ತುಮಕೂರು : ಇಂದು ಜಿಲ್ಲೆಯಲ್ಲಿ 105 ಹೊಸ ಪ್ರಕರಣ ಪತ್ತೆ

ತುಮಕೂರು

     ಅದೆಷ್ಟೇ ನಿಯಂತ್ರಣ ಕ್ರಮಗಳ ನಡುವೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ ಸೋಂಕು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇವೆ. ಶನಿವಾರ ನೂರು ಸಂಖ್ಯೆ ಮೀರಿದ್ದ ಕೋವಿಡ್ ಪಾಸಿಟೀವ್ ಮರುದಿನವೂ ನೂರು ಮೀರಿದೆ, ಭಾನುವಾರ 105 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1214ಕ್ಕೆ ಏರಿಕೆಯಾಗಿದೆ.

     ಭಾನುವಾರ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ, ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 42 ಮಂದಿ ಮೃತಪಟ್ಟಿದ್ದಾರೆ.ಭಾನುವಾರ ವರದಿಯಾದ 59 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 50 ಜನರಲ್ಲಿ ಕೋವಿಡ್ ವೈರಸ್ ಖಚಿತವಾಗಿದೆ. ಕುಣಿಗಲ್ ತಾಲ್ಲೂಕಿನಲ್ಲಿ 11, ಗುಬ್ಬಿ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ತಲಾ 9, ಮಧುಗಿರಿ ತಾಲ್ಲೂಕಿನಲ್ಲಿ 7, ತುರುವೇಕೆರೆ ತಾಲ್ಲೂಕಿನಲ್ಲಿ 6, ಪಾವಗಡ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ತಲಾ 5, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 2, ಶಿರಾ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿದೆ. ಇವರಲ್ಲಿ 55 ಪುರುಷರು, 51 ಮಹಿಳೆಯರು ಸೇರಿದ್ದಾರೆ. 60 ವರ್ಷ ವಯಸ್ಸಿನ ಮೇಲ್ಪಟ್ಟ 10 ಜನ ಇದ್ದಾರೆ.

     ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 1214 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 519, ಪಾವಗಡ ತಾ. 108, ಕುಣಿಗಲ್ ತಾ. 103, ಮಧುಗಿರಿ ತಾ. 99, ಶಿರಾ 83, ಚಿಕ್ಕನಾಯಕನಹಳ್ಳಿ ತಾ. 68, ಗುಬ್ಬಿ ತಾ. 66, ಕೊರಟಗೆರೆ ತಾ. 65, ತಿಪಟೂರು ತಾ. 55, ತುರುವೇಕೆರೆ ತಾ. 48 ಪ್ರಕರಣ ವರದಿಯಾಗಿವೆ.ಭಾನುವಾರ ಗುಣಮುಖರಾಗಿ ಆಸ್ಪತ್ರೆಯಿಂದ 28 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 612 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 560 ಸಕ್ರಿಯ ಪ್ರಕರಣಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap