ಹಿಂಬಡ್ತಿ ಆದೇಶ ವಾಪಸ್ಸು ಪಡೆಯಲು ಆಗ್ರಹ

ಚಿತ್ರದುರ್ಗ,

       ಸಚಿವ ಸಂಪುಟದ ತೀರ್ಮಾನದಂತೆ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ 2017ನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಮತ್ತು ಕೊಡಲೇ ಹಿಂಬಡ್ತಿ ಅದೇಶವನ್ನು ವಾಪಾಸ್ಸು ಪಡೆದು ಕಾರ್ಯಾದೇಶ ಹೊರಡಿಸುವಂತೆ ಆಗ್ರಹಿಸಿ ನಗರದಲ್ಲಿ ಬುಧವಾರ ರಾಜ್ಯ ಸರ್ಕಾರಿ ಎಸ್.ಸಿ.ಎಸ್.ಟಿ. ನೌಕರರ ಸಮನ್ವಯ ಸಮಿತಿ ಜಿಲ್ಲಾ ಶಾಖೆಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

        ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ವರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರವೂ ಸಹಾ ಗೆಜೆಟ್‍ನಲ್ಲಿ ಪ್ರಕಟ ಮಾಡುವುದರ ಮೂಲಕ ಜಾರಿ ಮಾಡಿದೆ ಸದರಿ ಕಾಯ್ದೆಯಲ್ಲಿ ನೀಡಿರುವ ಜೇಷ್ಠತೆ ಮತ್ತು ಬಡ್ತಿಗಳು ಸಿಂಧುವಾಗಿದ್ದು, ಸದರಿ ಬಡ್ತಿ ಮತ್ತು ಜೇಷ್ಠತೆಯನ್ನು ಸಂರಕ್ಷಿಸುವುದು ಮತ್ತು ಭಂಗತರಕ್ಕದ್ದಲ್ಲ ಎಂಬ ಅಂಶಗಳನ್ನು ತಿಳಿಸಿಲಾಗಿದೆ.

         ಆದ್ದರಿಂದ ಎಲ್ಲಾ ಹಿಂಬಡ್ತಿಗಳನ್ನು ಹಿಂದಕ್ಕೆ ಪಡೆದು ಆದೇಶ ಹೊರಡಿಸಿದ ನಂತರ 1978 ರಿಂದ ನೀಡಿರುವ ಬಡ್ತಿ ಮತ್ತು ನೇಮಕಾತಿಗಳು ಕಾನೂನು ಬದ್ದವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜೇಷ್ಠತಾ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕಾಗುತ್ತದೆ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದು ಈ ಕಾಯ್ದೆಯನ್ನು ಜಾರಿ ಮಾಡದಂತೆ ಮಸಲತ್ತನ್ನು ರೂಪಿಸಿದ್ದಾರೆ ಎಂದು ಆರೋಪಿಸಿದರು.

         ಅಧಿಕಾರಿಗಳ ಈ ನಿರ್ಧಾರವನ್ನು ಸಮಿತಿ ಮತ್ತು ದಲಿತ ಸಂಘಟನೆಗಳು ಖಂಡಿಸಿದ್ದು, ಕಾಯ್ದೆಯನ್ನು ಯಾಥವತ್ತಾಗಿ ಜಾರಿ ಮಾಡಬೇಕು, ಪವಿತ್ರ ಪ್ರಕರಣದಿಂದ ಹಿಂಬಡ್ತಿ ಹೊಂದಿರುವ ಎಲ್ಲಾ ಅಧಿಕಾರಿ ಮತ್ತು ನೌಕರರಿಗೂ ಹಿಂಬಡ್ತಿ ಅದೇಶವನ್ನು ಹಿಂಬಡ್ತಿ ಹೊಂದಿರುವ ದಿನಾಂಕದಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು.

         ಈ ಸಂದರ್ಭದಲ್ಲಿ ಬಸವನಾಗ್ತಿದೇವ ಶೀಗಳು, ಸಮಿತಿಯ ಗೌರವಾಧ್ಯಕ್ಷ ಪರಶುರಾಮ್, ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಕೋಶಾಧ್ಯಕ್ಷ ಜಗದೀಶ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap