ಚಿತ್ರದುರ್ಗ
ಪುಸ್ತಕವನ್ನು ಓದುವುದರಿಂದ ಮಾನಸಿಕವಾಗಿ ಸಧೃಢತೆಯನ್ನು ನೀಡುತ್ತದೆ, ಓದಿದ್ದು ಮನದಲ್ಲಿ ಉಳಿಯುತ್ತದೆ ಆದರೆ ನೋಡಿದ್ದು ಉಳಿಯುವುದು ಕಷ್ಟ ಎಂದು ಜಿ.ಪಂ. ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆಯ ಅಂಗವಾಗಿ ನಗರದ ಜ್ಞಾನಭಾರತಿ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಧವಳಗಿರಿ ಬಡಾವಣೆಯಲ್ಲಿ ಶಾಖಾ ಗ್ರಂಥಾಲಯ ಕಟ್ಟಡದ ನಿರ್ಮಾಣಕ್ಕೆ ಹಾಗೂ ಜಿಲ್ಲಾ ಗ್ರಂಥಾಲಯದ ನೂತನ ಕಚೇರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ದಿನ ಮಾನದಲ್ಲಿ ಮಾನವನ ತಲೆ ಬರಿದಾಗುತ್ತಿದೆ ಎಂದು ಅನಿಸುತ್ತಿದೆ ಏಕೆಂದರೆ ಓದುವುದು ಕಡಿಮೆಯಾಗಿದೆ ಇದರಿಂದ ಇಂದಿನ ದಿನಮಾನದಲ್ಲಿ ಮೊಬೈಲ್ ಹಾವಳಿಯಿಂದಾಗಿ ನೆನಪಿನ ಶಕ್ತಿ ಕಡಿಮೆಯಾಗಿತ್ತದೆ ಮುಂಚೆ ಹತ್ತಾರು ಅಂಕಿಗಳನ್ನು ವಿಷಯಗಳನ್ನು ನೆನಪಿನಲ್ಲಿ ಇಡುತ್ತಿದ್ದವರು ಈಗ ಏನಾದರೂ ನಂಬರ್ ಬೇಕೆಂದರೆ ಸಾಕು ಮೊಬೈಲ್‍ನ್ನು ಆಶ್ರಯಿಸುತ್ತೇವೆ ಎಂದ ಅವರು, ಎಲ್ಲವು ಕ್ಷಣಾರ್ಧದಲ್ಲಿಯೇ ಸಿಗಬೇಕಾದರೆ ಏಕೆ ಓದಬೇಕು ಎಂದು ಕೆಲವರ ಪ್ರಶ್ನೆಯಾಗಿದೆ ಆದರೆ ಓದಿದಾಗ ಬರುವ ಜ್ಞಾನ ನೋಡಿದಾಗ ಬರುವುದಿಲ್ಲ ಎಂದು ತಿಳಿಸಿದರು.
ಈ ಗ್ರಂಥಾಲಯ ಸಪ್ತಾಹದಲ್ಲಿ ಜನತೆಯಿಂದ ಮೊಬೈಲ್ ಬಿಡಿಸಿ ಸಾಧ್ಯವಾದಷ್ಟುಯ ಓದುವ ಕಡೆಗೆ ಕರೆದೂಯ್ಯಬೇಕಿದೆ, ಇಲ್ಲಿ ಇರುವ ಹಲವಾರು ಪುಸ್ತಕಗಳನ್ನು ಸ್ವಚ್ಚವಾದ ಕೈಯಿಂದ ಮುಟ್ಟಬೇಕಿದೆ ಏಕೆಂದರೆ ಅವುಗಳಿಗೆ ಅಷ್ಟೊಂದು ಪವಿತ್ರವಾಗಿದೆ ಸಂವಿಧಾನ ನಮ್ಮನ್ನು ಆಳುತ್ತಿದೆ ಮಕ್ಕಳಿಗೆ ಅಲ್ಲದೆ ಎಲ್ಲರು ಸಹಾ ಮಹಾಭಾರತ, ರಾಮಾಯಣ, ಬೈಬಲ್ ಕುರಾನ್‍ನಂತಹ ಪುಸ್ತಕಗಳನ್ನು ಓದುವುದರಿಂದ ಅದರಲ್ಲಿ ಏನು ಹೇಳಿದ್ಧಾರೆ ಎಂಬುದನ್ನು ತಿಳಿಯಬೇಕಿದೆ ಪುಸ್ತಕವನ್ನು ಓದುವುದರಿಂದ ಮಾನಸಿಕವಾಗಿ ಸಧೃಢತೆಯನ್ನು ನೀಡುತ್ತದೆ ಅಲ್ಲದೆ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಸೌಭಾಗ್ಯ ಹೇಳಿದರು.
ಈಗ ಶಂಕುಸ್ವಾಪನೆ ಮಾಡಿರುವ ಕಟ್ಟಡಗಳು ಮುಂದಿನ ಈ ಸಮಯಕ್ಕೆ ನಿರ್ಮಾಣ ಮಾಡಬೇಕು, ಅಲ್ಲದೆ ಗುಣಮಟ್ಟವನ್ನು ಕಾಪಾಡಬೇಕು ಇದರ ಬಗ್ಗೆ ಇಲ್ಲಿನ ನಾಗರೀಕರು ಸಹಾ ಆಗಾಗ ಭೇಟಿ ನೀಡುವುದರ ಮೂಲಕ ಪರಿಶೀಲಿಸುವಂತೆ ಮನವಿ ಮಾಡಿ, ಜನತೆಯೂ ಸಹಾ ತಮಗೆ ಬೇಕಾದ ಪುಸ್ತಕಗಳನ್ನು ಅಧಿಕಾರಿಗಳಿಂದ ತರಿಸಿಕೊಳ್ಳುವಂತೆ ಸೂಚಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಗ್ರಂಥಾಲಯಗಳ ಸ್ಥಾಪನೆಯಲ್ಲಿ ಮೈಸೂರು ಮಹಾರಾಜ ಮತ್ತು ಆವರ ಮನೆತನದ ಕೊಡುಗೆ ಅಪಾರ ಇದೆ. ಅವರು ತಮ್ಮ ಖರ್ಚಿನಲ್ಲಿ ಆಗ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಿದರು ನಂತರ ಸಂಸ್ಥೆ ಮತ್ತು ಸರ್ಕಾರ ಇದನ್ನು ಮುಂದುವರಿಸಿದ್ದ ಫಲವಾಗಿ ಇಂದು ಎಲ್ಲರಿಗೂ ಜ್ಞಾನ ಸಿಗುವಂತಾಗಿದೆ ಇದ್ದಲ್ಲದೆ ರಾಜ ಮನೆತನದವರು ಕೆ,ಆರ್.ಎಸ್ ಡ್ಯಾಂ ನಿರ್ಮಾಣ ಮಾಡುವಾಗಲೂ ಸಹಾ ರಾಣಿಯರು ತಮ್ಮ ಒಡವೆಗಳನ್ನು ಒತ್ತೆ ಇಡುವುದರ ಮೂಲಕ ಸಹಾಯ ಮಾಡಿದ್ದಾರೆ ಎಂದರು,
ಈಗ ಎಷ್ಟೇ ಪ್ರಮಾಣದಲ್ಲಿ ಮೋಬೈಲ್ ಬಂದರು ಸಹಾ ಗ್ರಂಥಾಲಯಗಳ ಬಳಕೆ ಮಾತ್ರ ಕಡಿಮೆಯಾಗಿಲ್ಲ, ಚಿತ್ರದುರ್ಗದಲ್ಲಿ ಮಕ್ಕಳಿಗೆ ಆಗತ್ಯವಾಗಿ ಬೇಕಾದ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ತರಿಸಿಕೊಡಿ ಇದರಿಂದ ಅನುಕೂಲವಾಗಲಿದೆ. ಹಿಂದಿನ ಕಾಲದಲ್ಲಿ ಗ್ರಂಥಾಲಯದ ಪ್ರಯೋಜನವನ್ನು ಪಡೆಯುವುದರ ಮೂಲಕ ಗಣ್ಯರಾಗಿದ್ಧಾರೆ. ಗ್ರಂಥಾಲಯಗಳನ್ನು ಸಹಾ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ನೂತನ ಕಟ್ಟಡ ಸುತ್ತಾ ಸಸಿಗಳನ್ನು ನಡೆವುದರ ಮೂಲಕ ಓದುಗರಿಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುವಂತೆ ತಿಳಿಸಿದರು.
ಜಿ.ಪಂ.ನ ಶಿಕ್ಷಣ, ಆರೋಗ್ಯ ಸಮಿತಿ ಅಧ್ಯಕ್ಷ ಡಾ;ಅನಂತ್, ಜಿ.ಪಂ.ಸದಸ್ಯರು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಆರ್.ನರಸಿಂಹರಾಜ, ನಗರಸಭೆ ಸದಸ್ಯರಾದ ಲಕ್ಷ್ಮಮ್ಮ, ತಾರಕೇಶ್ವರಿ, ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಪ್ರತಾಪ್‍ಜೋಗಿ, ಎನ್.ಜೆ.ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ್, ಲೆಕ್ಕ ಪರಿಶೋಧಕರಾದ ಶ್ರೀನಿವಾಸ್ ಭಾಗವಹಿಸಿದ್ದರು.
ಮೇಘನ ತಂಡ ನಾಡಗೀತೆ ಹಾಡಿದರೆ, ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಗೋಪಾಲ್ ವಂದಿಸಿದರು, ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ