ರಾಷ್ಟ್ರದ ಸ್ವಾತಂತ್ರ್ಯ ಪಡೆಯುವ ಕನಸನ್ನು ನನಸಾಗಿಸಲು ಗಣೇಶೋತ್ಸವ ಕಾರ್ಯಕ್ರಮ ದಿಕ್ಸೂಚಿ

ಚಳ್ಳಕೆರೆ

       ಪ್ರತಿವರ್ಷವೂ ಭಕ್ತಿ ಶ್ರದ್ದೆಗಳಿಂದ ಆಚರಿಸುವ ಗಣೇಶೋತ್ಸವ ಕಾರ್ಯಕ್ರಮ ನಮ್ಮ ಸಂಸ್ಕತಿ ಮತ್ತು ಸಂಪ್ರದಾಯದ ಗುರುತಾಗಿ ಮುಂದುವರೆದಿದೆ. ಗಣೇಶೋತ್ಸವವನ್ನು ಎಲ್ಲಾ ಸಮುದಾಯದವರೂ ಪಾಲಿಸುತ್ತಾರೆ. ಗಣೇಶೋತ್ಸವ ಎಲ್ಲರಲ್ಲೂ ಪ್ರೀತಿ, ವಿಶ್ವಾಸವನ್ನು ಬೆಸೆಯುವುದರಲ್ಲಿ ಸಹಕಾರಿಯಾಗಿದೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಲು ಗಣೇಶೋತ್ಸವವನ್ನು ಸಂಘಟನಾಸ್ತ್ರವನ್ನಾಗಿ ಬಳಸಲಾಯಿತು ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ತಿಳಿಸಿದರು.

        ಅವರು, ಭಾನುವಾರ ನಗರದ ಸಿಟಿ ಗಣೇಶೋತ್ಸವ ಸಮಿತಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದ ಅಂತಿಮ ದಿನದಂದು ಗಣೇಶ ವಿಸರ್ಜನೆ ಕಾರ್ಯಕ್ರಮದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ನಾವ್ಯಾರೂ ಸಂತೋಷದಿಂದ ಒಂದೆಡೆ ಸೇರಲು ಬ್ರಿಟೀಷರ ಆಡಳಿತ ನಿರ್ಬಂಧ ಹೇರಿತ್ತು. ಲೋಕಮಾನ್ಯ ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವ ಹೆಸರಿನಲ್ಲಿ ಎಲ್ಲರೂ ಒಂದೆಡೆ ಬೆರೆತು ಸಂಘಟಿತರಾಗಿ ಸ್ವಾತಂತ್ರ್ಯದ ಬಗ್ಗೆ ಚಿಂತನೆ ನಡೆಸಲು ಸಹಕಾರಿಯಾಯಿತು. ಸ್ವಾತಂತ್ರ್ಯ ಬಂದ ನಂತರವೂ ಗಣೇಶೋತ್ಸವ ತನ್ನದೇಯಾದ ವಿಶೇಷ ವೈಶಿಷ್ಟ್ಯತೆಯನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.

        ಕ್ಷೇತ್ರದ ಶಾಸಕ, ಸಿಟಿ ಗಣಪತಿ ಯುವಕ ಸಂಘದ ಗೌರವಾಧ್ಯಕ್ಷ ಟಿ.ರಘುಮೂರ್ತಿ ಮಾತನಾಡಿ, ಕಳೆದ ಸುಮಾರು 40 ವರ್ಷಗಳಿಂದ ದಿವ್ಯ ಜ್ಯೋತಿ ಯುವಕ ಸಂಘ ಗಣೇಶೋತ್ಸವದ ಪರಂಪರೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿತು. ಆದರೆ, ಈ ಬಾರಿ ಸಿಟಿ ಗಣಪತಿ ಯುವಕ ಸಂಘ ಈ ಮಹತ್ವದ ಜವಾಬ್ದಾರಿ ಹೊತ್ತುಕೊಂಡು ಒಂದು ತಿಂಗಳ ಕಾಲ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಸಾವಿರಾರು ಭಕ್ತರಿಗೆ ಪೂಜೆ ಮತ್ತು ಮನೋರಂಜನೆ ಕಾರ್ಯಕ್ರಮಗಳ ಮೂಲಕ ಜನರನ್ನು ಸಂತಸ ಪಡಿಸಿದೆ.

       ಭಾನುವಾರ ಶ್ರೀಗಣೇಶನನ್ನು ನಾವೆಲ್ಲರೂ ಪೂಜಿಸಿ ಭಕ್ತಿಯಿಂದ ಅವನನ್ನು ಬೀಳ್ಕೊಡಲು ಸಿದ್ದತೆ ನಡೆಸಿದ್ದೇವೆ. ಪುನಃ ಮುಂದಿನ ವರ್ಷ ಗಣೇಶನನ್ನು ಆಹ್ವಾನಿಸಿ ವೈಭವದಿಂದ ಕಾರ್ಯಕ್ರಮ ನಡೆಸುವಂತಾಗಲಿ. ಎಲ್ಲಾ ಜಾತಿ ಸಮುದಾಯಗಳಿಗೆ ಶ್ರೀಗಣೇಶನೇ ಆರಾಧ್ಯ ದೈವವಾಗಿದ್ದು, ಎಲ್ಲರೂ ಗಣೇಶನನ್ನು ಪೂಜಿಸಲು ಸಂತಸ ಪಡುವವರು. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲು ನಾನು ಸಹ ಸಹಕಾರ ನೀಡುತ್ತೇನೆ. ನಮ್ಮ ದೇಶದ ಗಣೇಶೋತ್ಸವ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದೆ ಎಂದರು.

         ಸಿಟಿ ಗಣಪತಿ ಯುವಕ ಸಂಘದ ಅಧ್ಯಕ್ಷ ಜಿ.ಯಶವಂತಕುಮಾರ್ ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಕ್ತನಾಗಿ ಪಾಲ್ಗೊಂಡಿದ್ದೆ. ಆದರೆ, ನಗರದಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ನಿಲ್ಲುವ ಸ್ಥಿತಿ ಎದುರಾಗಿದ್ದು, ಇದನ್ನು ಮನಗಂಡು ನಾವೇ ಸ್ವಯಂ ಪ್ರೇರಣೆಯಿಂದ ದೇವರ ಉತ್ಸವ ನಿಲ್ಲಬಾರದು ಎಂಬ ಉದ್ದೇಶದಿಂದ ಸಿಟಿ ಗಣಪತಿ ಯುವಕ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ.

        ಮೊದಲ ವರ್ಷವೇ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ, ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವ್ಯಾಪಾರಸ್ಥರು, ಲಘುವಾಹನ ಚಾಲಕರ ಸಂಘದ ಎಲ್ಲಾ ಸದಸ್ಯರು, ಯುವಕ ಮಿತ್ರರು ನಮ್ಮೊಂದಿಗೆ ಕೈಜೋಡಿಸಿ ಈ ಕಾರ್ಯಕ್ರಮ ಯಾವುದೇ ಲೋಪವಾಗದಂತೆ ಸಹಕಾರ ನೀಡಿದ್ದು, ನಾನು ಸಮಿತಿಯ ಪರವಾಗಿ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

       ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಾಗರಾಜು, ಉಪಾಧ್ಯಕ್ಷ ಟಿ.ರವಿವರ್ಮ, ಕಾರ್ಯದರ್ಶಿ ಕರೀಕೆರೆ ಎ.ನಾಗರಾಜು, ಪದಾಧಿಕಾರಿಗಳಾದ ಕೃಷ್ಣಾರೆಡ್ಡಿ, ವಿಶ್ವನಾಥ, ಶಶಿಕುಮಾರ್, ವಿಎಂ.ಮಂಜುನಾಥ, ಮುಖಂಡರಾದ ಆರ್.ಪ್ರಸನ್ನಕುಮಾರ್, ಆರ್.ಎ.ದಯಾನಂದಮೂರ್ತಿ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಎಂ.ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ಬಡಗಿಪಾಪಣ್ಣ ಮುಂತಾದವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪಿಎಸ್‍ಐ ಕೆ.ಸತೀಶ್‍ನಾಯ್ಕ ಮೆರವಣಿಗೆ ಹಿನ್ನೆಲೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap