ಅಪಘಾತಕ್ಕೆ ಕಾರಣವಾದ ಅತಿವೇಗ…!

ಬೆಂಗಳೂರು: 
            ವೇಗದ ಕಾರು ಚಾಲನೆಯಿಂದ ನಿಯಂತ್ರಣ ತಪ್ಪಿ ಕಾರು ಅಪಘಾತ  ಸಂಭವಿಸಿದೆ ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ಬಾಳ ಮೇಲ್ಸೇತುವೆ ಮೇಲೆ ಮಂಗಳವಾರ ಮಧ್ಯಾಹ್ನ ನಡೆದಿದೆ. 
             ಕೆಂಪಾಪುರ ನಿವಾಸಿ ಸಚಿನ್ (20) ಮೃತ ವಿದ್ಯಾರ್ಥಿ. ಘಟನೆಯಲ್ಲಿ ಇಂಡಿಕಾ ಕಾರು ಚಾಲಕ ಅಪ್ಸರ್ (32) ಹಾಗೂ ಲಕ್ಷ್ಮೀ ವರದರಾಜ್ (61) ಎಂಬುವವರು ಗಾಯಗೊಂಡಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪರಡೆಯುತ್ತಿದ್ದಾರೆ. ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಚಿನ್, ನಿನ್ನೆ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 1.50ರ ಸುಮಾರಿಗೆ ಹೆಬ್ಬಾಳ ಮೇಲ್ಸೇತುವೆ ಮೇಲೆ ಕೊಡಿಗೇಹಳ್ಳಿ ಸಮೀಪ ವೇಗವಾಗಿ ಕಾರು ಚಾಲನೆ ಮಾಡಿದ್ದ ೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link