ಕನಕ ಸಾಹಿತ್ಯ ಕೃತಿ ಮುಂದಿನ ತಿಂಗಳು ಲೋಕಾರ್ಪಣೆ: ರೇವಣ್ಣ

ಬೆಂಗಳೂರು

       ಮೌಡ್ಯವನ್ನು ವಿರೋಧಿಸಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕನಕದಾಸರ ಕುರಿತು ರಚಿಸಲಾಗಿರುವ ‘ಕನಕ ಸಾಹಿತ್ಯ ಕೃತಿಯನ್ನು ಮುಂದಿನ ತಿಂಗಳು ಲೋಕಾರ್ಪಣೆ ಮಾಡಲಾಗುವುದು ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದರು.

       ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಆಯೋಜಿಸಿದ್ದ, ಸಂತಕವಿ ಕನಕದಾಸರ 531ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾಡಿನ ಖ್ಯಾತ ಸಾಹಿತಿಗಳ ಜೊತೆಗೂಡಿ, 12 ಸಂಪುಟಗಳಿರುವ ‘ಕನಕ ಸಾಹಿತ್ಯ’ ಪುಸ್ತಕವನ್ನು ಜನವರಿ 5ರಂದು ಹೊರತರಲಾಗುವುದು ಎಂದರು.

       ಬದುಕಿನ ಎಲ್ಲಾ ಸ್ಥರಗಳ ಅನುಭವವನ್ನು ಕಂಡ ಕನಕದಾಸರು ಕೀರ್ತನೆಗಳನ್ನು ರಚಿಸಿ, ಜನಸಾಮಾನ್ಯರ ಭಾಷೆಯಲ್ಲಿ ಹಾಡುವ ಮುಖೇನ ಎಲ್ಲರ ಮನೆಮಾತಾಗಿದ್ದರು. ತನ್ನದೆಲ್ಲವನ್ನು ತ್ಯಾಗ ಮಾಡಿ, ವ್ಯಕ್ತಿಗಳು ಮಾತ್ರ ಪೂಜ್ಯಾರ್ಹರು. ಅಂತಹವರ ಸಾಲಿನಲ್ಲಿ ಕನಕದಾಸರು ಪ್ರಮುಖರು ಎಂದು ಬಣ್ಣಿಸಿದರು.

       ರಾಜ್ಯದ ಮೂಲೆ ಮೂಲೆಗೂ ಕನಕ ಜಯಂತಿ ಪಸರಿಸಿದೆ.ಆದರೆ, ಇತ್ತೀಚೆಗೆ ಜಯಂತಿಗೆ ಜನರ ಆಗಮನ ಕಡಿಮೆ ಬರುತ್ತಿರುವುದು ಶೋಚನೀಯ.ಇನ್ನೂ, ಜನಸಂಖ್ಯೆಗೆ ಅನುಗುಣವಾಗಿ ಜನಾಂಗಕ್ಕೆ ಹೆಚ್ಚು ಸೌಲಭ್ಯಗಳು ಲಭ್ಯವಾಗಬೇಕು ಎಂದು ಹೇಳಿದರು.

ಸಾಮಾಜಿಕ ಹರಿಕಾರ

       ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಮಾತನಾಡಿ, ಎಲ್ಲಾ ವರ್ಗದ ಜನರು ಪರಸ್ಪರ ಪ್ರೀತಿ, ಸಹಕಾರದಿಂದ ಬದುಕಿ ಎಂದು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಹೇಳಿದ್ದಾರೆ. ಅವರ ಆದರ್ಶ ಪಾಲನೆ ಅಗತ್ಯ ಎಂದರು.

        ಬಸವಣ್ಣ ಅವರ ಸಾಲಿನಲ್ಲಿ ಕನಕ ದಾಸರು ನಿಲ್ಲುತ್ತಾರೆ ದೇಶಭಕ್ತಯನ್ನೇ ಇತ್ತೀಚೆಗೆ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಮನುವಾದವನ್ನು ಹೇರಲು ಸಂವಿಧಾನವನ್ನ ಸುಟ್ಟು ಹಾಕುತ್ತಿದ್ದಾರೆ ಎಂದು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

        ಸಮಾರಂಭದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ‘ಸಾವಿನಾಚೆ ಒಂದು ಜಿಜ್ಞಾಸೆ’ ಪುಸ್ತಕ ಬಿಡುಗಡೆ ಮಾಡಿದರು. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕೆ. ರೇವಣಪ್ಪ, ಸಂಘದ ಅಧ್ಯಕ್ಷ ಪಿ.ಎನ್.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಶಿಧರ್,ಸಿ ತಮ್ಮಣ್ಣ ಇನ್ನಿತರರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap