ಬೆಂಗಳೂರು:

ವಿವಾದಾತ್ಮಕ ಸಾಹಿತಿ ಎಂದೇ ಖ್ಯಾತರಾದ ಕೆ.ಎಸ್.ಭಗವಾನ್ ಶ್ರೀರಾಮ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ತಮ್ಮ ಪುಸ್ತಕದಲ್ಲಿ ಅವಮಾನಿಸಿದಕ್ಕೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಗವಾನ್ ಅವರ ವಿರುದ್ದ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಭಗವಾನ್ ಅವರು ಈ ಹಿಂದೆಯೇ ರಾಮ ಮಂದಿರ ಏಕೆ ಬೇಕು? ಎಂಬ ಪುಸ್ತಕವನ್ನು ಬರೆದಿದ್ದರು. ಇದೀಗ ಅದು ಎರಡನೇ ಮುದ್ರಣವನ್ನು ಕಂಡಿದೆ. ಈ ಪುಸ್ತಕದಲ್ಲಿ ವಾಲ್ಮೀಕಿ ಅವರು ಕಂಡಂತೆ ಶ್ರೀರಾಮ ದೇವರಲ್ಲ. ಆತ ಮಾಂಸ ಭಕ್ಷಣೆ ಮಾಡುತ್ತಿದ್ದ. ಮದ್ಯ ಸೇವಿಸುತ್ತಿದ್ದ. ಸ್ತ್ರೀಯರ ನೃತ್ಯವನ್ನು ವೀಕ್ಷಿಸುತ್ತಿದ್ದ ಎಂಬ ಸಾಲುಗಳನ್ನು ಬರೆಯಲಾಗಿದೆ. ಈ ಸಾಲುಗಳು ಇದೀಗ ವಿವಾದಕ್ಕೆ ಕಾರಣವಾಗಿದೆ.
ಭಗವಾನ್ ಅವರ ವಿರುದ್ಧ ಬಲಪಂಥೀಯ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದ್ದು, ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ. ಮೈಸೂರಿನ ಹಿಂದೂ ಜಾಗೃತಿ ವೇದಿಕೆ ಆಧ್ಯಕ್ಷ ಜಗದೀಶ್ ಹೆಬ್ಬಾರ್ ಅವರು ಭಗವಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
