ಬೆಂಗಳೂರು
ಶೋಕಿಗಾಗಿ ದುಬಾರಿ ಕೆಟಿಎಂ ಡ್ಯೂಕ್ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿ, 4.5 ಲಕ್ಷ ರೂ. ಮೌಲ್ಯದ 3 ಡ್ಯೂಕ್ ಬೈಕ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಾಜಿನಗರದ ಮಹಮದ್ ಉಮ್ರಾಜ್ ಪಾಷ ಅಲಿಯಾಸ್ ಉಮ್ರಾಜ್ (32), ಆರ್.ಟಿ. ನಗರದ ಜಹೀರ್ ಅಲಂ ಅಲಿಯಾಸ್ ಜಾವಿದ್ (35) ಬಂಧಿತ ಆರೋಪಿಗಳಾಗಿದ್ದಾರೆ.
ಬಿಕಾಂ ಪದವೀಧರನಾಗಿದ್ದ ಉಮ್ರಾಜ್, ಐಬಿಎಂ ಕಂಪನಿಯಲ್ಲಿ ಉದ್ಯೋಗ ಬಿಟ್ಟು ಹೊಸನಗರದ ಫೈವ್ ಸ್ಟಾರ್ ಚಿಕನ್‍ನಲ್ಲಿ ಡೆಲಿವೆರಿ ಬಾಯ್ ಆಗಿದ್ದ ಜಾವಿದ್ ಜತೆ ಸ್ನೇಹ ಬೆಳೆಸಿದ್ದ. ಮತ್ತು ಬರುವ ನೈಟ್ರೋಜನ್ ಮಾತ್ರೆಗಳನ್ನು ಸೇವಿಸುತ್ತಿದ್ದ ಆರೋಪಿಗಳು ಶೋಕಿಗಾಗಿ ದುಬಾರಿ ಡ್ಯೂಕ್ ಬೈಕ್‍ಗಳನ್ನು ಕಳವು ಮಾಡುತ್ತಿದ್ದರು.
ಕಳವು ಮಾಡಿದ ಬೈಕ್‍ಗಳನ್ನು ಆರೋಪಿ ಉಮ್ರಾಜ್, ಥಣಿಸಂದ್ರದ ಚಿಕ್ಕಮ್ಮನ ಮನೆಯ ನೆಲಮಹಡಿಯಲ್ಲಿ ಬಿಟ್ಟಿದ್ದರು. ಇಲ್ಲಿಯವರೆಗೆ ಯಾವುದೇ ಬೈಕ್ ಅನ್ನು ಮಾರಾಟ ಮಾಡಿರಲಿಲ್ಲ.
ಆರ್.ಟಿ. ನಗರದ ದೇವೇಗೌಡ ರಸ್ತೆಯ ವಿ3 ಪಿಜಿ ಮುಂಭಾಗ ನಿಲ್ಲಿಸಿದ್ದ ಡ್ಯೂಕ್ ಬೈಕ್ ಅನ್ನು ಕಳೆದ ಜನವರಿ 10 ರಂದು ಕಳವು ಮಾಡಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್‍ಪೆಕ್ಟರ್ ಅಜಯ್, ಸಬ್ ಇನ್ಸ್‍ಪೆಕ್ಟರ್ ಪ್ರೇಮಕುಮಾರಿ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ