ಕೇಬಲ್ ಖರೀದಿಯಲ್ಲಿ ಬಿಜೆಪಿ ಅವ್ಯವಹಾರ

ಬೆಂಗಳೂರು

        ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಕೇಬಲ್ ಖರೀದಿ ಟೆಂಡರ್ ನಲ್ಲಿ 90 ಕೋಟಿ ಅವ್ಯವಹಾರ ನಡೆದಿದೆ, ಪ್ರಕರಣ ಸಂಬಂಧ ಆಗಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹಾಗೂ 12 ಜನ ಹಿರಿಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ನೀತಿ ಟ್ರಸ್ಟ್ ನ ಅಧ್ಯಕ್ಷ ಜಯಂತ್ ಎಂಬುವರು ಎಸಿಬಿಗೆ ಇಂದು ದೂರು ನೀಡಿದ್ದಾರೆ.

         ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) 68 ಪುಟಗಳ ದಾಖಲೆ ಸಮೇತ ತನಿಖೆಗಾಗಿ ಮಾಹಿತಿ ಒದಗಿಸಿದ್ದು, 2012-13ರನೇ ಸಾಲಿನಲ್ಲಿ, ಬಂಜ್ ಕೇಬಲ್ ಕಾಮಗಾರಿಯ ಟೆಂಡರನ್ನು ಹರಿಯಾಣದ  ಕೇಬಲ್ ಪಡೆದುಕೊಂಡಿತ್ತು,ಆದರೆ ಈ ಕಂಪನಿ ಕಾಮಗಾರಿ ನಡೆಸದೆ ಎಸಿಯಾನ್ ಫ್ಯಾಬ್ ಟೆಕ್ ಪ್ರೈ.ಲಿ ಪೀಣ್ಯ,ಸಂಸ್ಥೆಗೆ ಉಪ ಗುತ್ತಿಗೆ ನೀಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.

       ಏಸಿಯಾನ್ ಪ್ಯಾಬ್ ಸಂಸ್ಥೆಯು 90 ಕೋಟಿ ರೂಗಳ ಸಾಮಗ್ರಿಗಳನ್ನು ಖರೀದಿಸಿತ್ತು. ಈ ಪೈಕಿ ಬೆಸ್ಕಾಂನ ಗುಣಮಟ್ಟ ಮತ್ತು ಲೆಕ್ಕಪರಿಶೋಧನೆಯ ವರದಿಯಲ್ಲಿ ಎಸ್ ಆರ್ ದರಕ್ಕೆ ಹೋಲಿಸಿದರೆ 26.18 ಕೋಟಿ ರೂ ಮೊತ್ತದ ಸಾಮಗ್ರಿಗಳನ್ನು ಕಾಮಗಾರಿಗೆ ಬಳಸಿಕೊಳ್ಳಲಾಗಿದ್ದು, ಉಳಿದ 63.81 ಕೋಟಿ ರೂ ಅವ್ಯವಹಾರ ನಡೆದಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ ಎಂದು ದೂರಲಾಗಿದೆ. ಕಂಪನಿ ದರಗಳಿಗಿಂತ ಶೇ 100% ಹೆಚ್ಚುವರಿ ದರ ವಿಧಿಸಿ ಬೆಸ್ಕಾಂಗೆ 63.81 ಕೋಟಿ ನಷ್ಟವನ್ನುಂಟು ಮಾಡಿದ್ದಾರೆ ಆರೋಪಿಸಿದ್ದಾರೆ.

* ಎಲೆಕ್ಟ್ರಿಕ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಖರೀದಿ ಅಕ್ರಮ :-20 ಸಾವಿರ ಎಲೆಕ್ಟ್ರಿಕಲ್ ಡಿಸ್ಟ್ರಿಬ್ಯೂಷನ್ ಬಾಕ್ಸ್ ಖರೀದಿಸಲಾಗಿದೆ.ಪ್ರತಿ ಬಾಕ್ಸ್ ಗೆ ಮಾರುಕಟ್ಟೆಯಲ್ಲಿ 800 ರೂ ದರವಿದೆ.ಆದರೆ ಬೆಸ್ಕಾಂ 1987ರೂ ಹೆಚ್ಚುದರ ನಿಗದಿಪಡಿಸಿ 20 ಸಾವಿರ ಬಾಕ್ಸ್ ಗಳನ್ನು ಟೆಂಡರ್ ಮೂಲಕ ಖರೀದಿಸಲಾಗಿದೆ.
* 49000 ಕನೆಕ್ಟರ್ ಖರೀದಿಯಲ್ಲಿಯೂ ಅಕ್ರಮ ;ಕನೆಕ್ಟರ್ ಮಾರುಕಟ್ಟೆ ದರ 80 ರೂ, ಬೆಸ್ಕಾಂ ನಿಗದಿ ಮಾಡಿದ್ದು 152, ಖರೀದಿ ಆಗಿರುವುದು 855 ರೂ ಪ್ರತಿ ಕನೆಕ್ಟರ್ ಗೆ 703 ವ್ಯತ್ಯಾಸ ಕಂಡುಬಂದಿದೆ

* ಕಾಮಗಾರಿ ಕಾರ್ಮಿಕರ ವೆಚ್ಚ ಕಿ.ಮೀ 60,000ರೂ ಆದರೆ ದಾಖಲಿಸಿರುವುದು 6 ಲಕ್ಷ ಪ್ರತಿ ಕಿ.ಮೀ ದರ, 5.4 ಲಕ್ಷ ಹೆಚ್ಚುವರಿ ದರ ನಿಗದಿ, ಒಂದು ಡಿಸ್ಟ್ಟಿಬ್ಯೂಷನ್ ಬಾಕ್ಸ್ ಅಳವಡಿಸಲು 15000 ರೂ ನಿಗದಿ

          ಈ ಸಂಬಂಧ ಎಸಿಬಿಗೆ ದೂರು ದಾಖಲಿಸಿರುವ ನೀತಿ ಟ್ರಸ್ಟ್ ಅಧ್ಯಕ್ಷ ಜಯಂತ್ ಮೇಲ್ನೋಟಕ್ಕೆ ಅಕ್ರಮ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದಿನ ಬೆಸ್ಕಾಂ ಎಂಡಿ ಮತ್ತು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. 2012-13ರಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಸ್ ಸೆಲ್ವಕುಮಾರ್ ಮೇಲೂ ದೂರಿನಲ್ಲಿ ಆರೋಪ ಹೊರಿಸಲಾಗಿದೆ.ಸೆಲ್ವಕುಮಾರ್ ಪ್ರಸ್ತುತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಾರ್ಯದರ್ಶಿಯಾಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap