ಬೆಂಗಳೂರು
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಶುಕ್ರವಾರ ಮುಂಜಾನೆ ರಾಜ್ಯದ 17 ಕಡೆಗಳಲ್ಲಿ ನಡೆಸಿದ ಎಕಕಾಲದ ದಾಳಿಯಲ್ಲಿ ಸಿಕ್ಕಿಬಿದ್ದರಿರುವ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಆರ್. ಶ್ರೀಧರ್ ಅವರು ಚಿತ್ರಮಂದಿರ, ವಾಣಿಜ್ಯ ಸಂಕೀರ್ಣ 22 ಕೆಜಿ ಬೆಳ್ಳಿ ಹೊಂದಿರುವುದು ಪತ್ತೆಯಾಗಿದೆ
ಆರ್. ಶ್ರೀಧರ್ ಕುಟುಂಬಸ್ಥರ ಹೆಸರಿನಲ್ಲಿ 2 ಮನೆ,3 ನಿವೇಶನ, 13 ಗುಂಟೆ ಕೃಷಿ ಜಮೀನು, 300 ಗ್ರಾಂ ಚಿನ್ನ 1 ಕಾರು, 1.29 ಲಕ್ಷ ನಗದು 2.5 ಲಕ್ಷ ಎಲ್‍ಐಸಿ ಪಾಲಿಸಿ & ಠೇವಣಿಗಳು 7.34 ಲಕ್ಷ ಗೃಹೋಪಯೋಗಿ ವಸ್ತುಗಳು ಹಾಗೂ 1 ಲಾಕರ್ ಶ್ರೀಧರ್ ಬಳಿ ಪತ್ತೆಯಾಗಿದೆ ಎಂದು ಎಸಿಬಿ ಐಜಿ ಚಂದ್ರಶೇಖರ್ ತಿಳಿಸಿದ್ದಾರೆ.
ದಾವಣಗೆರೆ ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿ ಅವರ ಹೆಸರಿನಲ್ಲಿ 1 ಮನೆ, 11.32 ಎಕರೆ ಜಮೀನು, 1 ಕೆಜಿ 56 ಗ್ರಾಂ ಚಿನ್ನ, 2 ಕೆಜಿ 200 ಗ್ರಾಂ ಬೆಳ್ಳಿ, 1 ಜೀಪ್, 1 ಟ್ರ್ಯಾಕ್ಟರ್, 4 ದ್ವಿಚಕ್ರ ವಾಹನಗಳು, 1.5 ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಯಲ್ಲ್ಲಿ 2 ಲಕ್ಷ, ಠೇವಣಿಗಳು 5 ಲಕ್ಷ ಹಾಗೂ 5 ಲಕ್ಷ ಗೃಹೋಪಯೋಗಿ ವಸ್ತುಗಳು ದೊರೆತಿವೆ.
ಮಂಗಳೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಡಿ.ಮಂಜುನಾಥ ಹೆಸರಿನಲ್ಲಿ 1 ಮನೆ, 1 ನಿವೇಶನ, 443 ಗ್ರಾಂ ಚಿನ್ನ, 983 ಗ್ರಾಂ ಬೆಳ್ಳಿ, 2 ಕಾರ್‍ಗಳು, 1 ದ್ವಿಚಕ್ರ ವಾºನ, 1.5 ಲಕ್ಷ ನಗದು ಹಾಗೂ ವಿವಿಧ ಬ್ಯಾಂಕಗಳಲ್ಲಿ 10.5 ಲಕ್ಷ, 5 ಲಕ್ಷ ಗೃಹ ಬಳಕೆ ವಸ್ತುಗಳು ಪತ್ತೆಯಾಗಿವೆ.
ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ಬಸೆಟಪ್ಪ.ಕೆ ಹೆಸರಿನಲ್ಲಿ 2 ಮನೆ, 1 ನಿವೇಶನ, 1 ವಾಣಿಜ್ಯ ಸಂಕೀರ್ಣ, 250 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ, 1ಕಾರ್,18 ಲಕ್ಷ ಗೃಹೋಪಯೋಗಿ ವಸ್ತುಗಳು, 2 ಲಾಕರ್‍ಗಳು ಪತ್ತೆಯಾಗಿದ್ದು ಶೋಧನೆ ಮಾಡಬೇಕಾಗಿರುತ್ತದೆ ಹಾಗೂ ಬೇರೆಯವರ ಹೆಸರಿನಲ್ಲಿ 37 ಲಕ್ಷ ಚಿನ್ನ ಖರೀದಿಸಿದ ಬಿಲ್‍ಗಳು ದೊರೆತಿವೆ.
ಮೈಸೂರಿನ ಮೂಡಾದ ಕಿರಿಯ ಅಭಿಯಂತರರು,ಕೆ.ಮಣಿ ಹೆಸರಿನಲ್ಲಿ 2 ಮನೆ, 2 ನಿವೇಶನ, 1 ಪೆಟ್ರೋಲ್ ಪಂಪ್, 1 ಎಕರೆ ಜಮೀನು, 378 ಗ್ರಾಂ ಚಿನ್ನ,433 ಗ್ರಾಂ ಬೆಳ್ಳಿ 1 ಕಾರ್, 4 ದ್ವಿಚಕ್ರ ವಾಹನಗಳು, 2.35 ಲಕ್ಷ ಎಲ್‍ಐಸಿ ಬಾಂಡ್‍ಗಳು ಹಾಗೂ 12.33 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು ಇನ್ನು ಶೋಧ ಮುಂದುವರೆದಿದೆ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ