ಅಧಿವೇಶನ ಬಹುತೇಕ ಯಶಸ್ವಿ: ಜಯಮಾಲಾ

ಬೆಳಗಾವಿ

         ವಿಧಾನಮಂಡಲದ ಚಳಿಗಾಲ ಅಧಿವೇಶನದ ಕೊನೆಯ ಎರಡು ದಿನಗಳನ್ನು ಹೊರತುಪಡಿಸಿದರೆ 10 ದಿನಗಳ ಕಲಾಪ ಫಲಪ್ರದವಾಗಿ ಪೂರ್ಣಗೊಂಡಿದೆ ಎಂದು ಮೇಲ್ಮನೆಯ ಸಭಾನಾಯಕಿ ಹಾಗೂ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

          ಬೆಳಗಾವಿಯಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಗೊಂದಲದ ನಡುವೆಯೂ ಮೈತ್ರಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸಮಗ್ರ ಕರ್ನಾಟಕದ ದೃಷ್ಟಿಯಲ್ಲಿಟ್ಟಕೊಂಡು ರೈತರು ಹಾಗೂ ಜನರ ಪರ ಕೆಲಸ ಮಾಡುತ್ತಿದೆ. ಪ್ರತಿಭಟಿಟಿಸುವುದನ್ನೇ ತಮ್ಮ ಚಾಳಿ ಮಾಡಿಕೊಂಡಿರುವ ಪ್ರತಿಪಕ್ಷ ಬಿಜೆಪಿ ಸದಸ್ಯರು, ಅಧಿವೇಶನದಲ್ಲಿ ಇತರ ಸದಸ್ಯರ ಹಕ್ಕುಗಳನ್ನು ಕಸಿಯುವ ಕೆಲಸ ಮಾಡಿದರು ಎಂದು ಸಚಿವೆ ಜಯಮಾಲ ದೂರಿದರು.

          ಬಿಜೆಪಿಯವರು ಅಧಿವೇಶನದಲ್ಲಿ ಉದ್ದೇಶ ಪೂರ್ವಕವಾಗಿ ಕಲಾಪ ಅಡ್ಡಿಪಡಿಸಿದ್ದು, ಅವರು ಜನರಿಗೆ ಉತ್ತರ ಕೊಡಬೇಕಿದೆ ಎಂದರು. ಸಚಿವ ಸಂಪುಟದಿಂದ ತಮ್ಮನ್ನು ಕೈಬಿಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮಗೆ ಅದರ ಬಗ್ಗೆ ಮಾಹಿತಿಯಿಲ್ಲ. ಹಿರಿಯರು ನೀಡಿದಂತಹ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದೇನೆ ಎಂದು ಸಮರ್ಥಿಸಿಕೊಂಡರು..

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap