ಹುಳಿಯಾರು:
ಹುಳಿಯಾರಿನಲ್ಲಿ ನೂತನವಾಗಿ ಶ್ರೀ ಭತ್ರಪತಿ ಶಿವಾಜಿ ಮಹಾರಾಜ್ ಛಾರಿಟಬಲ್ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ.
ಟ್ರಸ್ಟ್‍ನ ಅಧ್ಯಕ್ಷರಾಗಿ ಕಂಪನಹಳ್ಳಿಯ ಸುರೇಶ್ ರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹುಳಿಯಾರಿನ ಯತೀಶ್ ರಾವ್, ಕಾರ್ಯದರ್ಶಿಯಾಗಿ ವಳಗೆರೆಹಳ್ಳಿಯ ವಿ.ಬಿ.ವಿಠಲ್ ರಾವ್, ಸಹಕಾರ್ಯದರ್ಶಿಯಾಗಿ ಹುಳಿಯಾರಿನ ಎಚ್.ಇ.ನಾರಾಯಣರಾವ್, ಖಜಾಂಜಿಯಾಗಿ ವಳಗೆರೆಹಳ್ಳಿಯ ವೆಂಕಟೇಶ್ ರಾವ್ ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ರಾಮ್ ರಾವ್, ಶಂಕರ್ ರಾವ್, ಸುರೇಶ್ ರಾವ್, ಭಗವಂತರಾವ್, ವಿ.ಕೆ.ನರಸಿಂಹರಾವ್, ವಿ.ಬಿ.ಸಂತೋಷ್ ರಾವ್, ವಿ.ಪಿ.ನಾಗೇಂದ್ರರಾವ್, ಎಚ್.ಎಲ್.ವಿನಯ್ ರಾವ್, ವಿ.ಎಲ್.ನಾಗರಾಜರಾವ್, ಎಚ್.ಬಿ.ಮಧುರಾವ್, ಎನ್.ರವೀಂದ್ರಕುಮಾರ್, ಚೇತನ್ ಅವರುಗಳು ಆಯ್ಕೆಯಾಗಿದ್ದಾರೆ
ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮುಖ್ಯ ಶಿಕ್ಷಕ ಬಿ.ಬಿ.ನಂದವಾಡಗಿ, ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಜಯಕರ್ನಾಟಕ ಅಧ್ಯಕ್ಷ ಮೋಹನ್ ಕುಮಾರ್ ರೈ, ಗ್ರಾಪಂ ಸದಸ್ಯರುಗಳಾದ ಶಿವಾಜಿರಾವ್, ಚಂದ್ರಶೇಖರ್, ಬಾಪುರಾವ್, ಗ್ರಾಮದ ಮುಖಂಡ ಪಾಂಡಪ್ಪ, ಭಜರಂಗದಳದ ಮೋಹನ್, ಸಮಾಜಸೇವಕ ಕೆ.ಎನ್.ಉಮೇಶ್ ಅವರು ನೂತನ ಟ್ರಸ್ಟ್ ಉದ್ಘಾಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ