ಬಳ್ಳಾರಿ
ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಮತ್ತೊಂದು ನರಭಕ್ಷಕ ಚಿರತೆ ಬೋನಿಗೆ ಬಿದ್ದಿದೆ.
ಕಳೆದ ಮೂರು ದಿನದ ಹಿಂದೆ ಕಂಪ್ಲಿ ತಾಲೂಕು ದೇವಲಾಪುರದಲ್ಲಿ ಜೈಸುಧಾ(14)ವರ್ಷದ ಬಾಲಕಿಯನ್ನುಎಳೆದೊಯ್ದಿತ್ತು. ಕೂಡಲೇ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಗ್ರಾಮದ ಆಯಕಟ್ಟಿನ ಜಾಗಗಳಲ್ಲಿ ಬೋನು ಅಳವಡಿಸಿದ್ದರು.
ಕಳೆದ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಇದೇ ಗ್ರಾಮದ ಪಕ್ಕದಲ್ಲಿರುವ ಸೋಮಲಾಪುರ ಗ್ರಾಮದಲ್ಲಿ ಕಳೆದ ವಾರವಷ್ಟೇ ಬೇರೊಂದು ಚಿರತೆ ಬೋನಿಗೆ ಬಿದ್ದಿತ್ತು. ಇಬ್ಬರು ಮಕ್ಕಳ ಸಾವಿಗೆ ಕಾರಣವಾಗಿದ್ದ ಎರಡು ಚಿರತೆಗಳು ಈಗ ಬೋನಿಗೆ ಬಿದ್ದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ