ಬೆಳಗಾವಿ
ಸಮ್ಮಿಶ್ರ ಸರ್ಕಾರದ ಮೇಲೆ ಶಾಸಕರಿಂದ ಯಾವುದೇ ಒತ್ತಡವಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರು ಪರಸ್ಪರ ವಿಶ್ವಾಸದಿಂದ ಇದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರು ಇರಬೇಕು, ಯಾರು ಇರಬಾರದು ಎನ್ನುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೆಲವರನ್ನು ಸಂಪುಟದಿಂದ ಕೈ ಬಿಟ್ಟರೆ ಏನು ಮಾಡುವುದಕ್ಕೂ ಆಗುವುದಿಲ್ಲ. ಇದರಲ್ಲಿ ತಲೆ ಕೆಡಿಸಿಕೊಳ್ಳುವುದು ಏನು ಇಲ್ಲ. ಸಂಪುಟದಲ್ಲಿ ಹೊಸ ರಕ್ತ, ಹಳೆ ರಕ್ತ ಎರಡೂ ಇರಲಿ ಬಿಡಿ ಎಂದರು.
ಈ ಮೂಲಕ ಸಂಪುಟದಲ್ಲಿ ಮೂಲ ಮತ್ತು ವಲಸೆ ಕಾಂಗ್ರೆಸಿನ ಎರಡೂ ಕಡೆಯವರು ಇರಬೇಕು ಎಂದು ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಉದ್ಯಮಿ ಅಂಬಾನಿ ಕುಟುಂಬದ ಮದುವೆಗೆ ಹಾಜರಾದ ಬಗ್ಗೆ ಪ್ರತಿಕ್ರಿಯಿಸಿ, ಆತ್ಮೀಯತೆ, ವಿಶ್ವಾಸಗಳ ಮೇಲೆ ಮದುವೆಯಂತಹ ಖಾಸಗಿ ಸಮಾರಂಭಗಳಿಗೆ ಕೆಲವರನ್ನು ಕರೆಯುತ್ತಾರೆ. ವಿರೋಧ ಪಕ್ಷದವರ ಮದುವೆ ಸಮಾರಂಭಗಳಿಗೆ ಹೋಗುವುದು ಪ್ರೀತಿ ವಿಶ್ವಾಸದಿಂದಷ್ಟೆ. ತಾವೂ ಕೂಡ ಮುಖೇಶ್ ಅಂಬಾನಿ ಪುತ್ರಿ ವಿವಾಹಕ್ಕೆ ಹೋಗಿರುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ