ಹೋಮಿಯೋಪತಿಯನ್ನು ಅಭ್ಯಾಸ ಮಾಡುವವರಿಗೆ ರಾಜ್ಯದಲ್ಲಿಯೇ ಸೌಲಭ್ಯ ಕಲ್ಪಿಸಿ : ವಜುಭಾಯಿ ವಾಲಾ

ಬೆಂಗಳೂರು

         ಅಲೋಪತಿ ಪದ್ಧತಿಗಿಂತ ಉತ್ತಮವಾಗಿರುವ ಹೋಮಿಯೋಪತಿಯನ್ನು ಅಭ್ಯಾಸ ಮಾಡುವವರಿಗೆ ರಾಜ್ಯದಲ್ಲಿಯೇ ಕಲಿಯುವ ಸೌಲಭ್ಯ ಮಾಡಬೇಕು ಅದನ್ನು ಬಿಟ್ಟು. ಬೇರೆ ರಾಜ್ಯಕ್ಕೆ ಹೋಗಿ ಕಲಿಯುವಂತಹ ಸ್ಥಿತಿ ಬಂದರೆ ಅದು ಸರ್ಕಾರಕ್ಕೆ ಗೌರವ ತರುವ ವಿಚಾರವಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

         ನಗರದಲ್ಲಿಂದು ಕುಮಾರ ಕೃಪಾದ ಗಾಂಧೀ ಭವನ ಸಭಾಂಗಣದಲ್ಲಿ ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಶನ್ ಆಯೋಜಿಸಿದ್ದ, ಒಂದು ದಿನದ ವಿಚಾರ ಸಂಕಿರಣ ಹಾಗೂ ನೂತನ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ರಾಜ್ಯದಲ್ಲಿ ಹೋಮಿಯೋಪಥಿಕ್ ಶಿಕ್ಷಣದ ವ್ಯಾಪ್ತಿ ಹೆಚ್ಚಾಗಬೇಕು ಎಂದರು.

         ಹೋಮಿಯೋಪಥಿಕ್ ಉತ್ತಮ ವೈದ್ಯಕೀಯ ಪದ್ಧತಿ ಯಾಗಿದೆ.ಈ ಪದ್ದತಿಯಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಬೇಕು.ಆದರೆ, ಹೊರ ರಾಜ್ಯಗಳಿಗೆ ಇಲ್ಲಿನ ವಿದ್ಯಾರ್ಥಿಗಳು ಹೋಗುತ್ತಾರೆ ಎಂಬ ಮಾತಿದ್ದು ಇಂತಹ ಸಮಸ್ಯೆಯನ್ನು ರಾಜ್ಯ ಸರ್ಕಾರ ಬಗೆಹರಿಸಿ,ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.

          ಮನುಷ್ಯ ಎಷ್ಟೇ ಆರ್ಥಿಕವಾಗಿ ಸಂಪತ್ತು ಗಳಿಸಿದರೂ ಜೀವನಕ್ಕೆ ಅತ್ಯಮೂಲ್ಯವಾಗಿದ್ದು ಆರೋಗ್ಯ ಸಂಪತ್ತು ಎಂದ ಅವರು, ಹಳೆಯ ಕಾಲದಲ್ಲಿ ಹಿರಿಯರು ಮನೆಯಲ್ಲಿಯೇ ಔಷಧ ತಯಾರಿಸಿ ಗುಣಮುಖರಾಗುತ್ತಿದ್ದರು. ಅದರಂತೆಯೇ ಇಂದಿನ ದಿನಗಳಲ್ಲಿ ಹೋಮಿಯೋಪಥಿಕ್ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಯಾವುದೇ ಇಂಜೆಕ್ಷನ್, ಆಪರೇಶನ್ ಗಳಿಲ್ಲದೆ ರೋಗಗಳಿಂದ ಗುಣಮುಖ ಆಗಬಹುದು ಎಂದರು.

ಚಿಕಿತ್ಸೆ ಬಗ್ಗೆ ಜಾಗೃತಿ

         ಹಳ್ಳಿಗಳಲ್ಲಿ ಹೋಮಿಯೋಪಥಿಕ್ ಚಿಕಿತ್ಸೆ ಬಗ್ಗೆ ಜನರಿಗೆ ಹೆಚ್ಚು ಪರಿಚಯವಿಲ್ಲ. ಈ ಚಿಕಿತ್ಸೆಯಲ್ಲಿ ರೋಗಿ-ರೋಗ ಎರಡನ್ನು ಅಧ್ಯಯನ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೋಮಿಯೋಪಥಿ ಕೇಂದ್ರ ಕೌನ್ಸಿಲ್ ಮಾಜಿ ಅಧ್ಯಕ್ಷ ಡಾ.ಎಸ್.ಪಿ.ಎಸ್.ಭಕ್ಷಿ ತಿಳಿಸಿದರು.

          ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮ, ಅಲರ್ಜಿ,ಥೈರಾಯಿಡ್ ಸಮಸ್ಯೆಗಳು, ಮೂಲವ್ಯಾದಿ, ಕಿಡ್ನಿಯಲ್ಲಿ ಹಳ್ಳು ಹಾಗೂ ಇನ್ನಿತರ ರೋಗಗಳಿಗೆ ಯಾವುದೇ ಇಂಜೆಕ್ಷನ್, ಆಪರೇಶನ್ ಇಲ್ಲದೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

         ಅಸೋಸಿಯೇಷನ್ ಅಧ್ಯಕ್ಷ ಡಾ.ವೀರಬ್ರಹ್ಮಚಾರಿ ಮಾತನಾಡಿ, ಹೋಮಿಯೋಪಥಿಕ್ ನಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ. ಇಂತಹ ವೈದ್ಯ ಪದ್ಧತಿ ರಾಜ್ಯದಲ್ಲಿ ವಿಸ್ತರಗೊಳ್ಳಬೇಕು.ಇದಕ್ಕಾಗಿ ರಾಜ್ಯ ಸರ್ಕಾರದ ಉತ್ತರ ಕರ್ನಾಟಕ ಭಾಗದಲ್ಲಿ ಹೋಮಿಯೋಪಥಿ ಮಹಾವಿದ್ಯಾಲಯ ಸ್ಥಾಪಿಸಬೇಕೆಂದು ಒತ್ತಾಯ ಮಾಡಿದರು. ವಿಚಾರ ಸಂಕಿರಣದಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ.ನಿರಂಜನ್ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap