ಜ್ಞಾನವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

ದಾವಣಗೆರೆ :

         ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ, ಜ್ಞಾನವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

          ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಗುರುವಾರ ಲುಂಬಿನಿ ಇನ್‍ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಏರ್ಪಡಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಹಾಗೂ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭ ಹಾಗೂ ಕಾಲೇಜಿನ 6ನೇ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಿಂದಲೇ ಒಳ್ಳೆಯ ಜ್ಞಾನ ವೃದ್ಧಿಸಿಕೊಂಡು, ಉತ್ತಮ ಮೌಲ್ಯಗಳನ್ನು ಜೀವನ ರೂಢಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಶಿಸ್ತಿನ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

        ಪ್ರಸ್ತುತ ಪ್ರತಿಯೊಬ್ಬರೂ ಮೊಬೈಲ್‍ಗಳಿಗೆ ದಾಸರಾಗಿದ್ದಾರೆ. ಮೊಬೈಲ್ ಅನ್ನು ಅನುಕೂಲಕ್ಕೆ ತಕ್ಕಂತೆ ಬಳಿಸಿದರೆ, ಬದುಕು ಕಟ್ಟಿಕೊಳ್ಳಬಹುದು. ಆದರೆ, ಬೇಡವಾಗಿರುವುದನ್ನು ಮೊಬೈಲ್‍ನಿಂದ ಸ್ವೀಕರಿಸಿದರೆ, ಬದುಕು ಸಾರ್ವನಾಶವಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಬಳಸುವಾಗ ಜಾಗೃತರಾಗಿದ್ದುಕೊಂಡು ಎಚ್ಚರದಿಂದ ಮೊಬೈಲ್ ಬಳಸಬೇಕೆಂದು ಕಿವಿಮಾತು ಹೇಳಿದರು.
ಕನ್ನಡ ಜೇನಿಗಿಂತ ಸಿಹಿಯಾದ ಭಾಷೆಯಾಗಿದೆ. ಆದರೆ, ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು ಬಂದಿದೆ. ಅವಶ್ಯಕತೆಗೆ ಬೇಕಾದಷ್ಟು ಮಾತ್ರ ಅನ್ಯಭಾಷೆಯನ್ನು ಕಲಿಯಬೇಕು. ಅಲ್ಲದೆ, ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಜೀವನಕ್ಕೆ ಉಸಿರು ಎಷ್ಟು ಮುಖ್ಯವೋ, ಹಾಗೆಯೇ ಕನ್ನಡವನ್ನು ನಮ್ಮ ಉಸಿರಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.

       ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್ ಎ ರವೀಂದ್ರನಾಥ್ ರವರು ಮಾತನಾಡಿ, ಬೇರೆ ಊರುಗಳಿಗೆ ಹೋಲಿಸಿದರೆ, ಅಚ್ಚ ಕನ್ನಡದ ಬಳಕೆ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವವಾಗಬೇಕು. ರೋಗಿಗಳಿಗೆ ವೈದ್ಯರು ಕೊಡುವ ಔಷಧದ ಚೀಟಿ ಕನ್ನಡದಲ್ಲಿರಬೇಕು. ಅಲ್ಲದೆ, ವೈದ್ಯರು ರೋಗಿಗಳೊಂದಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಸಂಭಾಷಣೆ ನಡೆಸಿದಾಗ, ರೋಗಿಗಳ ನೈಜ ಸಮಸ್ಯೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು.

       ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅದನ್ನು ಉಳಿಸಿ, ಬೆಳೆಸಬೇಕಾದರೆ ಮನೆಯಿಂದಲೇ ಮಕ್ಕಳಿಗೆ ಮಾತೃ ಭಾಷಾ ಪ್ರೇಮ ಬೆಳೆಸಬೇಕೆಂದು ಸಲಹೆ ನೀಡಿದರು.
ವಿಧಾನ ಪರಿಷತ್‍ನ ಮಾಜಿ ಮುಖ್ಯ ಸಚೇತಕ ಡಾ|| ಎ.ಹೆಚ್.ಶಿವಯೋಗಿಸ್ವಾಮಿ ಮಾತನಾಡಿದರು.

           ಈ ಸಂದಭ್ದಲ್ಲಿ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ, ಕೆ.ಜಿ. ಯಲ್ಲಪ್ಪ, ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ನಿಂಗಪ್ಪ, ಸಂಸ್ಥೆಯ ಅಧ್ಯಕ್ಷ ಜಿ.ವೀರಬದ್ರಪ್ಪ, ಕಾರ್ಯದರ್ಶಿ ಜಿ.ವಿ. ಗಂಗಾಧರ್, ಜಿ.ವಿ.ಪ್ರಶಾಂತ್, ಸುನೀಲ್, ಜಯಶೀಲ್ ರೆಡ್ಡಿ, ಬಿ.ಎಸ್. ನಾಗರತ್ನ, ಪದ್ಮಾವತಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link