸೌಂದರ್ಯ ಲಹರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಇಂದು ನಾವೆಲ್ಲರೂ ರಾಷ್ಟ್ರದ ಬದಲಾವಣೆಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದೇವೆ. ಪ್ರತಿಯೊಂದು ಹಂತದಲ್ಲೂ ಬದಲಾವಣೆಯನ್ನು ಆಪೇಕ್ಷೆ ಪಡುವುದು ತಪ್ಪಲ್ಲ. ಆದರೆ, ಅಂತಹ ಬದಲಾವಣೆ ನಮ್ಮ ಮೂಲ ಸಂಸ್ಕತಿ ಮತ್ತು ಸಂಸ್ಕಾರವನ್ನು ಸಂರಕ್ಷಿಸುವಂತಿರಬೇಕು. ಇಂದು ಎಲ್ಲರೂ ಧಾರ್ಮಿಕ ವಿಚಾರಗಳಿಗೆ ಒತ್ತು ನೀಡಬೇಕಿದೆ. ಯಾವ ವ್ಯಕ್ತಿ ಗುರುವಿನ ಅನುಗ್ರಹ ಪಡೆಯುತ್ತಾನೋ ಅವನಲ್ಲಿ ನೆಮ್ಮದಿಯ ಜೊತೆಗೆ ಸುಖಶಾಂತಿ ಮೂಡುತ್ತದೆ. ಮಹಿಳಾ ಸಮೂಹ ಸೌಂದರ್ಯ ಲಹರಿ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಬೇಕು. ಈ ಸೌಂದರ್ಯ ಲಹರಿ ಸಮಾಜದಲ್ಲಿ ಅಡಗಿರುವ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನ ಪರಿವರ್ತನೆಗೆ ದಾರಿದೀಪವಾಗಲಿದೆ ಎಂದರು.

          ಬಳ್ಳಾರಿ ಜಿಲ್ಲೆಯ ಸಿರಗುಪ್ಪದಿಂದ ಆಗಮಿಸಿದ ಪೂಜ್ಯ ಶಂಕರಭಾರತಿ ಸ್ವಾಮೀಜಿಯವರನ್ನು ಸಮುದಾಯದ ಪರವಾಗಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಎಸ್.ಗುಂಡೂರಾವ್, ಗೌರವಾಧ್ಯಕ್ಷ ಎಂ.ವಾಸುದೇವರಾವ್ ಗಾಯಿತ್ರಿ ಕಲ್ಯಾಣ ಮಂಟಪ ಮಹಾದ್ವಾರದಲ್ಲೇ ಪೂರ್ಣಕುಂಭ ಸ್ವಾಗತ ನೀಡಿದರು.

          ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಶಂಕರನಾರಾಯಣ, ಖಜಾಂಚಿ ಎಂಜಿಎಸ್ ಪ್ರಕಾಶ್, ಮಾಜಿ ಅಧ್ಯಕ್ಷ ಸಿ.ವಿ.ತ್ಯಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಸೀತಾಲಕ್ಷ್ಮಿವಾದಿರಾಜ್, ನಿರ್ದೇಶಕರಾದ ಶಾಂತಮ್ಮ, ಶೈಲಜಾ, ನಿರ್ದೇಶಕರಾದ ಅನಂತರಾಮ್ ಗೌರಮ್, ಮುರಳಿ, ಎನ್.ಸತ್ಯನಾರಾಯಣರಾವ್, ಎನ್.ಗೋಪಿನಾಥ, ಶಿವಕುಮಾರಸ್ವಾಮಿ, ಶ್ರೀಧರ್, ನರಸಿಂಹಮೂರ್ತಿ, ಸಮಾಜದ ಮುಖಂಡರಾಡ ಅನಂತ ಪ್ರಸಾದ್, ಎಚ್.ಟಿ.ಸತ್ಯನಾರಾಯಣ, ಪ್ರಕಾಶ್ ಮುಂತಾದವರು ಇದ್ದರು. ವೇದಬ್ರಹ್ಮ ಸಿ.ಎನ್.ನಾಗಶಯನಗೌತಮ್, ಪ್ರದೀಪ್‍ಶಾಸ್ತ್ರಿ ಮುಂತಾದವರು ವೇದಘೋಷದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link