ಬೆಂಗಳೂರು ದಕ್ಷಿಣದಲ್ಲಿ ಭಿನ್ನಮತ ಇಲ್ಲ: ಯಡಿಯೂರಪ್ಪ

ಬಳ್ಳಾರಿ:

     ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಪಕ್ಷದ ಮುಖಂಡರುಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

      ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾಡಿ. ಆರಂಭದಲ್ಲಿ‌ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು, ಆದರೆ ಈಗ ಎಲ್ಲರ ಜೊತೆ ಸಮಾಲೋಚನೆ ಮಾಡಿ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ತಿಳಿಸಿದ್ದು ಇಂದು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊ ಳ್ಳಲಿದ್ದಾರೆಂದರು.

      ಕಳೆದ ಬಾರಿ‌ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದಾಗ 17 ಸ್ಥಾನ ನಿಮಗೆ ದೊರೆತಿತ್ತು ಈಗ ಅವರಿಬ್ಬರು ಒಂದಾಗಿದ್ದಾರೆ ಎಂಬ ಪ್ರಶ್ನೆಗೆ ಅದುವೇ ನಮಗೆ ವರದಾನವಾಗಿ ಬಳ್ಳಾರಿ ಸೇರಿದಂತೆ 22 ಸ್ಥಾನಗಳಲ್ಲಿ ಜಯ ದೊರೆಯಲಿದೆಂದರು.

      ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಜಯ ದೊರೆತರೆ, ರಾಜ್ಯದಲ್ಲಿನ ಜೋಡಿ ಸರಕಾರ ಅಸ್ತಿತ್ವ ಕಳೆದುಕೊಳ್ಳಲಿದೆಂದರು.

       ಕಲ್ಬುರ್ಗಿಯ ಅಭ್ಯರ್ಥಿ ಉಮೇಶ್ ಜಾದವ್ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರುವುದು  ಉತ್ತಮ ಬೆಳವಣಿಗೆ ಎಂದರು.

ಸುಮಲತ ಗೆಲುವು:

       ಮಂಡ್ಯದಲ್ಲಿ ತಮ್ಮ ಪಕ್ಷ ಬೆಂಬಲಿಸಿರುವ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಅವರು ಗೆಲುವು ಖಚಿತ ಅದಕ್ಕಾಗಿ ಸೋಲಿನ ಹತಾಶೆಯ ಭಾವನೆಯಿಂದ ಜೆಡಿಎಸ್ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ. ಅಂಬರೀಷ್ ಇದ್ದಿದ್ದರೆ ಅವರೆಲ್ಲ ಹೀಗೆ ಮಾತನಾಡುತ್ತಿದ್ದರೇ ಎಂದ ಅವರು, ಜೆಡಿಎಸ್ ನವರಿಗೆ ಅಲ್ಲಿನ ಮತದಾರರೇ ತಕ್ಕ ಪಾಠಕಲಿಸಲಿದ್ದಾರೆ.

ಡೈರಿ ಸುಳ್ಳು:

      ಪಕ್ಷದ ವರಿಷ್ಟರಿಗೆ ಹಣ ಸಂದಾಯ ಮಾಡಿದೆ ಎಂಬ ಡೈರಿ ಬಗ್ಗೆ ಉಲ್ಲೇಖಿಸಿ ಮಾತನಾಡುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತರವಲ್ಲ, ಅದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ಬಿಡುವೆ, ಇಲ್ಲದಿದ್ದರೆ ಅವರು ಕ್ಷಮೆ ಕೇಳಲಿ ಎಂದರು.

      ಮೋದಿ ಅವರು ದೇಶದ ಸಣ್ಣ ನತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿ ನೀಡುವುದು ಸೇರಿದಂತೆ ದೇಶದ ಬಡ ಜನರಿಗೆ ನೀಡಿರುವ ಉತ್ತಮ ಯೋಜನೆಗಳಿಂದ ಈ ಬಾರಿ ದೇಶದಲ್ಲಿ ಬಿಜೆಪಿಗೆ 300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದೊರೆಯಲಿದೆಂದರು.ಪಕ್ಷದ ಅಭ್ಯರ್ಥಿ ವೈ.ದೇವೇಂದ್ರಪ್ಪ,, ಗುರುಲಿಂಗನಗೌಡ, ರಾಮಲಿಂಗಪ್ಪ, ಗುತ್ತಿಗನೂರು ವಿರೂಪಾಕ್ಷಗೌಡ, ಡಾ.ಮಹಿಪಾಲ್. ಬಿ.ಶಿವಕುಮಾರ್, ಶ್ರೀನಿವಾಸ್ ಪಾಟೀಲ್ ಮೊದಲಾದವರು ಇದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap