ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆಯಿಂದ ಅರ್ಹರಿಗೆ ಅನುಕೂಲವಾಗಲಿದೆ : ಶಾಸಕ ಬಿ.ಸತ್ಯನಾರಾಯಣ್

ಶಿರಾ

      ಜನಸಾಮಾನ್ಯರಿಗೆ ಸ್ಥಳಿಯ ಮಟ್ಟದಲ್ಲಿ ಎಲ್ಲಾ ಸೇವಾ ಸೌಲಭ್ಯಗಳು ದೊರೆಯುವ್ಯದರಿಂದ, ಪಟ್ಟಣಗಳಿಗೆ ಕೆಲಸ ಕಾರ್ಯಗಳಿಗೆಂದು ಓಡಾಡುವುದು ತಪ್ಪಲಿದ್ದು, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ದೊರೆಯುವ ಸೇವೆಗಳನ್ನು ಜನರು ಬಳಸಿಕೊಳ್ಳಬೇಕು ಎಂದು ಶಾಸಕ ಬಿ.ಸತ್ಯನಾರಾಯಣ ತಿಳಿಸಿದರು.

      ಸೋಮವಾರ ಗುಳಿಗೇನಹಳ್ಳಿಯಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ತಾಂತ್ರಿಕವಾಗಿ ಜನರು ಮುಂದುವರೆಯುತ್ತಿದ್ದು ಜನರು ಜಾತಿ, ಆದಾಯ ಪ್ರಮಾಣ ಪತ್ರ, ಪಹಣಿ, ಪಡಿತರ ಚೀಟಿಗಾಗಿ ಪರದಾಡುವಂತಾಗಿದೆ. ಸಾಮಾನ್ಯ ಕೇಂದ್ರಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಸೇವೆಗಳನ್ನು ನೀಡಲಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆಯುವಂತಾಗಬೇಕು ಎಂದರು

         ಮುದಿಮಡು ಮಂಜುನಾಥ್ ಮಾತನಾಡಿ, ಈ ಹಿಂದೆ ಕಂದಾಯ ಇಲಾಖೆಗೆ ತೆರಳಿ ಒಂದು ಜಮೀನಿನ ಪಹಣಿ ತರಲು ಕೂಡ ರೈತರು ಸಂಕಟಪಡಬೇಕಿದ್ದು, ಆದರೆ ಇದೀಗ ತಂತ್ರಜ್ಞಾನ ಬೆಳೆದಂತೆ ರೈತರು ಇರುವಲ್ಲಿಯೇ ಪಹಣಿ ಪಡೆಯಬಹುದಾಗಿದೆ. ಸಾಮಾನ್ಯ ಕೇಂದ್ರಗಳ ಸ್ಥಾಪನೆಯಿಂದ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ ಎಂದರು.

        ಸಿಎಸ್‍ಸಿಯ ಜಿಲ್ಲಾ ವ್ಯವಸ್ಥಾಪಕರಾದ ಜ್ಣಾನಮಣಿ ಮಾತನಾಡಿ, 330 ಸೇವೆಗಳು ನಮ್ಮ ಈ ಸೇವಾ ಕೇಂದ್ರಗಳಲ್ಲಿ ದೊರೆಯುತ್ತಿವೆ. ಈ ಸೇವೆಗಳು ಸರ್ಕಾರದಿಂದ ಮಾನ್ಯತೆ ಪಡೆದಿವೆ ಎಂದರು. ಸೇವಾಕೇಂದ್ರಕ್ಕೆ ತಹಸೀಲ್ದಾರ್ ರಂಗೇಗೌಡ, ಕಸಬಾ ಕಂದಾಯ ಅಧಿಕಾರಿ ಮಂಜುನಾಥ ಭೇಟಿ ನೀಡಿದರು.

         ಕಾರ್ಯಕ್ರಮದಲ್ಲಿ ವಕೀಲರಾದ ಜಿ.ಎಸ್.ಶಶಿಧರ್, ಸಾಮಾನ್ಯ ಸೇವಾ ಕೇಂದ್ರದ ವಿ.ಎಲ್.ಇ ಆದ ಓಂಕಾರೇಶ್ವರ, ಗ್ರಾಮ ಲೆಕ್ಕಿಗರಾದ ಧನಲಕ್ಷ್ಮಿ, ಮಾಜಿ ಸೂಡ ಅಧ್ಯಕ್ಷರಾದ ಆರ್.ನಾಗರಾಜು, ಸಂತೋಷ್, ರವಿಶಂಕರ್, ಶಂಕರ್ ಹಾರೋಗೆರೆ, ಜಿ.ಹೆಚ್.ಚಂದ್ರಪ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link