ಕೊರಟಗೆರೆ
ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಗ್ರೇಡ್ಒನ್ ಹಾಗೂ ಹೆಚ್ಚು ರೆವಿನ್ಯೂ ಹೊಂದಿರುವ ಹೊಳವನಹಳ್ಳಿ ಗ್ರಾಪಂ ಆದಾಯದ ಮೂಲ ಹೊಂದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ದಿ ಕುಂಠಿತವಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನರು ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಪ್ರಮುಖ ಹೋಬಳಿ ಕೇಂದ್ರವಾದ ಹೊಳವನಹಳ್ಳಿ ಗ್ರಾಪಂ ನಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಳವನಹಳ್ಳಿ ಗ್ರಾಮದ ಎಲ್ಲಾ ವಾರ್ಡ್ಗಳ ಕಸ ವಿಲೇವಾರಿಯಾಗುತ್ತಿಲ್ಲ. ಸಾರ್ವಜನಿಕರು ಜನನಿಬಿಡ ಪ್ರದೇಶವಾದ ಬ್ಯಾಂಕ್ ಸರ್ಕಲ್ನಲ್ಲಿಯೇ ಕಸ ಸುರಿಯುತ್ತಿದ್ದಾರೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿರುವುದಲ್ಲದೆ ಗ್ರಾಪಂನ ಆಸುಪಾಸಿನಲ್ಲಿಯೇ ಕಸ ಸುರಿಯುತ್ತಿದ್ದರೂ ಗ್ರಾಪಂನ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಟೀಕೆಗೊಳಗಾದಂತಾಗಿದೆ.
ಹೊಳವನಹಳ್ಳಿ ಗ್ರಾಪಂ ಮೇಲ್ದರ್ಜೆಗೆ ಏರುವ ಹಂತದಲ್ಲಿ ಅಭಿವೃದ್ದಿಯತ್ತ ಸಾಗುತ್ತಿದೆ. ಇಂತಹ ಗ್ರಾಪಂ ವ್ಯಾಪ್ತಿಯಲ್ಲಿ ವಾಣಿಜ್ಯ ವ್ಯವಹಾರ ನಡೆಸುವಂತಹ ಪ್ರಮುಖ ಸ್ಥಳದಲ್ಲಿ ಅನೈರ್ಮಲ್ಯ ತಾಂಡವಾಡುತಿದ್ದು, ದೊಡ್ಡ ಮಟ್ಟದಲ್ಲಿ ತಿಪ್ಪೆರೂಪ ತಾಳಿರುವುದು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ದಟ್ಟವಾಗಿರುವ್ಯದರಿಂದ ಗ್ರಾಪಂ ವಿರುದ್ದ ಇಲ್ಲಿನ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಹೊಳವನಹಳ್ಳಿಯ ಗ್ರಾಪಂತಾಲೂಕಿಗೆದೊಡ್ಡ ಪಂಚಾಯಿತಿಯಾಗಿದ್ದು, ಈ ಭಾಗದಲ್ಲಿಬಸ್ಸ್ ನಿಲ್ದಾಣ, ಅಂಬೇಡ್ಕರ್ ಬಡಾವಣೆ, ಬ್ಯಾಂಕ್ ಸರ್ಕಲ್, ಕಾಲೇೀಜು ಮುಂಬಾಗದಿಂದಗ್ರಾಪಂಯ ನೌಕರರುಪ್ರತಿ ದಿನ ರಸ್ತೆ ಬದಿಯಲ್ಲಿಸ್ವಚ್ಚಗೊಳಿಸಿದಕಸವನ್ನ ಸುಮಾರುಆರು ತಿಂಗಳಿಂದ ಬ್ಯಾಂಕಿನ ಮುಂದೆ ಹಾಕುತ್ತಿರುವುದುಅನೈರ್ಮಲ್ಯಕ್ಕೆ ಮತ್ತೊಂದುಕಾರಣವಾಗಿದ್ದು, ಈ ಗುಂಡಿಗೆಕಸದಜತೆಗೆ ಆ ಭಾಗದ ಸುತ್ತಮುತ್ತಯಾವುದೇ ಸಭೆ ಸಮಾರಂಭಗಳು ನೆಡೆದರೆಅಲ್ಲಿ ಉಳಿದಿರುವ ಅನ್ನ ಮುಸರೆ ನೀರು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನ ಇಲ್ಲೆ ಸುರಿಯುವುದರಿಂದಕಾಯಿಲೆಗಳಿಗೆ ಅಹ್ವಾನನೀಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಮತ್ತುಜನಪ್ರತಿನಿಧಿಗಳುಕಂಡುಕಾಣದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆ ಮಾಡಿ ಕೊಟ್ಟಂತಾಗಿದೆ.
ಗ್ರಾಮದಲ್ಲಿ ಇರುವ ಕಸಕಡ್ಡಿ ಹಾಕುವುದರಿಂದ ಆ ಗುಂಡಿ ತುಂಬಿ ಕೊಳೆತು ನಾರುತ್ತಿದೆ. ಹೊಳವನಹಳ್ಳಿ ಗ್ರಾಪಂ ದುರಾಡಳಿತದ ಕೂಪವಾಗಿದ್ದು ಗ್ರಾಪಂನ ಕೆಲವು ವಾರ್ಡ್ಗಳಲ್ಲಿ ರಸ್ತೆ ಬದಿಯಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
