ಬಿಬಿಎಂಪಿ ಸದಸ್ಯನನ್ನು ಬಂಧಿಸಲು ಆಗ್ರಹ

ಬೆಂಗಳೂರು

       ಕೊಳಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಬಿಬಿಎಂಪಿ ಸದಸ್ಯ ವೇಲು ನಾಯಕ್‍ನನ್ನು ಬಂಧಿಸಬೇಕೆಂದು ಆಗ್ರಹಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

       ಶೇಷಾದ್ರಿಪುರಂ ನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಪ್ರಧಾನ ಕಚೇರಿ ಮುಂಭಾಗ ಸೇರಿದ ಹಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಕೊಳಗೇರಿ ನಿವಾಸಿಗಳು, ಒಕ್ಕಲಿಬ್ಬಸಿ, ದೌರ್ಜನ್ಯ ವೆಸಗಿರುವ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾ ಯಿಸಿದರು

     ಶಾಸಕ ಮುನಿರತ್ನ ಹಿಂಬಾಲಕ ಹಾಗೂ ಬಿಬಿಎಂಪಿ ವಾರ್ಡ್ ಸದ್ಯಸ ವೇಲು ನಾಯಕ್ ಸೇರಿದಂತೆ ಕೆಲವರು ಏಕಾಏಕಿ, ನವೆಂಬರ್ 7 ರಂದು ಇಲ್ಲಿನ, ಲಗ್ಗೆರೆಯ ಜೈ ಭುವನೇಶ್ವರಿ ನಗರದಲ್ಲಿದ್ದ ಸ್ವೀಪರ್ ಕಾಲೋನಿ ಬಡ ನಿವಾಸಿಗಳ ಮನೆಗಳಿಗೆ ನುಗ್ಗಿ, ದೌರ್ಜನ್ಯ ವೆಸಗಿರುವುದಲ್ಲದೆ, ಒಕ್ಕಲಿಬ್ಬಿಸಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ದೂರಿದರು.

     ಬಡ ನಿವಾಸಿಗಳಿಗೆ ಸರ್ಕಾರವು ಮನೆಗಳನ್ನು ಹಂಚಿಕೆ ಮಾಡಿದೆ.ಆದರೆ, ಉದ್ದೇಶ ಪೂರಕವಾಗಿ ಬಿಬಿಎಂಪಿ ಸದ್ಯಸ ವೇಲುನಾಯಕ್ ಮತ್ತು ಆತನ ಸಹಚರರು, ಬಡ ನಿವಾಸಿಗಳ ಮೇಲೆ ದಾಳಿ ನಡೆಸಿದ್ದಾರೆ.ಜೊತೆಗೆ, ಸ್ಲಾಂ ಬೋರ್ಡ್ ನ ಕೆಲ ಅಧಿಕಾರಿಗಳು ಇವರೊಂದಿಗೆ ಶಾಮೀಲು ಆಗಿದ್ದಾರೆ.ಹಾಗಾಗಿ, ವೇಲುನಾಯಕ್ ನನ್ನು ಈ ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದರು.

      ಬೆಂಗಳೂರು ವ್ಯಾಪ್ತಿಯಲ್ಲಿನ ಸ್ಲಂ ನಿವಾಸಿಗಳಿಗೆ ಸಕಲ ಸೌಕರ್ಯಗಳುಳ್ಳ ಮನೆಗಳನ್ನು ನಿರ್ಮಿಸಬೇಕು. ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಶೀಘ್ರವಾಗಿ ಸ್ಲಂ ಜನರಿಗೆ ಸೂಕ್ತ ಪುನರ್ವಸತಿ ಸೌಕರ್ಯ ಕಲ್ಪಿಸಬೇಕಾಗಿರುವುದು ಅತ್ಯಂತ ಅವಶ್ಯವಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link