ಚಿತ್ರದುರ್ಗ:
ಶಿಕ್ಷಣದಲ್ಲಿ ಫೇಲಾದ ಮಾತ್ರಕ್ಕೆ ಇಡೀ ಜೀವನವೇ ಹಾಳಾಯಿತು ಎಂದು ನಿರಾಶರಾಗುವ ಬದಲು ಸಾಧನೆ ಇರುವ ನೂರಾರು ದಾರಿಗಳನ್ನು ಕಂಡುಕೊಂಡು ಯಶಸ್ಸು ಗಳಿಸಿ ಎಂದು ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾಮಲ್ಲಿಕಾರ್ಜುನ್ ಕ್ರೀಡಾಪಟುಗಳಿಗೆ ಕರೆ ನೀಡಿದರು.
ನೆಹರು ಯುವ ಕೇಂದ್ರ, ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಮಾತೃಶ್ರೀ ಸಾಂಸ್ಕತಿಕ ಕ್ರೀಡಾ ಯುವ ಸಂಘ, ವಿವಿಧ ಯುವ ಸಂಘಗಳ ಸಹಕಾರದೊಂದಿಗೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ಶಕ್ತಿ ಮೈಗೂಡಿಸಿಕೊಂಡಾಗ ಮಾತ್ರ ಯಾವುದೇ ರಂಗದಲ್ಲಾದರೂ ಕೀರ್ತಿಗಳಿಸಲು ಸಾಧ್ಯ. ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಕೆಟ್ಟ ನಿರ್ಧಾರಗಳನ್ನು ಯಾವುದೇ ಸಂದರ್ಭದಲ್ಲಿಯೂ ತೆಗೆದುಕೊಳ್ಳಬೇಡಿ. ಕ್ರಿಕೆಟ್‍ನಲ್ಲಿ ವಿಶ್ವವೇ ತನ್ನತ್ತ ನೋಡುವಂತ ಸಾಧನೆ ಮಾಡಿರುವ ಸಚಿನ್‍ತೆಂಡೂಲ್ಕರ್ ಎಸ್.ಎಸ್.ಎಲ್.ಸಿ.ಫೇಲಾಗಿದ್ದಾನೆ. ಹಾಗಾಂತ ಚಿಂತಿಸಿಕೊಂಡು ಮನೆಯಲ್ಲಿ ಕೂತಿದ್ದರೆ ಯಾವ ಪ್ರಯೋಜನವೂ ಇರುತ್ತಿರಲಿಲ್ಲ.
ಹಾಗೆ ನೀವುಗಳು ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆ ತರುವ ಪ್ರಯತ್ನ ಮಾಡಿ. ಬರೀ ಮೊಬೈಲ್‍ನಲ್ಲಿಯೇ ಕಾಲ ಕಳೆಯುವುದರಿಂದ ಕಣ್ಣಿಗೆ ಹಾನಿಯಾಗುವುದಲ್ಲದೆ ಮಾನಸಿಕ ಹಾಗೂ ದೈಹಿಕವಾಗಿಯೂ ಸಾಕಷ್ಟು ಬಳಲುತ್ತೀರ. ಆದ್ದರಿಂದ ಸಾಧ್ಯವಾದಷ್ಟು ಮೊಬೈಲ್‍ನಿಂದ ದೂರವಿದ್ದು. ಶಿಕ್ಷಣ ಮತ್ತು ಕ್ರೀಡೆಯ ಕಡೆ ಹೆಚ್ಚಿನ ಗಮನ ಕೊಡಿ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ವಿ.ಎಲ್.ಪ್ರಶಾಂತ್ ಮಾತನಾಡಿ ಸಾಕಷ್ಟು ಯುವಕರು ಇನ್‍ಡೋರ್ ಕ್ರೀಡೆಗಳಿಗೆ ಮಾರುಹೋಗಿರುವುದರಿಂದ ದೇಸಿಕ್ರೀಡೆಗಳು ಕಾಣೆಯಾಗುತ್ತಿವೆ. ದೇಹವನ್ನು ದಂಡಿಸುವ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಿದಾಗ ಮಾತ್ರ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬಹುದು ಎಂದು ಹೇಳಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ನಾಗರಾಜ್, ನೆಹರು ಯುವ ಕೇಂದ್ರದ ಕೆ.ಎಸ್.ವಿಷ್ಣು, ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಬಿ.ಸುರೇಶ್, ನೆಹರು ಯುವಕೇಂದ್ರದ ಲೆಕ್ಕಾಧಿಕಾರಿ ಡಿ.ಪ್ರಕಾಶ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಶ್ರೀನಿವಾಸ್ ಮಳಲಿ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/6-5.gif)