ನೀರು ಕೊಟ್ಟು ಓಟು ಕೇಳಿ..!!

ಪಾವಗಡ

            ಬೀಕರ ಬರಗಾಲ ಪ್ರಭಾವದಿಂದ ಮನಷ್ಯರು, ಜಾನುವಾರುಗಳು ಮತ್ತು ಮೂಕಪ್ರಾಣಿಗಳ ಮೂಕರೋಧನೆ ಹೇಳತೀರದು. ಸತತ ಹದಿನೈದು ವರ್ಷಗಳಿಂದ ಮಳೆ ಬರದೇ ಅಂತರ್ಜಲ ಕುಸಿತದಿಂದ ಸುಮಾರು ಕೀಲೋಮಿಟರುಗಟ್ಟಲೇ ದೂರ ಹೋಗಿ ನೀರು ತರುವುದು 2) ಮಳೆ ಅಭಾವದಿಂದ ಜಾನುವಾರುಗಳಿಗೆ ಮೆವು ಸಿಗದೇ ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿರುವುದು 3)ತುಂಗಭದ್ರಾ ಯೋಜನೆ ಸ್ಥಗಿತವಾಗಿರುವುದು. 4)ಪ್ರತಿ ನಿತ್ಯ ಯುವಕರು ಮತ್ತು ರೈತರು ನಗರ ಪಟ್ಟಣಗಳಿಗೆ ಗುಳೆ ಹೋಗುತ್ತಿರುವುದು. 5)ಸುಮಾರು ಅರ್ದಧಷ್ಟು ನೀರಿನ ಶುದ್ದಿಕರಣ ಘಟಕಗಳು ಸ್ಥಗಿತಗೊಂಡಿರುವುದು.6)ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು ಮತ್ತು ತಘ್ನ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿರುವುದು 7)ಎಲ್ಲಾ ಇಲಾಖೆಗಳಲ್ಲಿ ಸರ್ಕಾರ ದಿಂದ ಬರುವ ವಿವಿಧ ಸೌಲಭ್ಯ ಗಳನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು ಮೀನಮೇಷ ತೋರುತ್ತಿರುವುದು 8)ದಿನಗೂಳಿ ಕಾರ್ಮಿಕರ ಮತ್ತು ಬಡವರ ಕುಟುಂಬಗಳಿಗೆ ಕಂಟಕವಾಗಿರುವ ಮಟ್ಕಾ ದಂಧೆಯನ್ನು ತಡೆಗಟ್ಟುವುದಾಗಲೀ 9)ಜಾನುವಾರುಗಳಿಗೆ ನೀರಿನ ತೊಟ್ಟಿಗಳು ಮೇವು ಬ್ಯಾಂಕ್ ವ್ಯವಸ್ಥೆಯ ಬಗ್ಗೆರಾಗಲೀ 10) ತುಮಕೂರು ರಾಯದುರ್ಗ ರೈಲ್ವೇ ಯೋಜನೆ ಸ್ಥಗಿತಗೊಂಡಿರವುದು 11)ಹಾಲಿ ಮತ್ತು ಮಾಜಿ ಶಾಸಕರು ಜೊತೆಯಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಪಾವಗಡ ಬರಗಾಲ ಮತ್ತು ನಿರೀನ ಬಗ್ಗೆ ಮೈತ್ರಿಯಾಗಿ ಧ್ವನಿ ಗೂಡಿಸಿದ್ದಾರ.

        ಇನ್ನೂ ಹಲವಾರು ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವತ್ತಾದರು ಸಮ್ಮಿಶ್ರ ಸರ್ಕಾರದ ಹಾಲಿ ಮತ್ತು ಮಾಜಿ ಶಾಸಕರು ಚುನಾವಣೆ ಪೂರ್ವಬಾವಿ ಸಭೆ ತರಹ ಮಾಡುವ ಉತ್ಸುಕತೆ ಮತ್ತು ಆಸಕ್ತಿ ಭದ್ರ ನೀರಿನ ಯೋಜನೆಯ ಬಗ್ಗೆ ತೋರಿಸಿದ್ದಾರ ಇಲ್ಲ ಮತ್ತು ನಿನ್ನೆ ಮೊನ್ನೆಯ ತನಕ ತಾಲೂಕಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಾತೀತವಾಗಿ ಎಂಬ ಅಭಿಯಾನ ವನ್ನು ಮತ್ತು ಹಾಲಿ ಮಾಜಿ ಶಾಸಕರು ಮತ್ತು ಹಾಲಿ ಲೋಕಸಭೆ ಸದಸ್ಯರ ಪಾವಗಡ ಕ್ಕೆ ಕೊಡುಗೆಯ ಬಗ್ಗೆ ಕಿಡಿಕಾರಿದ ಯುವಕರು ಚುನಾವಣಾ ಹೊಸ್ಥಿಲಲ್ಲಿ ಅಯಾ ಪಕ್ಷಗಳ ಕೈಗೊಂಬೆಗಳಾಗಿರುವುದು

         ಪಾವಗಡದ ದೊಡ್ಡ ದುರಂತ ಮತ್ತು ಕರ್ನಾಟಕದ ಎಲ್ಲಾ ಮಾಧ್ಯಮಗಳಿಗೆ ಪಾವಗಡದ ನೀರಿನ ಸಮಸ್ಯೆಯ ಕಾಣದಿರುವುದೂ ಮತ್ತು ಕೆಲವು ಪ್ರದೇಶಗಳಿಗೆ ಮತ್ತು ಕೆಲವು ವ್ಯಕ್ತಿಗಳಿಗೆ ಸೀಮಿತ ವಾಗಿವುದು ಒಂದು ವಿಪರ್ಯಾಸ ಮತ್ತು .ಕನ್ನಡ ಪರ ಸಂಘಟನೆಗಳು. ಚಿತ್ರರಂಗದವರೂ .ವಿಚಾರವಾದಿಗಳು . ಮುಖ್ಯ ಮಂತ್ರಿಗಳು .ಜಲಸಂಪನ್ಮೂಲ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇತ್ತಾ ಗಮನ ವಹಿಸಿ ಬೀಕರ ಬರಗಾಲದಿಂದ ತತ್ತರಿಸಿರುವ ಪಾವಗಡವನ್ನು ಉಳಿಸಬೇಕಾಗಿದೆ ಎಂದು ಪಾವಗಡ ಯುವಕರ ವೇದಿಕೆ ಅಧ್ಯಕ್ಷ ಮೀನಕುಂಟೆಹಳ್ಳಿ ಶ್ರೀನಿವಾಸ್ ಸದಸ್ಯರುಗಳಾದ ಜಂಗಮರಹಳ್ಳಿ ಹನುಮೇಶ್.ಬೆಳ್ಳಿಬೆಟ್ಲು ಭರತ್ ಪಾಲೆಗಾರ್. ಭೂಪೂರು ಚಂದ್ರ ಶೇಖರ್ ರೆಡ್ಡಿ. ಯುವಸೇನೆ ದಿವಾಕರ್.ಮದ್ದೆ ನರಸೇಗೌಡ.ತಿಪ್ಪಯ್ಯನದುರ್ಗ ವರ್ಮ ಪ್ರಸಾದ್. ವೈ ಎನ್ ಹೊಸಕೋಟೆ ರಘುನಂದನ್.ವಿಷಾದ ವ್ಯಕ್ತಪಡಿಸಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap