ಬೆಂಗಳೂರು
ಮಂಡ್ಯದ ಮಿಮ್ಸ್ ಆಸ್ಪತ್ರೆಯ ವೈದ್ಯರು ಶವಗಳ ಮೇಲಿನ ಆಭರಣಗಳನ್ನೂ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ .ಲೋಕಸಾರ ನಾಲೆಗೆ ಬೈಕ್ ಪಲ್ಟಿಯಾಗಿ ಬಿದ್ದು ಗಾಯಗೊಂಡಿದ್ದ ನಾಗಮ್ಮ ಮತ್ತು ಅಂಬಿಕಾ ಇಬ್ಬರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆದರೆ ನಾಗಮ್ಮರ ಮೇಲಿದ್ದ 60ಗ್ರಾಂ ಮಾಂಗಲ್ಯ ಸರ ಮತ್ತು ಅಂಬಿಕಾ ಮೈಮೇಲಿದ್ದ ಎರಡು ಉಂಗುರ ಕಳುವಾಗಿದೆ.
ದಯವಿಟ್ಟು ಈ ಕಾಣೆಯಾದ ಒಡವೆಗಳನ್ನ ನಮಗೆ ನೀಡಿ ಎಂದು ಅಂಬಿಕಾ ಪತಿ ನಾಗರಾಜ್ ಮಿಮ್ಸ್ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಕಳೆ 3 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
