ಮಧುಗಿರಿ :
ಇಂಗ್ಲೀಷ್ ಭಾಷೆ ಹುಟ್ಟುವ ನೂರು ವರ್ಷಕ್ಕೂ ಮೊದಲೆ ಕನ್ನಡ ಭಾಷೆ ತನ್ನ ಹಿಡಿತ ಸಾಧಿಸಿ ನೆಲ, ಜಲದೊಂದಿಗೆ ಬೆರೆತು ಹೋಗಿದೆ. ಅನ್ಯ ಭಾಷೆಯ ಸುನಾಮಿಯ ಹೊಡೆತದ ನಡುವೆಯೂ ಕನ್ನಡ ಭಾಷೆ ಇಂದಿಗೂ ತನ್ನ ತನವನ್ನು ಉಳಿಸಿಕೊಂಡು ಬಂದಿದೆ ಎಂದು ಉಪವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣಾದಲ್ಲಿ ತಾಲ್ಲೂಕು ಆಡಳಿತ ಹಾಗೂ ಕನ್ನಡ ರಾಜ್ಯೋತ್ಸವ ಸಮಿತಿಯ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣೆ ನೇರವೇರಿಸಿ ಮಾತನಾಡಿದರು ರಾಜ್ಯೋತ್ಸವದ ಶುಭ ಸಂಧರ್ಭದಲ್ಲಿ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ ಹಾಗೂ ಕನ್ನಡ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಮಹಾನೀಯರನ್ನು ನೆನೆಪಿಸಿ ಕೊಳ್ಳುಬೇಕಾಗಿದೆ.
ಕನ್ನಡ ಭಾಷೆ ಸಂಸ್ಕತಿಯನ್ನು ಪೋಷಿಸಿ ಬೆಳೆಸಿದ ಹಿಂದಿನ ಮೈಸೂರು ಸಂಸ್ಥಾನದ ಮಹರಾಜರು ಮತ್ತು ಕನ್ನಡ ಸಾಹಿತ್ಯದ ಮೂಲಕ ಜ್ಞಾನಪೀಠ ಪ್ರಶಸ್ತಿ ತಂದಕೊಟ್ಟಂತ ಪುರಸ್ಕತರನ್ನು ಸ್ಮರಿಸಿಕೊಳ್ಳಬೇಕಾಗಿದೆ ಕನ್ನಡ ಭಾಷೆಯ ಬೆಳವಣಿಗೆಗೆ ಕರ್ನಾಟಕ ರಾಜ್ಯದ ಪ್ರತಿಯೊಬ್ಬರು ಕೂಡ ಪಾಲುದಾರರಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವಿ.ವೀರಭದ್ರಯ್ಯ ನಾಡಧ್ವಜದ ಧ್ವಜಾರೋಹಣ ನೆವೇರಿಸಿ ಮಾತನಾಡಿ ಕನ್ನಡ ಏಕೀಕರಣವು ಇನ್ನೂ ಬಾಕಿ ಉಳಿದಿದೆ ಎಂಬುದು ನನ್ನ ಭಾವನೆಯಾಗಿದೆ ಕಾರಣ ಇಷ್ಟೆ ಇಂದೂ ಬೆಳಗಾಂ ನಲ್ಲಿನ ಎಂ.ಇ.ಎಸ್ ಸಂಘಟನೆಗಳ ಪುಂಡರು ಇಂದೂ ಬೆಳಗಾಂನ್ನು ಮಹರಾಷ್ಟ್ರ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕಾಸರಗೂಡಿನಲ್ಲಿ ಬಹುತೇಕ ಕನ್ನಡಿಗರಿದ್ದರೂ ಸಹ ಕಾಸರಗೂಡು ಕೇರಳದ ಅವಿಭಾಜ್ಯ ಅಂಗವಾಗಿದೆ ನಮ್ಮ ತಾಲ್ಲೂಕಿನ ನೆರೆಯ ಮಡಕಶಿರಾದಲ್ಲಿನ ನಾಗರೀಕರು ಕನ್ನಡವನ್ನೇ ಮಾತನಾಡುತ್ತಿದ್ದಾರೆ. ಕನ್ನಡದ ಏಕೀಕರಣ ಸಮಪರ್ಕವಾಗಿಲ್ಲ.ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇಂಗ್ಲೀಷ್ ಅಥವಾ ಇತರ ಭಾಷೆಗಳನ್ನು ಆಡುವ ಬದಲು ನಮ್ಮ ಕನ್ನಡವನ್ನು ಬಳಸಿದರೆ ಸಾಕು ಕನ್ನಡ ತನವನ್ನು ಉಳಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ತಿಮ್ಲಾಪುರ ಶಿವಣ್ಣ ಪ್ರಧಾನ ಭಾಷಣ ಮಾಡಿದರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 32 ಸಾಧಕರನ್ನು ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಇಇಗಳಾದ ಸುರೇಶ್ ಹಾಗೂ ತಿಪ್ಪೇಸ್ವಾಮಿ, ಡಿಡಿಪಿಐ ರವಿಶಂಕರರೆಡ್ಡಿ, ಡಿವೈಎಸ್ಪಿ ಧರಣೀಶ್, ಪುರಸಭಾ ಮುಖ್ಯಾಧಿಕಾರಿ ಲೋಹಿತ್, ಇಓ ಮೋಹನ್ ಕುಮಾರ್, ಬಿಇಓ ನರಸಿಂಹಯ್ಯ, ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ತಾಕನಿಪದ ಅಧ್ಯಕ್ಷ ಎನ್.ಶಿವದಾಸ್, ತಾಪಂ. ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಪುರಸಭಾ ಸದಸ್ಯರಾದ ತಿಮ್ಮರಾಯಪ್ಪ, ಎಂ.ಎಲ್.ಗಂಗರಾಜು, ಮಂಜುನಾಥ್, ಲಾಲೇಪೇಟೆ ಮಂಜುನಾಥ, ಎಂ.ಆರ್.ಜಗನ್ನಾಥ್, ಆರ್‍ಐ ಜಯರಾಮ್, ಮುಖಂಡ ಧನಪಾಲ್ ಹಾಗೂ ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ