ಬೆಂಗಳೂರು
ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಮೃತಪಟ್ಟು ಮೂವರು ಗಾಯಗೊಂಡ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಹೈಪರ್‍ಸಾನಿಕ್ ಆಂಡ್ ಶಾಕ್‍ವೇವ್ ಸಂಶೋಧನಾ ಕೇಂದ್ರಕ್ಕೆ ಸಂಸ್ಥೆಯ .ವಿಕ್ರಂ ಜಯರಾಮ್ ನೇತೃತ್ವದ ತಜ್ಞರ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಂಶೋಧನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ .ವಿಕ್ರಂಜಯರಾಮ್ ನೇತೃತ್ವದ ಸಮಿತಿ ನಾಲ್ವರ ತಜ್ಞರು,ನ್ಯಾಷನಲ್ ಏರೋನಾಟಿಕಲ್ ಲ್ಯಾಬರೇಟರಿ (ಎನ್‍ಎಎಲ್) ಹಿರಿಯ ಅಧಿಕಾರಿಗಳು ಹಾಗೂ ಸಂಸ್ಥೆಯ ಸುರಕ್ಷತಾ ಅಧಿಕಾರಿಗಳು ಭೇಟಿ ನೀಡಿ ಸುಮಾರು ಎರಡೂವರೆ ಗಂಟೆಗಳ ಪರಿಶೀಲನೆ ನಡೆಸಿತು.
ಪ್ರಯೋಗಾಲಯದಲ್ಲಿ ಯಾವ ರೀತಿಯ ಪ್ರಯೋಗ ನಡೆಯುತ್ತಿತ್ತು ಯಾವ ರೀತಿಯ ಅನಿಲ ಬಳಕೆ ಮಾಡಲಾಗಿತ್ತು ಪರೀಕ್ಷೆ ಸರಿಯಾಗಿ ನಡೆಯುತ್ತಿತ್ತೇ ಯಾವ ಕಂಪೆನಿಯಿಂದ ಜಲಜನಕ ಮತ್ತು ಆಮ್ಲಜನಕ ಸಿಲಿಂಡರ್‍ಗಳು ಬಂದಿವೆ ಮತ್ತು ಸ್ಥಳದ ಚಿತ್ರಣವನ್ನು ತಂಡ ಸಮಗ್ರವಾಗಿ ಅಧ್ಯಯನ ನಡೆಸಿತು.
ಪ್ರಯೋಗಾಲಯದ ಮುಖ್ಯಸ್ಥ .ಜಗದೀಶ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಂಡಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು. ಜತೆಗೆ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅತುಲ್ಯ ಅವರಿಂದಲೂ ತಜ್ಞರ ಸಮಿತಿ ಸದ್ಯದರಲ್ಲೇ ಮಾಹಿತಿ ಪಡೆಯಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಚಿಕಿತ್ಸೆ ಮುಂದುವರಿಕೆ: ಸ್ಫೋಟದಿಂದ ಗಾಯಗೊಂಡಿದ್ದ ಮೂವರ ಪೈಕಿ ಒಬ್ಬರು ಡಿಸ್ ಚಾರ್ಜ್ ಆಗಿದ್ದು, ಉಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ಅವಘಡದದಿಂದ ಚಿಕಿತ್ಸೆ ಪಡೆಯುತ್ತಿರುವರ ಮೂವರು ಸಂಶೋಧಕರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಎಂ.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದ ಮೂವರಲ್ಲಿ ಚಿಕ್ಕ ಪ್ರಮಾಣದ ಗಾಯಗಳಾಗಿದ್ದ ಅತುಲ್ಯ ಉದಯ್‍ಕುಮಾರ್ ಎಂಬುವವರು ಸಂಪೂರ್ಣ ಚೇತರಿಸಿಕೊಂಡಿದ್ದು, ಅವರನ್ನು ಮಂಗಳವಾರ ಮನೆಗೆ ಕಳುಹಿಸಲಾಗಿದೆ. ಉಳಿದಂತೆ ನರೇಶ್‍ಕುಮಾರ್ ಅವರಿಗೆ ಬಲಗಾಲಿನ ಮೂಳೆ ಮುರಿದಿದ್ದು, ಬಲ ಎದೆಯ ಆಳದವರೆಗೂ ಗಾಯಗಳಾಗಿದೆ.
ಎಡ ಭಾಗದ ಎದೆಯಲ್ಲಿ ಚುಚ್ಚಿದ ರೀತಿಯಲ್ಲಿ ಗಾಯಗಳಾಗಿರುವುದರಿಂದ ಚರ್ಮದ ಕಸಿ ಮಾಡಬೇಕಿದ್ದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಹೆಚ್ಚಿನ ಪೆಟ್ಟಾಗಿರುವ ಕಾರ್ತಿಕ್ ಶೆಣೈ ಅವರಿಗೆ ಹೊಟ್ಟೆಯ ಬಲಭಾಗದಲ್ಲಿ ಗಾಯಗಳಾಗಿದ್ದು, ಸೊಂಟದ ಎಡ ಭಾಗದ ಮಾಂಸಖಂಡಗಳಿಗೆ ಪೆಟ್ಟಾಗಿದೆ. ಮುಖದ ಒಂದು ಭಾಗ ಸುಟ್ಟಿದೆ. ದೇಹದ ಇತರೆ ಭಾಗದಲ್ಲಿ ಮೂಳೆಗಳು ಮುರಿದಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
