ಅಪರೂಪದ ಸ್ನೇಹಮಯಿ ರಾಜಕಾರಣಿ ಅನಂತ್‍ಕುಮಾರ್ : ಕಂಬನಿ ಮಿಡಿದ ಕುಣಿಗಲ್ ಬಿಜೆಪಿ

ಕುಣಿಗಲ್

          ಕೇಂದ್ರ ಸಚಿವರು ಹಾಗೂ ಹಿರಿಯ ರಾಜಕಾರಣಿ ಬಿಜೆಪಿ ಪಕ್ಷದ ಕಟ್ಟಾಳು ಆದ ಅನಂತ್‍ಕುಮಾರ್ ನಿಧನಕ್ಕೆ ತಾಲ್ಲೂಕು ಬಿಜೆಪಿ ಘಟಕ ಸೇರಿದಂತೆ ಅವರ ಅಪಾರ ಅಭಿಮಾನಿಗಳು ಪಟ್ಟಣದ ಗ್ರಾಮದೇವತೆ ವೃತ್ತದ ಬಳಿ ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಚವನ್ನಿಟ್ಟು ಮೌನಾಚರಣೆಯೊಂದಿಗೆ ನಮಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

       ಬಿಜೆಪಿ ಮುಖಂಡ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ. ತಿಮ್ಮಪ್ಪ ಮಾತನಾಡಿ, ಇವರೊಬ್ಬರು ಅತ್ಯುತ್ತಮ ವ್ಯಕ್ತಿತ್ವವುಳ್ಳ ಅಪರೂಪದ ರಾಜಕಾರಣಿಯಾಗಿದ್ದರು. ಇವರ ಅಗಲಿಕೆಯಿಂದ ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರದಲ್ಲಿ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಂತಾಗಿದೆ. ಅಲ್ಲದೆ ಉತ್ತಮ ಜನಪರ ರಾಜಕಾರಣಿಯನ್ನ ಕಳೆದುಕೊಂಡ ದುಃಖ ನಮ್ಮ ರಾಜ್ಯದ ಜನರನ್ನ ಕಾಡುತ್ತಿದೆ ಎಂದರು. ಅವರು ಅನಂತ್‍ಕುಮಾರ್ ರವರು ಬಹಳ ಚಿಕ್ಕವಯಸ್ಸಿನಿಂದಲೇ ದೊಡ್ಡ ನಾಯಕರುಗಳ ಬಳಿ ಗುರುತಿಸಿಕೊಂಡಂತಹ ವ್ಯಕ್ತಿ.

         ಇವರ ಭಾಷಣದ ಕಲೆ ಮತ್ತು ತಾಳ್ಮೆ ಹಾಗೂ ಜಾಣ್ಮೆಯ ಮಾತುಗಾರಿಕೆ ಕೇಂದ್ರದ ನಾಯಕರುಗಳನ್ನ ಸೆಳೆದಿತ್ತು ಎಂದ ಅವರು, ಎ.ಬಿ.ವಿ.ಪಿ ಸಂಘಟನೆಯಿಂದ ಬಂದ ಅನಂತಕುಮಾರ್ ಅವರು ಇಂದು ರಾಷ್ಟ್ರರಾಜಕಾರಣದಲ್ಲಿ ಚಿರಪರಿಚಿತರಾಗಿದ್ದರು. ಬೆಂಗಳೂರಿನ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದ ಇವರು ತುರ್ತು ಪರಿಸ್ಥಿತಿಯಲ್ಲಿ 40 ದಿನಗಳಕಾಲ ಸೆರೆವಾಸ ಅನುಭವಿಸಿದ್ದಲ್ಲದೆ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ಮತ್ತು ಎಬಿವಿಪಿಯಲ್ಲ್ಲೂ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದರು.

           ಇಂದು ಅವರೇ ನಮಗೆಲ್ಲಾ ಮಾದರಿ ನಾಯಕರು. ಅವರ ಹಾದಿಯಲ್ಲಿ ಎಲ್ಲರೂ ಮುನ್ನಡೆಯೋಣ ಎಂದರು. ಬಿಜೆಪಿ ಪಕ್ಷದ ಕಾರ್ಯದರ್ಶಿ ವೈ.ಹೆಚ್.ರವಿಚಂದ್ರ ಮಾತನಾಡಿ, ಅನಂತ್ ಕುಮಾರ್ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಬಡವರ ರೈತರ ಪರವಾಗಿ ಅನೇಕ ಕಾರ್ಯಕ್ರಮ ರೂಪಿಸಿದ್ದರು. ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದ ಇವರು ರಸಗೊಬ್ಬರದ ಕೊರತೆ ಇಲ್ಲದಂತೆ ನೋಡಿಕೊಂಡು ರೈತಾಪಿ ವರ್ಗಕ್ಕೆ ಉತ್ತಮವಾಗಿ ಸೇವೆ ದೊರೆಯುವಂತೆ ಮಾಡಿದ್ದ ಇವರು, ಇಂದು ಹೃದಯ ಸಮಸ್ಯೆಯಿಂದ ಬಳಲುವವರಿಗೆ ಸ್ಟಂಟ್ ಕಡಿಮೆ ಬೆಲೆಯಲ್ಲಿ ಸಿಗುವಂತೆ ಕೇಂದ್ರ ಸರ್ಕಾರದ ಗಮನಸೆಳೆದ ಇವರು ಅನೇಕ ಜನಪರ ಕಾಳಜಿವಹಿಸಿ ಉತ್ತಮ ಸೇವೆ ಮಾಡಿದ್ದಾರೆ ಎಂದರು. ಬಿಜೆಪಿ ಮುಖಂಡರಾದ ನಂದಿನಿಮಿಲ್ಕ್‍ಡೈರಿ ಸುರೇಶ್, ರೇಣುಕಪ್ಪ, ಕೋಟೆ ರಮೇಶ್, ಶಿವಣ್ಣ, ಶ್ರೀನಿವಾಸ್, ಬಿದನಗೆರೆ ದೇವರಾಜ್, ಸತೀಶ್, ಮುಂತಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link