ಅಪಘಾತ ಮಾವ-ಸೊಸೆ ಪಾರು

ಬೆಂಗಳೂರು 

ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆಯುವುದನ್ನು ಸ್ಕೂಟರ್‍ನಿಂದ ದೂರ ಜಿಗಿದು ಸೊಸೆ-ಮಾವ ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ನೆಲಮಂಗಲ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿಯ ಕಾಳಿಪಾಳ್ಯದ ಪಲ್ಲವಿ(21) ಹಾಗೂ ರೇವಣ್ಣ(65)ಪಾರಾಗಿದ್ದಾರೆ,ಅಪಘಾತದಲ್ಲಿ ಬಲಗಾಲು ಮುರಿದಿರುವ ಪಲ್ಲವಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.

ನೆಲಮಂಗಲದಲ್ಲಿ ಬಾಳೆ ಕಾಯಿ ಮಾರಾಟ ಮಾಡಲು ಪಲ್ಲವಿ ಹಾಗೂ ಮಾವ ರೇವಣ್ಣ ಟಿವಿಎಸ್ ಎಕ್ಸ್‍ಎಲ್ ಸ್ಕೂಟರ್‍ನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಹಿಂದಿನಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮೇಲೆಯೇ ಬರತೊಡಗಿದೆ. ಅದರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಮುಂದಾದ ಇಬ್ಬರೂ ತಕ್ಷಣವೇ ಸ್ಕೂಟರ್ ಬಿಟ್ಟು ರಸ್ತೆ ಬದಿಗೆ ಜಿಗಿದಿದ್ದಾರೆ.ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದ್ದು ಸ್ಕೂಟರ್ ಮೇಲೆ ಲಾರಿ ಹರಿದು ಸಂಪೂರ್ಣ ಜಖಂಗೊಂಡಿದೆ.

ಸ್ಕೂಟರ್ ನಿಂದ ಜಿಗಿದ ಪರಿಣಾಮ ಪಲ್ಲವಿ ಅವರ ಬಲಗಾಲು ಮುರಿದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link