15, ಜನವರಿ, 2019ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟ- ಮುನೀಶ್ ಮೌದ್ಗಿಲ್

ದಾವಣಗೆರೆ 

         ಭಾವಚಿತ್ರವಿರುವ ವಿಶೇಷ ಮತದಾರರ ಪರಿಷ್ಕರಣಾ ಅಂತಿಮ ಪಟ್ಟಿಯನ್ನು 15, ಜನವರಿ 2019ಕ್ಕೆ ಪ್ರಕಟಿಸಲಾಗುವುದೆಂದು ವಿಶೇಷ ವೀಕ್ಷಕರಾದ ಮುನೀಶ್ ಮೌದ್ಗಿಲ್ ತಿಳಿಸಿದರು.

         ಜಿಲ್ಲಾಢಳಿತ ಭವನದಲ್ಲಿ ಇಂದು ದಾವಣಗೆರೆ ಜಿಲ್ಲೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಸಭೆಯಲ್ಲಿ ವಿವರ ಪಡೆದು ಮಾತನಾಡಿ, ಅರ್ಹತಾ ದಿನಾಂಕ 01-01-2019ಕ್ಕೆ ಸಂಬಂಧಿಸಿದಂತೆ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ಬಗ್ಗೆ ಕೂಲಕುಂಷವಾಗಿ ಪರಿಶೀಲಿಸಿ ಇತ್ಯರ್ಥ ಪಡಿಸುವುದು ಹಾಗೂ ನಿಯಮಾನುಸಾರ ಕ್ರಮವಹಿಸಲು ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಸಹಾಯಕ ನೋಂದಣಾಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಅಂತಿಮ ಮತದಾರರ ಪಟ್ಟಿಯನ್ನು 15, ಜನವರಿ 2019 ರಂದು ಪ್ರಕಟಿಸಲಾಗುವುದೆಂದು ತಿಳಿಸಿದರು.

         ಸೇರ್ಪಡೆಗೆ ಅರ್ಜಿಗಳು ಜಿಲ್ಲೆಯಿಂದ 22,287 ಇದ್ದು, ಅದರಲ್ಲಿ ಜಗಳೂರು 776, ಹರಪಹಳ್ಳಿ 2,434 ಹರಿಹರ 2,769 ದಾವಣಗೆರೆ ಉತ್ತರ 5,691 ದಾವಣಗೆರೆ ದಕ್ಷಿಣ 3,524 ಮಾಯಕೊಂಡ 2,471 ಚನ್ನಗಿರಿ 1,788 ಹೊನ್ನಾಳಿ 1,834 ಅರ್ಜಿಗಳು ಸೇರ್ಪಡೆಯಾಗಿರುತ್ತವೆ. ಇವುಗಳಲ್ಲಿ ಬಿಡತಕ್ಕ ಅರ್ಜಿಗಳು ಒಟ್ಟು 20,124 ತಿದ್ದುಪಡಿ ಅರ್ಜಿಗಳು 8,110 ಒಂದು ಕ್ಷೇತ್ರದಲ್ಲಿ ಒಂದಡೆಯಿಂದ ಮತ್ತೊಂದೆಡೆಗೆ ವರ್ಗಾವಣೆ ಗೊಂಡಿರುವ ಅರ್ಜಿಗಳು 2,508 ಆಗಿರುತ್ತವೆ ಎಂದರು.

       ಸಾಮಾಜಿಕ ಕಾರ್ಯಕರ್ತ ಶ್ರೀಕಾಂತರವರು ನಗರದ 21ನೇ ವಾರ್ಡನಲ್ಲಿ ಬಹುತೇಕ ಮತದಾರರು ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ ಈ ಕುರಿತು ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ಹಾಗೂ ಬಿ.ಎಲ್.ಓಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲವೆಂದರು ಇದಕ್ಕೆ ಪ್ರತಿಕ್ರಿಯಿಸಿದ ಮುನೀಶ್ ಮೌದ್ಗಿಲ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದೆಂದರು.

        ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಉಪವಿಭಾಗಧಿಕಾರಿ ಕುಮಾರಸ್ವಾಮಿ ತಹಶೀಲ್ದಾರರುಗಳಾದ ಸಂತೋಷ್‍ಕುಮಾರ್, ನಾಗರಾಜು, ಎಸ್ ರವಿ, ತುಷಾರ್, ರೆಹಾನ್ ಪಾಷ, ಚುನಾವಣಾ ತಹಶೀಲ್ದಾರ್ ಪ್ರಸಾದ್, ನಗರಪಾಲಿಕೆಯ ಗದಿಗೇಶ್ ಸೇರಿದಂತೆ ಚುನಾವಣಾ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap