ಹರಪನಹಳ್ಳಿ:
ಪ್ರೋ. ನಂಜುಂಡ ಸ್ವಾಮಿಯವರ ಜನ್ಮದಿನವಾದ ಪೆಭ್ರವರಿ 13 ರಂದು ರೈತರ ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ವಿಧಾನಸೌದಕ್ಕೆ ಮುತ್ತಿಗೆ ಹಾಕಲಿದ್ದೇವೆ. ಪ್ರತಿಭಟನೆ ಬೇಡಿಕೆ ಈಡೇರುವವರೆಗೂ ನಿರಂತರವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಎಂ.ಮಹೇಶ್ವರಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ರೈತರಿಗೆ ಭದ್ರತೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರವನ್ನು ಪ್ರಶ್ನಿಸಿ ವಿಭಿನ್ನ ರೀತಿಯ ಚಳುವಳಿಗೆ ನಾಂದಿಹಾಡಲಿದ್ದೇವೆ. ತಾಲೂಕಿನಿಂದ ಸುಮಾರು 10 ಸಾವಿರ ರೈತರು ಚಳುವಳಿಯಲ್ಲಿ ಭಾಗವಹಿಲಿದ್ದಾರೆ ಎಂದು ಹೇಳಿದರು.
ಸರ್ಕಾರ ರೈತರಿಗೆ ಉದ್ದಾರವಾಗಲು ಸಾಲನೀಡಿಲ್ಲ. ವೈಜ್ಞಾನಿಕ ಬೆಲೆ ನಿಗಧಿಮಾಡಿಲ್ಲ. ಬದಲಾಗಿ ರೈತನಿಗೆ ಮೋಸಮಾಡಿದೆ. ಸಾಲಮಾಡಿದ ರೈತ ಕಂಗಾಲಾಗಿ ಇನ್ನಷ್ಟು ಪಾತಾಳಕ್ಕಿಳಿದ್ದಿದ್ದಾನೆ. ಆದ್ದರಿಂದ ಸಾಲದಿಂದ ಬೇಸತ್ತಿರುವ ರೈತ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ. ರೈತರ ಉದ್ದಾರಕ್ಕೆ ನೀಡದಿದ್ದ ಸಾಲಕ್ಕೆ ಸರ್ಕಾರವೇ ನೇರಹೊಣೆ ಎಂದರು.
ಫಸಲ್ ಭೀಮಾ ಯೋಜನೆಯಾ ಅವೈಜ್ಞಾನಿಕವಾಗಿದ್ದು, ಈ ಯೋಜನೆಯಿಂದ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ. ಸರ್ಕಾರ ವಿಮಾ ಕಂಪನಿಗಳ ಗುಲಾಮಗಿರಿ ಮಾಡಿದೆ. ನೆರೆಗಾ ಯೋಜನೆಯ ಕಾನೂನು ಗಾಳಿಗೆ ತೂರಲಾಗಿದೆ. ಬರಗಾಲದ ತಾಲೂಕಿನಲ್ಲಿ ಗುಳೆ ಹೋಗುವುದನ್ನು ತಪ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ರ್ಯತರಿಗಾದ ಅನ್ಯಾಯವನ್ನು ತುಂಬಿಕೊಡಬೇಕು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಭಗಳಿಗೆ ಕೂಡಲೇ 50 ಸಾವಿರ ಸಹಾಯಧನ ನೀಡಬೇಕು, ಗೋಶಾಲೆ ಆರಂಭಿಸಬೇಕು, ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸೋ ಯೋಜನೆ ವಿಳಂಭವಾಗಿದೆ. ಕೂಡಲೇ ಆರಂಭಿಸಿ ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಬೇಕು, ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಲೂಕಿನಲ್ಲಿ ರೈತರ ಪರ ಜನಾಂಧೋಲನಕ್ಕೆ ಸಂಘ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಕೆ.ಎನ್.ಸಿದ್ದೇಶ್ ಬೂದಿಹಾಳ್, ಕೆ.ಚಂದ್ರಪ್ಪ, ಜಿ.ಚನ್ನಬಸಪ್ಪ, ಹೆಚ್.ಕೆ.ತಮ್ಮಪ್ಪ, ಆರ್.ಗೋಣೆಪ್ಪ ಕೆ.ಕಲ್ಲಹಳ್ಳಿ, ಕೆ.ಮಲ್ಲೇಶ್, ಕುಂಚೂರು ಕರೀಂಸಾಬ್, ಎಂ.ಪರಸಪ್ಪ, ಕೆ.ಪ್ರಕಾಶ್, ಆರ್.ಗೋಣೆಪ್ಪ, ಹೆಚ್.ಜಗದೀಶ್, ಎಂ.ಶಫೀವುಲ್ಲಾ, ಜ್ಯೋತೆಪ್ಪ, ಬಸವರಾಜ್, ಜಿ.ಕೆ.ಕರಿಯಪ್ಪ,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
