ಮೈಸೂರು ದಸರಾ ಮಹೋತ್ಸವಕ್ಕೆ ಯಶಸ್ವಿ ತೆರೆ

ಬೆಂಗಳೂರು

       ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಯಶಸ್ವಿಯಾಗಿ ತೆರೆಬಿದ್ದಿದೆ. ಜಂಬೂ ಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಲಕ್ಷಾಂತರ ಮಂದಿ ಪ್ರವಾಸಿಗರ ಕಣ್ಮಣಿಯಾಗಿದ್ದ ಕ್ಯಾಪ್ಟನ್ ಅರ್ಜುನ ಇದೀಗ ವಿಶ್ರಾಂತಿಯಲ್ಲಿದ್ದಾನೆ.

     ಅರ್ಜುನ ನೇತೃತ್ವದ ಗಜಪಡೆ ನಾಳೆ ಬೆಳಿಗ್ಗೆ 9:30ಕ್ಕೆ ಅರಮನೆಯಿಂದ ಕಾಡಿನೆಡೆಗೆ ಪ್ರಯಾಣ ಆರಂಭಿಸಲಿದೆ. ಹೀಗಾಗಿ ಇಂದು ಎಲ್ಲಾ ಆನೆಗಳಿಗೂ ನೀರಿನ ಮಜ್ಜನ ಮಾಡಿಸಲಾಯಿತು.

    ದಸರಾ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಅರ್ಜುನನ ಸಾರಥಿ ಮಾವುತ ವಿನು ತಾಯಿ ಚಾಮುಂಡೇಶ್ಚರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾನು ಅರ್ಜುನನಿಗೆ ಎರಡನೇ ಬಾರಿ ಸಾರಥಿಯಾಗಿ ಅಂಬಾರಿ ಮುನ್ನಡೆಸಿದ್ದು ಸಂತಸ ತಂದಿದೆ ಎಂದರು.

     ಈ ಮಧ್ಯೆ ದಸರಾ ಮಹೊತ್ಸವದ ಭಾಗವಾಗಿ ಆಯೋಜನೆಗೊಂಡಿದ್ದ ಸ್ತಬ್ದಚಿತ್ರ ಪ್ರದರ್ಶನದಲ್ಲಿ ನೀರು ಸಂರಕ್ಷಣೆ ಕುರಿತು ಕಾವೇರಿ ಜಲಮಂಡಳಿ ನಿರ್ಮಿಸಿದ್ದ ಸ್ತಬ್ದ ಚಿತ್ರಕ್ಕೆ ಮೊದಲ ಬಹುಮಾನ ದೊರೆತಿದೆ.

      ಚಿಕ್ಕಬಳ್ಳಾಪುರದ ವಿದುರಾಶ್ವತ್ಥಗೆ ಎರಡು ಮತ್ತು ಮಂಡ್ಯ ಜಿಲ್ಲೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ ಸ್ತಬ್ದ ಚಿತ್ರ ಮೂರನೇ ಸ್ಥಾನಗಳಿಸಿದೆ. ಧಾರವಾಡ ಜಿಲ್ಲೆ ಸ್ತಬ್ದ ಚಿತ್ರ ಮತ್ತು ಎನ್‍ಸಿಸಿ ಪ್ರದರ್ಶನಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap