ಜಗಳೂರು :
ಇಮಾಂ ಸಾಹೇಬರು ರಾಜಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಹಿಂದುಳಿದ ಪ್ರದೇಶದಲ್ಲಿ ಜನಿಸಿದಂತ ಇವರು ಜಗಳೂರಿನ ಕಿರ್ತಿಯನ್ನು ರಾಜ್ಯದ್ಯಾಂತ ಹರಡುವಂತೆ ಮಾಡಿದ್ದರು ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ಪಟ್ಟಣದ ಇಮಾಂ ಸ್ಮಾರಕ ಶಾಲೆ ಮಕ್ಕಳ ಹಬ್ಬ ಹಾಗೂ ಶಾಲಾವಾರ್ಷಿಕೊತ್ಸೋವ ಕಾರ್ಯಕ್ರಮವನ್ನು ಭಾನುವಾರs ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಇಮಾಂ ಸಾಹೆಬರ ಹೆಸರನ್ನು ಹೊಂದಿರುವ ಶಾಲೆಯು ತಾಲ್ಲೂಕಿಗೆ ಮುಕುಟವಿದ್ದಂತೆ. ಅವರ ಹೆಸರಿನಲ್ಲಿ ನಡೆಯುವ ಈ ಶಾಲೆಯು ಗುಣ ಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇಲ್ಲಿ ಕಲಿತತಂತ 6 ಮಕ್ಕಳು ವೈದ್ಯಕೀಯ ಪದವಿಯನ್ನು ಆಭ್ಯಾಸಿಸುತ್ತಿದ್ದಾ ಜೊತೆಗೆ ಇತರೆ ವಿಭಾಗದಲ್ಲಿಯು ಮಕ್ಕಳು ಕಲಿಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಾನು ಹುಟ್ಟಿದ ಕ್ಷೇತ್ರದ ಕುಗ್ರಾಮ ಕಸವನಹಳ್ಳಿಯಲ್ಲಿ 250 ಮನೆಗಳಿರುವ ಗ್ರಾಮ ಇಲ್ಲಿಯು ಸಹ ವೈದ್ಯರು , ಇಂಜಿನಿಯರ್ ಗಳಾಗಿದ್ದಾರೆ. ಜೊತೆಗೆ ಸ್ಪರ್ದಾತ್ಮಕ ಕ್ಷೇತ್ರಗಳಲ್ಲಿ ತಮ್ಮ ಚಾಪನ್ನು ಮೂಡಿಸುತ್ತಿದ್ದಾರೆ. ಮಕ್ಕಳು ಕಲಿಕೆಯ ಜೊತೆಗೆ ಕ್ರಿಡೆಯಲ್ಲಿ ಆಸಕ್ತಿ ವಹಿಸ ಬೇಕು ಇದರಿಂದ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಲು ಸಹಕಾರಿಯಗಲಿದೆ ಎಂದು ಹೇಳಿದರು
ಬಿಇಓ ಯುವರಾಜನಾಯ್ಕ ಮಾತನಾಡಿ ಶಿಕ್ಷಣಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸಾಮಾನ್ಯವಾದ ವಿಷಯವಲ್ಲ. ಇದರ ಹಿಂದಿ ಶ್ರಮ ಬಹಳ ವಿರುತ್ತದೆ. ಸಂಸ್ಥೆಯಲ್ಲಿ ಶಿಕ್ಷಕರು ಮಕ್ಕಳಿಗೆ ಉನ್ನತವಾದ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು, ದೇಶ, ವಿದೇಶಕ್ಕೆ ಹೋಗಿ ಅಲ್ಲಿಯೇ ವಾಸವಾಗಿ ಪೋಷಕರು ಅನಾಥಾಶ್ರಮಕ್ಕೆ ಅಂತ್ಯದ ದಿನಗಳಲ್ಲಿ ಸೇರಿಸುತ್ತಿರುವುದನ್ನು ನಾವು ಕಣ್ಣಾರೆ ನೋಡಿದ್ದು, ಅಲ್ಲಿನ ಸ್ಥಿತಿ ದು:ಖ ತರಿಸಿದೆ. ಮಕ್ಕಳನ್ನು ನೌಕರಿ ಸಿಕ್ಕ ನಂತರ ತಂದೆ ತಾಯಿಗಳನ್ನು ತಮ್ಮ ಜೊತೆಯಲ್ಲೇ ಇಟ್ಟುಕೊಂಡು ಸಾಕುವ ಪರಿಪಾಠ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇಮಾಂ ಟ್ರಸ್ಟ್ ಅಧ್ಯಕ್ಷ ಹುಸೇನ್‍ಮಿಯ್ಯ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉದ್ದಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಸ್ಪರ್ದಿಸಿದ್ದ ರಾಘು.ಮತ್ತು ಎಸ್. ಮಹಮದ್ ಆಲಿಗೆ ಸನ್ಮಾನಿಸಲಾಯಿತು
ಈ ಸಂಧರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ಧೇಶಕ ಜೆ.ಎಸ್.ವೇಣುಗೋಪಾಲರೆಡ್ಡಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ಗಣಪತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್, ಆಂಗ್ಲ ಶಿಕ್ಷಕಿ ಎ.ಎಲ್. ನಾಗವೇಣಿ, ಉಪಾಧ್ಯಕ್ಷ ಖಾಸಿಂ ಆಲಿ ಸಾಬ್, ಸಂಸ್ಥೆಯ ಸದಸ್ಯ ಮಸ್ತಾನ್ , ಖಾಸಿಂ ಖಾನ್, ನೂರ್ ಪಾತಿಮಾ, ಮುನ್ನಾ , ದೈಹಿಕ ಪರಿವಿಕ್ಷಕರಾದ ವೆಂಕಟೇಶ್, ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ, ಶಿಕ್ಷಕಿ ಹಾಗೂ ತಾ.ಪಂ.ಸದಸ್ಯೆಯಾದ ಶಿಲ್ಪ, ಸುಜಾತ, ಸೇರಿದಂತೆ ಇತರರು ಸಮಾರಂಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ