ಪಡಿತರ ವಿತರಣೆ ವಿಳಂಬ : ಸೋರೆಕುಂಟೆ ಗ್ರಾಮಸ್ಥರಿಂದ ಪ್ರತಿಭಟನೆ

ಶಿರಾ

       ಪಡಿತರ ಧಾನ್ಯವನ್ನು ಯಾವ ಜಾಗದಲ್ಲಿ ನೀಡಬೇಕು ಅನ್ನುವುದರ ಗೊಂದಲದಿಂದಾಗಿ ನಮಗೆ ಸಲ್ಲಬೇಕಾದ ಪಡಿತರ ಚೀಟಿಯ ಆಹಾರ ಪದಾರ್ಥಗಳು ಅಂತಿಮ ದಿನವಾದರೂ ತಲುಪದಂತಾಗಿದೆ ಎಂದು ತಾಲ್ಲೂಕಿನ ಸೋರೆಕುಂಟೆಯ ಶ್ರೀ ಕರಿಯಮ್ಮದೇವಿ ಸ್ತ್ರೀಶಕ್ತಿ ಮಹಿಳಾ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

        ತಾಲ್ಲೂಕಿನ ಸೋರೆಕುಂಟೆ ಗ್ರಾಮದ ಪಂಚಾಯ್ತಿ ಮಳಿಗೆಯೊಂದರಲ್ಲಿ ಈ ಹಿಂದೆ ಪಡಿತರವನ್ನು ವಿತರಿಸಲಾಗುತ್ತಿತ್ತು. ಈಗ ಆಹಾರ ಪದಾರ್ಥವನ್ನು ಮನೆಯೊಂದರಲ್ಲಿ ವಿತರಿಸಲಾಗುತ್ತಿದೆ. ಆಹಾರ ವಿತರಣೆಯ ಸಂಬಂಧವೇ ದೋಷಗಳು ಏರ್ಪಟ್ಟಿದು,್ದ ಕಂದಾಯ ಇಲಾಖೆಯು ಆಹಾರ ನೀಡಲು ಮೀನಾ ಮೇಷ ಎಣಿಸುತ್ತಿದೆ. ನಮಗೆ ಎಲ್ಲಿಯಾದರೂ ಸರಿ ಮೊದಲು ಆಹಾರ ಪದಾರ್ಥವನ್ನು ವಿತರಣೆ ಮಾಡುವ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link