ತುಮಕೂರು : ಇಂದು 63 ಹೊಸ ಸೋಂಕು

ತುಮಕೂರು

   ಜಿಲ್ಲೆಯಲ್ಲಿ ಶನಿವಾರ 63 ಕೊರೋನಾ ಪಾಸಿಟೀವ್ ಪ್ರಕರಣ ದೃಢಪಟ್ಟಿವೆ. ಕೊರೋನಾ ಮುಕ್ತರಾಗುವವರ ಸಂಖ್ಯೆಯೂ ಹೆಚ್ಚಿದ್ದು ನಿನ್ನೆ ಒಟ್ಟು 86 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1781 ಕ್ಕೆ ಏರಿಕೆಯಾಗಿದೆ.

    ಶನಿವಾರ ವರದಿಯಾದ ಒಟ್ಟು 63 ಪ್ರಕರಣಗಳಲ್ಲಿ ಎಂದಿನಂತೆ ತುಮಕೂರು ತಾಲ್ಲೂಕು ಅಧಿಕ ಸಂಖ್ಯೆಯ ಪ್ರಕರuಗಳನ್ನು ಹೊಂದಿದೆ. ತುಮಕೂರನಲ್ಲಿ-20 ಪಾವಗಡ ತಾಲ್ಲೋಕಿನಲ್ಲಿ 10 ಕುಣಿಗಲ್ 8 ಚಿ.ನಾ.ಹಲ್ಲಿ 7 ತುರುವೇಕೆರೆ 6 ಕೊರಟಗೆರೆ 5 ಗುಬ್ಬಿ 3 ಶಿರಾ 2 ಹಾಗೂ ಮಧುಗಿರಿ ಮತ್ತು ತಿ¥ಟೂರು ್ಲತಾಲ್ಲೂಕಿನಲ್ಲಿ 1 ಕೋವಿಡ್ ಪ್ರಕರಣ ದೃಢಪಟ್ಟಿವೆ. ನಿನ್ನೆ ಯಾವುದೇ ಸಾವು ವರದಿಯಾಗಿಲ್ಲ.

     ಈಲ್ಲೆಯಲ್ಲಿ ಈವರೆಗೆ ಒಟ್ಟು 1781 ಸೋಂಕಿತರಿದ್ದು ಅವರಲ್ಲಿ ಶನಿವಾರ 86 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, ಈವರೆಗೆ ಬಿಡುಗಡೆಯಾಗಿರುವವರ ಸಂಖ್ಯೆ 917 ಕ್ಕೆ ಏರಿಕೆಯಾಗಿದೆ. 810 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಶನಿವಾರ ವರದಿಯಾಗಿರುವ 63 ಸೋಂಕಿತರಲ್ಲಿ ಮೂವರು ಗರ್ಭಿಣಿ ಹಾಗು ಬಾಣಂತಿಯರು, 25 ಮಂದಿ ಸಿಂಪ್ಟಮ್ಯಾಟಿಕ್ 38 ಮಂದಿ ಎ ಸಿಂಪ್ಟಮ್ಯಾಟಿಕ್ 6 ಮಂದಿ ಪ್ರಥಮ ಹಂತದ ಸೋಂಕಿತರು ಇದ್ದಾರೆ. ಇವರಲ್ಲಿ ಪುರುಷರು 31 ಹಾಗು ಮಹಿಳೆಯರು 32 ಮಂದಿ ಇದ್ದಾರೆ. 5 ವರ್ಷದೊಳಗಿನ ಇಬ್ಬರು ಮಕ್ಕಳು 60 ವರ್ಷ ಮೇಲ್ಪಟ್ಟ 7 ಮಂದಿ ಸೇರಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 8 ಮಂದಿ ಐಸಿಯು ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ.

      ಶುಕ್ರವಾರದಂದು 101 ಮಂದಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿತ್ತು. ವರಮಹಾಲಕ್ಷ್ನಿ ಹಬ್ಬದ ದಿನವೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಂತರದ ದಿನಗಳಲ್ಲಿ ಮತ್ತು ಹೆಚ್ಚಳವಾಗುವ ಆತಂಕ ಎದುರಾಗಿತ್ತು. ಆದರೆ ಅಂತಹ ಆತಂಕವನ್ನು ಶನಿವಾರದ ವರದಿ ದೂರ ಮಾಡಿದೆ. ಇನ್ನೊಂದು ಸಮಾಧಾನಕರ ಸಂಗತಿ ಎಂದರೆ ಗುಣಮುಖರಾಗಿ ಬಿಡುಗಡೆಯಾಗಿರುವವರ ಸಂಖ್ಯೆಯೂ ಹೆಚ್ಚಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮಿ ಹಬ್ಬ ಹಾಗೂ ಬಕ್ರಿದ್ ಹಬ್ಬಗಳಂದು ನಿರ್ಬಂಧ ಕಾಪಾಡಿಕೊಳ್ಳಲು ಸೂಚಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link