ನಾಡಿನ ಕನ್ನಡ ಶ್ರೇಷ್ಠ ಕವಿ,ಲೇಖಕರರ ಆದರ್ಶಗಳನ್ನು ಯುವ ಜನಾಂಗ ಅಳವಡಿಸಿಕೊಳ್ಳಬೇಕು

ಚಳ್ಳಕೆರೆ

          ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಎಲ್ಲಾ ರೀತಿಯ ಗೌರವ ಹಾಗೂ ಬೆಲೆಯನ್ನು ನೀಡಲಾಗುತ್ತಿದೆ. ಕನ್ನಡ ಭಾಷೆ ಇಂದಿನ ಸಂಪೂರ್ಣ ಬೆಳವಣಿಗೆಯಲ್ಲಿ ನಾಡಿನ ಹಿರಿಯ ಸಾಹಿತಿಗಳ ಸೇವೆ ಅಡಗಿದೆ. ಇಂದಿನ ಯುವ ಜನಾಂಗ ಈ ಭಾಷೆಯನ್ನು ಮತ್ತಷ್ಟು ಸತ್ವಪೂರ್ಣವಾಗಿ ಬೆಳೆಸಲು ಗಮನ ನೀಡಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

            ಅವರು, ಭಾನುವಾರ ಇಲ್ಲಿನ ಹಳೇ ನಗರದಲ್ಲಿ ಶ್ರೀವೀರಭದ್ರಸ್ವಾಮಿ ಯುವಕರ ಸ್ನೇಹ ಬಳಗ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಪ್ಪಾರ್ಚನೆ, ಕನ್ನಡ ಧ್ವಜವನ್ನು ಧ್ವಜಾರೋಣ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ ಸಾವಿರಾರು ವರ್ಷಗಳಿಂದ ಎಲ್ಲಾ ಕನ್ನಡಿಗರ ಹೃದಯದಲ್ಲಿ ಭದ್ರವಾಗಿ ಬೇರೂರಿರುವ ಕನ್ನಡ ಭಾಷೆಗೆ ಯಾವುದೇ ರೀತಿಯ ಅಪಾಯ ಉಂಟಾಗದು ಎಂಬ ನಂಬಿಕೆ ನನಗೆ ಇದೆ. ಈ ಭಾಷೆಯ ಹಿರಿಮೆ, ಗರಿಮೆಯನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲಾ ಕನ್ನಡಿಗರದ್ದು ಎಂದರು.

            ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎ.ಅನಂತಪ್ರಸಾದ್ ಮಾತನಾಡಿ, ಕಳೆದ ಸುಮಾರು 50 ವರ್ಷಗಳಿಂದ ಭಾಗದ ನಾಗರೀಕನಾಗಿ ಇಲ್ಲಿನ ಬೆಳವಣಿಗೆಯ ಬಗ್ಗೆ ಗಮನಹರಿಸುತ್ತಿದ್ದೇನೆ. ಇಂದಿನ ಕನ್ನಡ ಭಾಷೆಯ ಹಿರಿಮೆಗೆ ಅನೇಕ ನಾಡಿನ ಸಾಹಿತಿಗಳು ಸಮರ್ಪಣಾ ಮನೋಭಾವದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಯುವಕರು ಪ್ರತಿಯೊಬ್ಬ ಕನ್ನಡ ಕವಿ ಲೇಖಕರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

           ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಇಲ್ಲಿನ ಯುವಕರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಮುಂದಾಗಿದ್ದಾರೆ. ಇವರಲ್ಲಿರುವ ಕನ್ನಡಪರ ಕಾಳಜಿ ಎಲ್ಲರೂ ಮೆಚ್ಚುವಂತದ್ದೇ. ಕನ್ನಡ ನಾಡಿನಲ್ಲಿ ಜನ್ಮತಾಳಿದ ನಾವೆಲ್ಲರೂ ಧನ್ಯರು. ಕಾರಣ ಕನ್ನಡ ಭಾಷೆಗೆ ಬಂದಿರುವ ಜ್ಞಾನಪೀಠ ಪ್ರಶಸ್ತಿಗಳು ಈ ಭಾಷೆಯ ಪ್ರೌಢಿಮೆಯನ್ನು ಗುರುತಿಸುತ್ತದೆ ಎಂದರು.

          ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುರಳಿ ಮಾತನಾಡಿ, ಪ್ರಾರಂಭದ ಹಂತದಲ್ಲಿ ಇಲ್ಲಿನ ಯುವಕರು ರಸ್ತೆ ಬದಿ ಗಿಡಗಳನ್ನು ನೆಡುವ ಮೂಲಕ ಸಂಘ ಸ್ಥಾಪನೆಗೆ ನಾಂದಿಯಾಡಿದರು. ಈಗ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವಿದೆ ಎಂದರು. ಇದೇ ಸಂದರ್ಭದಲ್ಲಿ ಏಕಾಂತಪ್ಪ, ಡಾ.ಲೋಕೇಶ್, ಮುಖ್ಯ ಶಿಕ್ಷಕ ಪಾಲಯ್ಯ, ಶಿಕ್ಷಕಿಯಾದ ಶಾಮಲಮ್ಮ ಮತ್ತು ಅನಂತಪ್ರಸಾದ್‍ರವರನ್ನು ಸನ್ಮಾನಿಸಲಾಯಿತು.

           ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಹೊಯ್ಸಳ ಗೋವಿಂದ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಜೆ.ವೆಂಕಟೇಶ್, ಆರ್.ಪ್ರಸನ್ನಕುಮಾರ್, ಹೂವಿನ ಜಗದೀಶ್, ಶಿವಕುಮಾರ್, ಶಿಕ್ಷಕ ನಾಗರಾಜು, ಬಡಗಿ ಪಾಪಣ್ಣ, ಅತಿಕುರ್ ರೆಹಮಾನ್, ಪ್ರದೀಪ್, ಮನೋಜ್‍ಕುಮಾರ್, ಎಂ.ಜಗದೀಶ್, ಪ್ರಹ್ಲಾದ್, ಸುಭ್ರಮಣ್ಯ, ಪವನ್, ಶಿವು, ಮಂಜಣ್ಣ, ಕಾಂತಣ್ಣ, ಪಾಲಯ್ಯ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap