ಉತ್ತಮ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಿ

ದಾವಣಗೆರೆ:

         ಬಾಲ್ಯದಿಂದಲೇ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಬಾಲಯೋಗಿ ಶ್ರೀಜಗದೀಶ್ವರ ಸ್ವಾಮೀಜಿ ತಿಳಿಸಿದರು.

        ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಲಿಟಲ್ ವಲ್ರ್ಡ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಉತ್ತಮ ಶಿಕ್ಷಣ ನೀಡುವುದರ ಮೂಲಕ ಲಿಟಲ್ ವಲ್ರ್ಡ್ ಶಾಲೆಯು ಸಮಾಜದಲ್ಲಿ ಉತ್ತಮವಾದ ವಿದ್ಯಾರ್ಥಿಗಳನ್ನು ಬೆಳೆಸುತ್ತಿದ್ದು, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ಜೀವನವನ್ನು ಜ್ಞಾನದಿಂದ ಉತ್ತಮಪಡಿಸಿಕೊಳ್ಳುವಂತೆ ಸರಿಯಾದ ಮಾರ್ಗದರ್ಶನಕ್ಕೆ ದಾರಿ ದೀಪವಾಗಿದೆ ಎಂದರು.

        ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಬಸವರಾಜಪ್ಪ, 36ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯ ಹೆಚ್.ಗುರುರಾಜ್, ಕನ್ನಡ ಚಲನಚಿತ್ರರಂಗದ ನಾಟ್ಯ ನೃತ್ಯ ನಿರ್ಧೇಶಕ ಅಭಿಷೇಕ್ ಮಠದ್ ಮತ್ತು ಶಾಲೆಯ ಮುಖ್ಯಸ್ಥ ಲಕ್ಷ್ಮಿದೇವಿ ಬಿ. ಹಾಗೂ ಹರಪನಹಳ್ಳಿ ಕಾರ್ಯಪಾಲಕ ಇಂಜಿನೀಯರ್ ಎಸ್.ಹೆಚ್. ಹನುಮಂತಪ್ಪ ಮತ್ತಿತರರು ಭಾಗವಹಿದ್ದರು.

        ಕಾರ್ಯಕ್ರಮದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳು, ಹಾಗೂ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಶಾಲೆಯ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಕ್ವಿಜ್ ನಲ್ಲಿ ಭಾಗವಹಿಸಿ ವಜೇತ ಪೋಷಕರಿಗೆ ಬಹುಮಾನ ವಿತರಿಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link