ಬೆಳಗಾವಿ
ಪೊಲೀಸರ ವೇತನ, ಭತ್ಯೆ ಪರಿಷ್ಕರಣೆ ಕುರಿತ ಔರಾದ್ಕರ್ ಸಮಿತಿ ವರದಿ ಅನುಷ್ಠಾನ ವಿಚಾರವಾಗಿ ಯಾವುದೇ ಅನುಮಾನ ಬೇಡ. ವರದಿ ಜಾರಿ ಕುರಿತ ಕಡವನ್ನು ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲಾಗಿದೆ. ವರದಿ ಜಾರಿಗೊಳಿಸುವುದರಲ್ಲಿ ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ಔರಾದ್ಕರ್ ವರದಿ ಅನುಷ್ಠಾನ ಸರ್ಕಾರದ ಪರಿಶೀಲನಾ ಹಂತದಲ್ಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಮೇಲ್ಮನೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತು ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯ ಪ್ರಾಣೇಶ್ ಎಂ.ಕೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯನ್ನು ಏಕಮಾಡುವ ವಿಷಯ ಸದ್ಯಕ್ಕೆ ಸರ್ಕಾರದಲ್ಲಿ ಪರಿಶೀಲನೆಯಲ್ಲಿಲ್ಲ. ಪೊಲೀಸ್ ಮಹಾನಿರ್ದೇಶಕರು ರಚಿಸಿರುವ ಸಮಿತಿ ಬಗ್ಗೆ ತಮಗೆ ಗೊತ್ತಿಲ್ಲ ಎಂದ ಸಚಿವರು ಪೊಲೀಸ್ ಮಹಾನಿರ್ದೇಶಕರು ರಚಿಸಿರುವ ಸಮಿತಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಕೇಂದ್ರದ ವರದಿಯಲ್ಲಿ ಪೊಲೀಸರ ಕರ್ತವ್ಯದ ಅವಧಿಯನ್ನು 8 ಗಂಟೆಗೆ ಅನುಮಾಡಿಕೊಡುವ ಬಗ್ಗೆ ಪೊಲೀಸ್ ಇಲಾಖೆಯಿಂದ ಸಹೆಗಳನ್ನು ಕೇಳಿದ್ದು, ರಾಜ್ಯಾದ್ಯಂತ 3 ಪಾಳಿಯ ಪದ್ಧತಿಯನ್ನು ಹಂತಹಂತವಾಗಿ ಜಾರಿಗೆ ತರುವ ಬಗ್ಗೆ ಅಭಿಪ್ರಾಯ ಬಂದಿದೆ. ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯನ್ನು ಏಕಮುಖ ಮಾಡುವ ವಿಷಯ ಸದ್ಯಕ್ಕೆ ಪರಿಶೀಲನೆಯಲ್ಲಿರುವುದಿಲ್ ಎಂದು ಗೃಹಸಚಿವರು ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
